Guru Chandala Yoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ರಾಶಿಗಳು ಸಂಧಿಸಿದಾಗ ಕೆಲವು ಶುಭ-ಅಶುಭ ಯೋಗಗಳು ನಿರ್ಮಾಣಗೊಳ್ಳುತ್ತವೆ. ಇದೀಗ 22 ಏಪ್ರಿಲ್ 2023ರಂದು ದೇವಗುರು ಬೃಹಸ್ಪತಿ ಮೇಷ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರೊಂದಿಗೆ ಈ ರಾಶಿಯಲ್ಲಿ ಚತುರ್ಗಾಹಿ ಯೋಗ ನಿರ್ಮಾಣವಾಗಲಿದೆ. ಪ್ರಸ್ತುತ ಅಸ್ತಮ ಸ್ಥಿತಿಯಲ್ಲಿರುವ ಗುರುವು 27 ಏಪ್ರಿಲ್ 2023ರಂದು ಮೇಷ ರಾಶಿಯಲ್ಲಿಯೇ ಉದಯಿಸಲಿದ್ದಾನೆ, ಈ ಸಂದರ್ಭದಲ್ಲಿ ಗುರು ರಾಹು ಯುತಿಯಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗಲಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮೇಷ ರಾಶಿಯಲ್ಲಿ ಗುರು-ರಾಹು ಸಂಯೋಗದಿಂದ ಸೃಷ್ಟಿಯಾಗಲಿರುವ ಗುರು ಚಂಡಾಲ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭದಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. 


ಮೇಷ ರಾಶಿಯಲ್ಲಿ ಗುರು-ರಾಹು ಮೈತ್ರಿಯಿಂದ ಗುರು ಚಂಡಾಲ ಯೋಗ, ಈ ರಾಶಿಯವರ ಜೀವನದಲ್ಲಿ ಸಂಕಷ್ಟ: 
ಮೇಷ ರಾಶಿ:

ಸ್ವ ರಾಶಿಯಲ್ಲಿಯೇ ನಿರ್ಮಾಣವಾಗಲಿರುವ ಗುರು ಚಂಡಾಲ ಯೋಗವು ಈ ರಾಶಿಯವರ ವೃತ್ತಿ ವ್ಯವಹಾರದಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಲಿದ್ದಾನೆ. ಇದರಿಂದಾಗಿ ಈ ರಾಶಿಯವರು ಭಾರೀ ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇರುವುದರಿಂದ ಒತ್ತಡವೂ ಹೆಚ್ಚಾಗಬಹುದು.


ಇದನ್ನೂ ಓದಿ- ಈ ದಿನ ಕಪ್ಪು ಶ್ವಾನಕ್ಕೆ ಆಹಾರ ನೀಡಿದರೆ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ ಶನಿ ದೇವ


ಕರ್ಕಾಟಕ ರಾಶಿ: 
ಗುರು ಚಂಡಾಲ ಯೋಗ ನಿರ್ಮಾಣದಿಂದಾಗಿ ಕರ್ನಾಟಕ ರಾಶಿಯವರು ಉದ್ಯೋಗ ರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ನಿಮ್ಮ ಕೀರ್ತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯೂ ಇದ್ದು, ಇದು ನಿಮ್ಮ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.


ಕನ್ಯಾ ರಾಶಿ: 
ಈ ತಿಂಗಳಾಂತ್ಯದಲ್ಲಿ ಸೃಷ್ಟಿಯಾಗಲಿರುವ ಗುರು ಚಂಡಾಲ ಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಲಿದೆ. ಇದು ನಿಮ್ಮ ವೃತ್ತಿ, ವ್ಯವಹಾರ ಮಾತ್ರವಲ್ಲದೆ ವೈಯಕ್ತಿಯ ಜೀವನದಲ್ಲೂ ಭಾರೀ ಬಿಕ್ಕಟ್ಟಿನ ಸಮಯ ಎಂತಲೇ ಹೇಳಬಹುದು. 


ಇದನ್ನೂ ಓದಿ- ಸೂರ್ಯ ಗ್ರಹಣದಂದು ಮಂಗಳ-ಬುಧರ ಖತರ್ನಾಕ್ ಸಂಯೋಗ, ಈ ರಾಶಿಯವರಿಗೆ ಸಂಕಷ್ಟ


ಮಕರ ರಾಶಿ: 
ಗುರು-ರಾಹು ಯುತಿಯಿಂದ ಸೃಷ್ಟಿಯಾಗಲಿರುವ ಗುರು ಚಂಡಾಲ ಯೋಗವು ಮಕರ ರಾಶಿಯವರ ಕೌಟುಂಬಿಕ ಜೀವನದಲ್ಲಿ ಕಲಹವನ್ನುಂಟು ಮಾಡಬಹುದು. ಇದು ನಿಮ್ಮ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಮೌನವಾಗಿರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.