Budha Guru Yuti In Meena Effect: ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿಯು ಈಗಾಗಲೇ ತನ್ನದೇ ಆದ ಮೀನಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೀಗ ನಿನ್ನೆ (ಮಾರ್ಚ್ 16) ಸಂಪತ್ತು, ಬುದ್ಧಿವಂತಿಕೆ, ತರ್ಕಕಾರಕನಾದ ಗ್ರಹಗಳ ರಾಜಕುಮಾರ ಬುಧ ಕೂಡ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ರೀತಿಯಾಗಿ ಮೀನ ರಾಶಿಯಲ್ಲಿ ಬುಧ-ಗುರು ಗ್ರಹಗಳ ಯುತಿ ಉಂಟಾಗಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಬುಧನ ಸಂಚಾರವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಇದೀಗ ಬುಧನು ಗುರುವಿನೊಟ್ಟಿಗೆ ಈ ರಾಶಿಯಲ್ಲಿ ಉಪಸ್ಥಿತನಿರುವುದರಿಂದ ಬುಧ-ಗುರು ಸಂಯೋಜನೆಯು ಕೆಲವು ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡಲಿದ್ದು, ಹಣದ ಮಳೆಯನ್ನೇ ಸುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.


ಮೀನ ರಾಶಿಯಲ್ಲಿ ಬುಧ-ಗುರು ಯುತಿಯಿಂದಾಗಿ ಈ ರಾಶಿಯವರಿಗೆ ಧನಾವೃಷ್ಟಿ:
ವೃಷಭ ರಾಶಿ: 

ಬುಧ-ಗುರು ಯುತಿ ಪರಿಣಾಮವಾಗಿ ವೃಷಭ ರಾಶಿಯವರಿಗೆ ಹಠಾತ್ ಧನಲಾಭ ಸಾಧ್ಯತೆ ಇದೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿಗೆ ಸಂಬಂಧಿಸಿದ ಇಷ್ಟು ದಿನಗಳ ನಿಮ್ಮ ತೊಂದರೆಗಳು ಅಂತ್ಯ ಕಾಣಲಿವೆ. 


ಇದನ್ನೂ ಓದಿ- ಈ 3 ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಹಿಂದೆಂದೂ ಕಂಡಿರದಷ್ಟು ಅಪಾಯ ಎದುರಾಗಲಿದೆ: ಈ ಜನರ ಪ್ರಾಣಕ್ಕೂ ಇದೆ ಕುತ್ತು!


ಮಿಥುನ ರಾಶಿ:
ಬುಧ-ಗುರು ಸಂಯೋಜನೆಯಿಂದ ಈ ರಾಶಿಯವರು ತಮ್ಮ ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಪಡೆಯಬಹುದು. ವಿತ್ತೀಯ ಲಾಭವಾಗಲಿದ್ದು, ಇದರಿಂದ ಜೀವನದಲ್ಲಿ ಭೌತಿಕ ಸುಖ-ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ. 


ಕನ್ಯಾ ರಾಶಿ:
ಬುಧ-ಗುರು ಯುತಿ ಪರಿಣಾಮವಾಗಿ ಕನ್ಯಾ ರಾಶಿಯವರಿಗೆ ಬಂಪರ್ ಆರ್ಥಿಕ ಲಾಭ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯದಿಂದ ನಿಮ್ಮ ವ್ಯವಹಾರವನ್ನು ವಿಸ್ತರಿಸುವ ಕನಸು ನನಸಾಗಲಿದೆ. 


ಧನು ರಾಶಿ:
ಧನು ರಾಶಿಯವರಿಗೆ ಬುಧ-ಗುರು ಸಂಯೋಜನೆಯಿಂದಾಗಿ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ತುಂಬಾ ಶುಭಕರ ಫಲಗಳು ಲಭ್ಯವಾಗಲಿವೆ. ಪ್ರಮೋಷನ್ ಸಾಧ್ಯತೆ ಇದ್ದು ಪ್ರಸ್ತುತ ಕೆಲಸದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. 


ಇದನ್ನೂ ಓದಿ- Surya Grahan 2023: ವರ್ಷದ ಮೊದಲ ಸೂರ್ಯಗ್ರಹಣದಿಂದ ಅಲ್ಲೋಲ ಕಲ್ಲೋಲವಾಗುತ್ತೆ ಈ ರಾಶಿಯವರ ಜೀವನ!


ಮೀನ ರಾಶಿ:
ಸ್ವ ರಾಶಿಯಲ್ಲೇ ಬುಧ-ಗುರು ಸಂಯೋಜನೆ ನಡೆದಿದ್ದು ಇದು ಮೀನ ರಾಶಿಯವರ ವೃತ್ತಿ ಜೀವನದ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದ್ದು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಇದರ ಪರಿಣಾಮ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.