ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದ ಸುವರ್ಣ ಯುಗ ಆರಂಭ!ಹೆಜ್ಜೆ ಹೆಜ್ಜೆಗೂ ಸಾಥ್ ನೀಡುವಳು ಅದೃಷ್ಟ ಲಕ್ಷ್ಮೀ
ಶುಕ್ರ ಸಂಚಾರ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರುತ್ತದೆ.
ಬೆಂಗಳೂರು : ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಸಮಯದ ನಂತರ ತನ್ನ ರಾಶಿ, ನಕ್ಷತ್ರವನ್ನು ಬದಲಾಯಿಸುತ್ತವೆ. ಅದರಂತೆ ಶುಕ್ರನು ಕೂಡಾ ಇದೀಗ ಇನ್ನೆರಡು ದಿನಗಳಲ್ಲಿ ತನ್ನ ನಕ್ಷತ್ರ ಬದಲಿಸಿ ಮುಂದೆ ಸಾಗಲಿದ್ದಾನೆ. ಆಗಸ್ಟ್ 11 ಶುಕ್ರನು ಪೂರ್ವ ಪಾಲ್ಗುನಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಚಲನೆಯಲ್ಲಿನ ಈ ಬದಲಾವಣೆ ಕೆಲವು ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಆಗಸ್ಟ್ 11 ರಂದು ಬೆಳಿಗ್ಗೆ 11.15 ಕ್ಕೆ ಶುಕ್ರನು ಪೂರ್ವ ಪಾಲ್ಗುನಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಕ್ರ ಸಂಕ್ರಮದಿಂದ ಯಾವ ರಾಶಿಯವರಿಗೆ ಹಣ, ಕೀರ್ತಿ, ಸುವರ್ಣ ಜೀವನ ಮತ್ತು ಆರ್ಥಿಕ ಲಾಭ ಸಿಗುತ್ತದೆ ನೋಡೋಣ.
ಇದನ್ನೂ ಓದಿ : ಈ ರಾಶಿಯವರನ್ನು ಬಿಟ್ಟು ತೊಲಗುವುದು ಸರ್ವ ಕಷ್ಟಗಳು! ನೋವು ದುಃಖಕ್ಕೆ ಜಾಗವೆ ಇಲ್ಲ !ಇನ್ನೇನಿದ್ದರೂ ಐಶಾರಾಮಿ ಬದುಕು, ಸಂತಸದ ಹೊನಲು
ಮಿಥುನ ರಾಶಿ : ಶುಕ್ರನ ಸಂಚಾರವು ಮಿಥುನ ರಾಶಿಯವರಿಗೆ ಲಾಭವಾಗಲಿದೆ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳಲಿವೆ.ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು. ಅಪಾರ ಯಶಸ್ಸು ಸಿಗುವುದು.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಶುಕ್ರ ಸಂಕ್ರಮಣವು ತುಂಬಾ ಪ್ರಯೋಜನಕಾರಿಯಾಗಿದೆ.ಇವರ ಅದೃಷ್ಟ ಹೆಚ್ಚಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಸಿಗುವುದು. ಆರ್ಥಿಕ ಸ್ಥಿತಿ ಸದೃಢವಾಗಲಿದೆ.
ಸಿಂಹ ರಾಶಿ : ಶುಕ್ರ ಸಂಚಾರವು ಸಿಂಹ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಹಣದ ಹೊಳೆ ಹರಿಯುವುದು.ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುವುದು. ಕೌಟುಂಬಿಕ ಜೀವನ ಮಧುರವಾಗಿರುತ್ತದೆ.
ತುಲಾ ರಾಶಿ :ತುಲಾ ರಾಶಿಯವರ ಆದಾಯದಲ್ಲಿ ಭಾರಿ ಹೆಚ್ಚಳವಾಗುವುದು. ವೇತನ ಹೆಚ್ಚಳವಾಗುವುದು ಬಡ್ತಿ ಸಿಗುವುದು. ಸಲ ನೀಡಿದ್ದ ಹಣ ಮರಳಿ ಸಿಗುವುದು. ವೃತ್ತಿಯಲ್ಲಿ ಸುಧಾರಣೆ ಕಂಡುಬರಬಹುದು.
ಇದನ್ನೂ ಓದಿ : ದಿನಭವಿಷ್ಯ 09-08-2024: ಮೊದಲ ಶ್ರಾವಣ ಶುಕ್ರವಾರ ಹಸ್ತ ನಕ್ಷತ್ರ, ಸಿದ್ಧ ಯೋಗ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
ಧನು ರಾಶಿ: ಶುಕ್ರನ ಸಂಕ್ರಮವು ಧನು ರಾಶಿಯವರಿಗೆ ಉತ್ತಮ ರೀತಿಯಲ್ಲಿ ಲಾಭವಾಗುವುದು.ವ್ಯಾಪಾರದಲ್ಲಿ ಬೆಳವಣಿಗೆಯಾಗುವುದು.ಪ್ರೇಮ ಜೀವನ ಮಧುರವಾಗಿರುತ್ತದೆ.ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.
ಕುಂಭ ರಾಶಿ :ಕುಂಭ ರಾಶಿಯವರಿಗೆ ಶುಕ್ರ ಸಂಚಾರದಿಂದ ಸಂಪತ್ತು ಸಿಗಲಿದೆ. ಅನಿರೀಕ್ಷಿತ ಸ್ಥಳಗಳಿಂದ ಹಣ ಒಲಿದು ಬರುವುದು. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು.ಮದುವೆ ನಿಶ್ಚಯವಾಗಬಹುದು.ಆರೋಗ್ಯವೂ ಉತ್ತಮವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.