ಬೆಂಗಳೂರು : ಸನಾತನ ಧರ್ಮದ ಪ್ರಕಾರ ತಿಂಗಳು, ಸಮಯ ಮತ್ತು ದಿನಾಂಕಗಳನ್ನು ನೋಡಿ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ.  ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ, ಡಿಸೆಂಬರ್ 16 ರಿಂದ ಧನುರ್ಮಾಸ ಆರಂಭವಾಗಿತ್ತು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಮಾಸದಲ್ಲಿ  ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಜನವರಿ 14  2023 ರಂದು ಈ ಮಾಸ ಕೊನೆಯಾಗಲಿದೆ. ಧನುರ್ಮಾಸ ಕೊನೆಯಾಗುತ್ತಿದ್ದಂತೆಯೇ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಕೂಡಾ ಆರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ :
ಮೇಷ ರಾಶಿಯವರಿಗೆ ಧನು ಮಾಸದ ಕೊನೆಯ 8 ದಿನಗಳು ಶುಭಕರವಾಗಿರಲಿವೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ, ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಇರುತ್ತದೆ.


ಇದನ್ನೂ ಓದಿ February 13 ರಂದು ಮತ್ತೆ ನಿರ್ಮಾಣಗೊಳ್ಳಲಿದೆ ಶನಿ ಸೂರ್ಯರ ಸಂಯೋಜನೆ, ಈ ರಾಶಿಗಳ ಜನರಿಗೆ ಪ್ರಬಲ ಲಾಭ


ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಕೂಡಾ ಈ ಮಾಸದ ಕೊನೆಯ ದಿನಗಳು ಲಾಭದಾಯಕವೆಂದು ಸಾಬೀತಾಗಲಿದೆ. ಈ ಸಮಯದಲ್ಲಿ, ಕೈ ಹಾಕುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಗೌರವ ಹೆಚ್ಚಾಗುವುದು. ಈ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿದೆ. 


ಧನು ರಾಶಿ :
ಬಹಳ ದಿನಗಳಿಂದ ನೆರವೇರದೆ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಜೀವನದಲ್ಲಿ ಯಶಸ್ಸು ಕೈ ಹಿಡಿಯುತ್ತದೆ. ಆದರೂ ಈ ಸಮಯದಲ್ಲಿ ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಬಹುದು. ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. 


ಇದನ್ನೂ ಓದಿ : Dustbin Vastu Tips: ತಪ್ಪಾಗಿಯೂ ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಡಿ


ಮೀನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯವರು ಈ ಸಮಯದಲ್ಲಿ ಕುಟುಂಬದಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಹಿರಿಯರೊಂದಿಗಿನ ಸಂಬಂಧವು ಉತ್ತಮವಾಗಿರಲಿದೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.