Shani Vakri: ನ್ಯಾಯದ ದೇವರು ಶನಿಯ ಹಿಮ್ಮುಖ ಚಲನೆ ಆರಂಭವಾಗಿ. ಹಿಮ್ಮುಖವಾಗಿರುವ ಶನಿ ಹೆಚ್ಚು ಪ್ರಭಾವಶಾಲಿ ಆಗಿರುವುದರಿಂದ ಇದು ಕೆಲವು ರಾಃಶಿಯವರಿಗೆ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಬಹುದು. ಆದರೆ, ನಿತ್ಯ ಒಂದು ಸಿಂಪಲ್ ಪರಿಹಾರ ಕೈಗೊಳ್ಳುವುದರಿಂದ ಹಿಮ್ಮುಖ ಶನಿಯ ಅಶುಭ ಪರಿಣಾಮದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸ್ವ ರಾಶಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿರುವ ಶನಿ ಮುಂದಿನ ನವೆಂಬರ್ 4, 2023ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಾಮಾನ್ಯಕ್ಕಿಂತ ಶನಿ ದೇವನು ಹಿಮ್ಮುಖ ಸ್ಥಿತಿಯಲ್ಲಿ ಹೆಚ್ಚು ಶಕ್ತಿಶಾಲಿ ಆಗಿರುತ್ತಾನೆ ಎಂದು ಹೇಳಲಾಗುತ್ತದೆ.
ಶನಿಯ ವಕ್ರ ನಡೆಯಿಂದ ಈ ರಾಶಿಯವರಿಗೆ ಲಾಭ: ಶನಿಯ ವಕ್ರ ನಡೆಯಿಂದ ವೃಷಭ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ನಾನಾ ರೀತಿಯ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.
ಶನಿ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಸಂಕಷ್ಟ: ಶನಿಯ ಹಿಮ್ಮುಖ ಚಲನೆ ಇನ್ನೂ ಕೆಲವು ರಾಶಿಯಾಯಾವರಿಗೆ ಎಂದರೆ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಕುಂಭ ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ಹಾನಿ ಉಂಟುಮಾಡಬಹುದು. ಮಾತ್ರವಲ್ಲದೆ, ಮಾನಸಿಕ ಒತ್ತಡವನ್ನೂ ಹೆಚ್ಚಿಸಬಹುದು.
ವಕ್ರೀ ಶನಿಯಿಂದ ಮುಕ್ತಿಗಾಗಿ ಪರಿಹಾರ: ಪ್ರತಿನಿತ್ಯ ಹನುಮನನ್ನು ಪೂಜಿಸುವುದರಿಂದ ಆತನ ಮಂತ್ರಗಳನ್ನು ಪಠಿಸುವುದರಿಂದ ವಕ್ರೀ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ.
ಶನಿವಾರದ ದಿನ ಈ ಪರಿಹಾರ ಕೈಗೊಳ್ಳಿ: ಇದಲ್ಲದೆ, ಶನಿವಾರದ ದಿನ ಸಾಸಿವೆ ಎಣ್ಣೆಯಲ್ಲಿ ಮುಖವನ್ನು ನೋಡಿ ಅದನ್ನು ಯಾರಿಗಾದರೂ ದಾನ ಮಾಡಿ. ಮಾತ್ರವಲ್ಲದೆ, ಶನಿವಾರ ಸಂಜೆ ವೇಳೆ ಅರಳಿ ಮರದ ಕೇಳದೆ ಎಳ್ಳೆಣ್ಣೆ ದೀಪವನ್ನು ಹಚ್ಚಿ ಶನಿ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದಲೂ ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ಪಡೆಯಬಹುದು ಎನ್ನಲಾಗುವುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.