Guru Rahu Yuti Effect: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಪ್ರತಿ ಗ್ರಹವೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ಪಥವನ್ನು ಬದಲಾಯಿಸುತ್ತದೆ. ಗ್ರಹಗಳು ತಮ್ಮ ಸ್ಥಾನ ಮತ್ತು ನಕ್ಷತ್ರಪುಂಜಗಳ ದಿಕ್ಕನ್ನು ಬದಲಾಯಿಸಿದಾಗಲೆಲ್ಲಾ ಅದರ ಶುಭ ಅಶುಭ ಪರಿಣಾಮಗಳು ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಪ್ರಸ್ತುತ, ದೇವ-ದೇವತೆಗಳ ಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿ ಹಾಗೂ ಕ್ರೂರ ಗ್ರಹ ಎಂದು ಕರೆಯಲ್ಪಡುವ ರಾಹು ಇಬ್ಬರೂ ಕೂಡ ಮೇಷ ರಾಶಿಯಲ್ಲಿ ಒಟ್ಟಿಗೆ ಕುಳಿತಿದ್ದಾರೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿ ಮತ್ತು ಚಂಡಾಲ್ ಎಂದು ಕರೆಯಲ್ಪಡುವ ರಾಹು ಈ ಇಬ್ಬರ ಸಂಯೋಜನೆಯಿಂದ ಗುರು ಚಂಡಾಲ್ ರಾಜಯೋಗವು ನಿರ್ಮಾಣವಾಗುತ್ತಿದೆ. ಈ ಗುರು ಚಂಡಾಲ ರಾಜಯೋಗದಿಂದಾಗಿ 3 ರಾಶಿಯ ಜನರ ಜೀವನದಲ್ಲಿ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗುತ್ತಿದ್ದು ಇವರು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಛಾಯಾ ಗ್ರಹ ರಾಹು ಅಕ್ಟೋಬರ್ 30, 2023ರಂದು ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಬಳಿಕವಷ್ಟೇ ಈ ರಾಶಿಯವರಿಗೆ ತಮ್ಮ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...
ಇದನ್ನೂ ಓದಿ- Surya Gochara: ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ- ಈ ರಾಶಿಯವರಿಗೆ ಧನ ಯೋಗ
ಗುರು-ರಾಹು ಯುತಿ ಎಫೆಕ್ಟ್: ಅಕ್ಟೋಬರ್ 30ರವರೆಗೆ ಈ 3 ರಾಶಿಯವರು ಭಾರೀ ನಷ್ಟ ಸಾಧ್ಯತೆ:-
ಮೇಷ ರಾಶಿ:
ವೈದಿಕ ಜ್ಯೋತಿಷ್ಯದ ಪ್ರಕಾರ, ಸ್ವ ರಾಶಿಯಲ್ಲಿಯೇ ಗುರು ಚಂಡಾಲ ರಾಜಯೋಗದ ಸೃಷ್ಟಿಯಿಂದಾಗಿ ಈ ರಾಶಿಯ ಜನರು ವ್ಯಾಪಾರ-ವ್ಯವಹಾರದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ವಿವಾದವನ್ನು ಕೂಡ ಎದುರಿಸಬೇಕಾಗಬಹುದು. ಹೂಡಿಕೆಯಲ್ಲೂ ಕೈ ಸುಟ್ಟಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ.
ಮಿಥುನ ರಾಶಿ:
ಗುರು ಚಂಡಾಲ ರಾಜ್ಯಯೋಗವು ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗಲಿದೆ ಎಂದು ತೋರುತ್ತದೆ. ಇದಲ್ಲದೆ, ಯಾವುದೇ ರೀತಿಯ ವ್ಯಾಜ್ಯಗಳಿದ್ದರೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ನಿಮ್ಮ ವಿರುದ್ಧ ಬರಬಹುದು. ಸ್ವಂತ ಮನೆ ಕಟ್ಟುವ ಆಸೆ ಇರುತ್ತದೆ, ಆದರೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ವೃತ್ತಿಜೀವನದ ಜೊತೆಗೆ, ನೀವು ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕಠಿಣ ಮಾತೇ ನಿಮಗೆ ಶತ್ರುವಾಗಿರುವುದರಿಂದ ಸಾಧ್ಯವಾದಷ್ಟು ನಿಮ್ಮ ನಾಳಿಗೆಗೆ ಕಡಿವಾಣ ಹಾಕಿ, ತಾಳ್ಮೆಯಿಂದ ಇದ್ದರೆ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು.
ಇದನ್ನೂ ಓದಿ- Shani Vakri: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭರ್ಜರಿ ಧನ ಲಾಭ ನೀಡಲಿದ್ದಾನೆ ವಕ್ರೀ ಶನಿ
ಧನು ರಾಶಿ:
ಗುರು-ರಾಹು ಯುತಿಯಿಂದ ನೀರ್ಮಾನವಾಗಲಿರುವ ಗುರು ಚಂಡಾಲ ರಾಜಯೋಗವು ಧನು ರಾಶಿಯವರಿಗೂ ಸಹ ಅಶುಭಕರವಾಗಿ ಪರಿಣಮಿಸಲಿದೆ. ಈ ಸಮಯದಲ್ಲಿ ಧನು ರಾಶಿಯವರ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿದ್ದು ಇದು ನಿಮ್ಮ ಬಜೆಟ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಮಕ್ಕಳ ನಡವಳಿಕೆಯಿಂದ ಉದ್ವೇಗ ಹೆಚ್ಚಾಗಳಿದ್ದು, ಭವಿಷ್ಯದ ಆತಂಕಗಳು ನಿಮ್ಮನ್ನು ತೊಂದರೆಗೊಳಿಸುತ್ತವೆ. ಕುಟುಂಬದ ಸದಸ್ಯರ ಆರೋಗ್ಯ ಕಾಳಜಿಯ ವಿಷಯವಾಗಿದೆ. ಇದಲ್ಲದೆ, ಚಾಲನೆ ಮಾಡುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ವೇಗದ ಚಾಲನೆಯನ್ನು ತಪ್ಪಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.