Happy Nag Panchami 2024 Wishes: ಶ್ರಾವಣ ಮಾಸ ಎಂದರೆ ಶಿವನನ್ನು ವಿಶೇಷವಾಗಿ ಆಚರಣೆ ಮಾಡುವ ತಿಂಗಳು. ಈ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಹಾಕಿಗೆ ಗತವೈಭವ ಮರುಕಳಿಸಿದ ಹಾಕಿ ದಂತಕಥೆ ಪಿ.ಆರ್ ಶ್ರೀಜೇಶ್
ಹಿಂದೂ ಧರ್ಮದಲ್ಲಿ, ನಾಗದೇವರನ್ನು ಶಿವ ಮತ್ತು ವಿಷ್ಣುವಿನ ಜೊತೆಯಾಗಿ ಕಾಣಬಹುದು. ಇನ್ನು ಇಂತಹ ಶುಭ ಸಂದರ್ಭದಲ್ಲಿ ನೀವು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುವ ಮೂಲಕ ಈ ಹಬ್ಬವನ್ನು ಆಚರಿಸಬಹುದು. ಇಲ್ಲಿ ಕೆಲವೊಂದು ಸೂಪರ್ ಸಂದೇಶಗಳಿದ್ದು, ಇವುಗಳನ್ನ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಕಳುಹಿಸಿ, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಳ್ಳಿ.
- ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬ ನಾಗ ಪಂಚಮಿಯು ಸರ್ವರಿಗೂ ಒಳಿತನ್ನುಂಟು ಮಾಡಲಿ: ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ನಾಗ ದೇವತೆ ಸರ್ವರಿಗೂ ಸಕಲ ಶ್ರೇಯಾಭಿವೃದ್ಧಿಯನ್ನು ಕರುಣಿಸಿ ಆಶೀರ್ವಾದಿಸಲಿ, ನಾಡಿನ ಸಮಸ್ತ ಪ್ರೀತಿಬಾಂಧವರಿಗೆ ನಾಗರ ಪಂಚಮಿಯ ಶುಭಾಶಯಗಳು.
- ನಾಗದೇವನು ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಲಿ. ಆಯಸ್ಸು-ಆರೋಗ್ಯ ಕರುಣಿಸಲಿ: ಎಲ್ಲರಿಗೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.
ಇದನ್ನೂ ಓದಿ: ಕಣ್ಣು ಮತ್ತು ಮೊಬೈಲ್ ಸ್ಕ್ರೀನ್ ನಡುವೆ ಎಷ್ಟು ದೂರ ಅಂತರವಿರಬೇಕು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.