Surya Budh Gochar in Mithun 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಬುಧ ಒಟ್ಟಿಗೆ ಸಂಯೋಜನೆಗೊಂಡಾಗ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ. ಇದೀಗ ಜೂನ್ 15ರಂದು ಸೂರ್ಯಾದೆವನು ಮಿಥುನ ರಾಶಿಗೆ ಪದಾರ್ಪಣೆ ಮಾಡಿದ್ದು ಜೂನ್ 24, 2023 ರಂದು ಬುಧ ಕೂಡ ಇದೇ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದಾಗಿ ಮಿಥುನ ರಾಶಿಯಲ್ಲಿ ಶುಭಕರ ಬುಧಾದಿತ್ಯ ರಾಜಯೋಗವು ನಿರ್ಮಾಣವಾಗುತ್ತಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರಿಗೆ ಬಹಳ ಮಂಗಳಕರ ಸಮಯ ಎಂದು ಬಣ್ಣಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯದ ಪ್ರಕಾರ, ಮಿಥುನ ರಾಶಿಯಲ್ಲಿ ನಿರ್ಮಾಣವಾಗಲಿರುವ ಬುಧಾದಿತ್ಯ  ರಾಜಯೋಗವು ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಅಪಾರ ಧನವೃಷ್ಟಿ ಆಗಲಿದೆ ಎಂದು ಹೇಳಲಾಗುತ್ತಿದೆ.  ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಯಶಸ್ಸಿನ ಜೊತೆ ಧನ ವೃಷ್ಟಿ: 
ವೃಷಭ ರಾಶಿ: 

ಬುಧ ಮತ್ತು ಆದಿತ್ಯರಿಂದ ನಿರ್ಮಾಣವಾಗಿರುವ ಶುಭಕರ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಫಲಪ್ರದವಾಗಿದೆ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ದಿಢೀರ್ ಹಣ ಪ್ರಾಪ್ತಿಯಾಗಲಿದ್ದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಾತ್ರವಲ್ಲ, ಸ್ವ ವ್ಯವಹಾರ ಮಾಡುವವರಿಗೆ ಇದು ಅತ್ಯಂತ ಮಂಗಳಕರ ಸಮಯವಾಗಿದೆ. ಹೊಸ ಜನರೊಂದಿಗೆ ಸಂಪರ್ಕ ಬೆಸೆಯಲಿದ್ದು ಇದು ನಿಮ್ಮ ಬಿಸಿನೆಸ್ ನಲ್ಲಿ ಲಾಭದಾಯಕ ಎಂದು ಸಾಬೀತುಪಡಿಸಲಿದೆ. 


ಇದನ್ನೂ ಓದಿ- Shani Vakri ಅಶುಭ ಪರಿಣಾಮವನ್ನು ತಪ್ಪಿಸಲು ತಪ್ಪದೇ ಈ ಪರಿಹಾರ ಕೈಗೊಳ್ಳಿ


ಮಿಥುನ ರಾಶಿ: 
ಸ್ವ ರಾಶಿಯಲ್ಲೇ ಇನ್ನೆರಡು ದಿನಗಳಲ್ಲಿ ನೀರ್ಮಾನವಾಗಲಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯ ಸ್ಥಳೀಯರಿಗೆ ಅಧಿಕ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದ್ದು ನಿಮ್ಮ ವಾಕ್ ಚಾತುರ್ಯದಿಂದಾಗಿ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಹಣವು ಪ್ರಯೋಜನಕಾರಿ ಆಗಿದ್ದು ನೀವು ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿದ್ದರೆ ಇದು ಶುಭ ಸಮಯವಾಗಿದೆ. 


ಇದನ್ನೂ ಓದಿ- Sun Transit: ಈ ರಾಶಿಯವರಿಗೆ ಸರ್ಕಾರಿ ನೌಕರಿ ಸಾಧ್ಯತೆ, ನಿಮ್ಮ ರಾಶಿ ಫಲ ಹೇಗಿದೆ?


ತುಲಾ ರಾಶಿ: 
ಸೂರ್ಯ ಮತ್ತು ಬುಧನ ಸಂಯೋಜನೆಯಿಂದ ರೂಪುಗೊಂಡಿರುವ ಬುಧಾದಿತ್ಯ ರಾಜಯೋಗವು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ಈ ವೇಳೆ ನಿಮ್ಮೆಲ್ಲಾ ಕೆಲಸಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಉದ್ಯೋಗದಲ್ಲಿ ಇನ್‌ಕ್ರಿಮೆಂಟ್ , ಬಡ್ತಿ ದೊರೆಯುವ ದಟ್ಟ ಅವಕಾಶಗಳಿವೆ. ಕುಟುಂಬದಲ್ಲಿ ನೀವು ಬಹಳ ದಿನಗಳಿಂದ ಯೋಜಿಸುತ್ತಿದ್ದ ಮಂಗಳ ಕಾರ್ಯಗಳು ನೆರವೇರುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ