ಸೂರ್ಯ ಗ್ರಹಣದಂದು ಮಂಗಳ-ಬುಧರ ಖತರ್ನಾಕ್ ಸಂಯೋಗ, ಈ ರಾಶಿಯವರಿಗೆ ಸಂಕಷ್ಟ

Mangal Budh Yuti On Surya Grahan: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹನಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲಿ ಈ ವರ್ಷದ ಮೊದಲ ಸೂರ್ಯ ಗ್ರಹಣದ ದಿನ ಶರ್ತು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿವೆ. ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಅಮಂಗಳಕರ ಎಂದು ಬಣ್ಣಿಸಲಾಗುತ್ತಿದೆ. 

Written by - Yashaswini V | Last Updated : Apr 18, 2023, 09:16 AM IST
  • 20 ಏಪ್ರಿಲ್ 2023ರ ಸೂರ್ಯ ಗ್ರಹಣದ ದಿನ ಮಂಗಳನು ಬುಧ ಗ್ರಹದ ಚಿಹ್ನೆಯಾದ ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ.
  • ಈ ದಿನ ಗ್ರಹಗಳ ರಾಜಕುಮಾರನಾದ ಬುಧನು ಮಂಗಳನ ರಾಶಿಚಕ್ರ ಚಿಹ್ನೆಯಾದ ಮೇಷ ರಾಶಿಯಲ್ಲಿ ಇರುತ್ತಾನೆ.
  • ಇದರಿಂದಾಗಿ ರಾಶಿ ಬದಲಾವಣೆ ಯೋಗ ಸೃಷ್ಟಿಯಾಗುತ್ತಿದ್ದು ಇದನ್ನು ಕೆಲವು ರಾಶಿಯವರಿಗೆ ತುಂಬಾ ಅಮಂಗಳಕಾರ ಎಂದು ಹೇಳಲಾಗುತ್ತಿದೆ.
ಸೂರ್ಯ ಗ್ರಹಣದಂದು ಮಂಗಳ-ಬುಧರ ಖತರ್ನಾಕ್ ಸಂಯೋಗ, ಈ ರಾಶಿಯವರಿಗೆ ಸಂಕಷ್ಟ  title=
Mangal Budh Yuti On Surya Grahan

Mars Mercury Yuti On Solar Eclipse: ಪ್ರಮುಖ ಖಗೋಳ ವಿದ್ಯಮಾನಗಳಾದ ಸೂರ್ಯ ಗ್ರಹಣ, ಚಂದ್ರ ಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಈ ವರ್ಷ 20 ಏಪ್ರಿಲ್ 2023ರಂದು ವರ್ಷದ ಮೊದಲ ಸೂರ್ಯ ಗ್ರಹಣ ಮೇಷ ರಾಶಿಯಲ್ಲಿ ಸಂಭವಿಸುತ್ತಿದೆ. ಇದೇ ದಿನ ಶತ್ರು ಗ್ರಹಗಳಾದ ಮಂಗಳ-ಬುಧ ಯುತಿ ನಿರ್ಮಾಣವಾಗಲಿದೆ. 

ವಾಸ್ತವವಾಗಿ, 20 ಏಪ್ರಿಲ್ 2023ರ ಸೂರ್ಯ ಗ್ರಹಣದ ದಿನ ಮಂಗಳನು ಬುಧ ಗ್ರಹದ ಚಿಹ್ನೆಯಾದ ಮಿಥುನದಲ್ಲಿದ್ದರೆ, ಗ್ರಹಗಳ ರಾಜಕುಮಾರನಾದ ಬುಧನು ಮಂಗಳನ ರಾಶಿಚಕ್ರ ಚಿಹ್ನೆಯಾದ ಮೇಷ ರಾಶಿಯಲ್ಲಿ ಇರುತ್ತಾನೆ. ಇದರಿಂದಾಗಿ ರಾಶಿ ಬದಲಾವಣೆ ಯೋಗ ಸೃಷ್ಟಿಯಾಗುತ್ತಿದ್ದು ಇದನ್ನು ಕೆಲವು ರಾಶಿಯವರಿಗೆ ತುಂಬಾ ಅಮಂಗಳಕಾರ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ 5 ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ ಎಂದು ಹೇಳಲಾಗಿದೆ. ಹಾಗಿದ್ದರೆ, ಈ ವೇಳೆ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ತಿಳಿಯೋಣ... 

ಸೂರ್ಯ ಗ್ರಹಣದಂದು ಶತ್ರು ಗ್ರಹಗಳ ಸಂಯೋಗ, ಈ 5 ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ:-
ಮೇಷ ರಾಶಿ:

ಸೂರ್ಯ ಗ್ರಹಣದಂದು ಶತ್ರು ಗ್ರಹಗಳ ಯುತಿಯು ಮೇಷ ರಾಶಿಯವರ ಆತ್ಮವಿಶ್ವಾಸವನ್ನು ಕಡಿಮೆ ಮಾಡಲಿದೆ. ಈ ಸಮಯದಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೀಳುಕುವ ಸಾಧ್ಯತೆ ಇರುವುದರಿಂದ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿ. 

ಇದನ್ನೂ ಓದಿ- Akshaya Tritiya 2023: ತಾಯಿ ಮಹಾಲಕ್ಷ್ಮೀ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ

ವೃಷಭ ರಾಶಿ: 
ವರ್ಷದ ಮೊದಲ  ಸೂರ್ಯ ಗ್ರಹಣದಲ್ಲಿ ನಿರ್ಮಾಣವಾಗುತ್ತಿರುವ ರಾಶಿ ಬದಲಾವಣೆ ಯೋಗ ವೃಷಭ ರಾಶಿಯವರ ಜೀವನದಲ್ಲಿ ಭಾರೀ ನಷ್ಟವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದೇ ಇರುವುದು ನಿಮ್ಮನ್ನು ನಿರಾಸೆಗೊಳಿಸಬಹುದು.

ಕನ್ಯಾ ರಾಶಿ: 
ಸೂರ್ಯ ಗ್ರಹಣದ ದಿನ ಮಂಗಳ-ಬುಧರ ಯುತಿಯು ಕನ್ಯಾ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಅನಾವಶ್ಯಕ ವಾಗ್ವಾದಗಳಲ್ಲಿ ಸಿಲುಕುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ನಿಮ್ಮ ಮಾತಿಗೆ ಕಡಿವಾಣ ಹಾಕುವುದು ಒಳಿತು. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ತುಲಾ ರಾಶಿ: 
ಸೂರ್ಯ ಗ್ರಹಣದಂದು ನಿರ್ಮಾಣಗೊಳ್ಳಲಿರುವ ಶತ್ರು ಗ್ರಹಗಳ ಸಂಯೋಗವು ತುಲಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳಲ್ಲಿ ಕೊಂಚವೂ ನಿರ್ಲಕ್ಷ್ಯ ವಹಿಸಬೇಡಿ. 

ಮಕರ ರಾಶಿ: 
ಮಂಗಳ-ಬುಧ ಯುತಿಯ ಪರಿಣಾಮವಾಗಿ ಮಕರ ರಾಶಿಯವರ ಆರೋಗ್ಯ ಸಮಸ್ಯೆಗ್ಲೌ ಉಲ್ಬಣಿಸಬಹುದು. ಇದನ್ನು ತಪ್ಪಿಸಲು ಹೊರಗಿನ ಆಹಾರಗಳ ಸೇವನೆ ತಪ್ಪಿಸಿ. ಇದಲ್ಲದೆ, ಕುಟುಂಬ ಕಲಹಗಳನ್ನು ತಪ್ಪಿಸಲು ಅನಗತ್ಯ ವಾದ ಮಾಡುವುದರಿಂದ ದೂರವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News