Vastu Tips: ನೀವು ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿರುವ ಕರ್ಪೂರ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವು ಭಾಗಗಳಲ್ಲಿ ಕರ್ಪೂರವನ್ನು ಇಡುವುದರಿಂದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ.  


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸುಖ-ಶಾಂತಿ- ನೆಮ್ಮದಿಗಾಗಿ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ. ಅದರಂತೆ, ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯಲು, ಸಂಪತ್ತನ್ನು ವೃದ್ಧಿಸಲು ಕೂಡ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯ ಕೆಲವು ಜಾಗಗಳನ್ನು ಸಂಪತ್ತು ವೃದ್ಧಿಯ ಮೂಲಗಳು ಎಂದು ಬಣ್ಣಿಸಲಾಗಿದೆ. ಮನೆಯ ಈ ನಾಲ್ಕು ಜಾಗಗಳಲ್ಲಿ ಕರ್ಪೂರವನ್ನು ಇಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕ್ಕೆ ಕೊರತೆ ಆಗುವುದಿಲ್ಲ ಎಂದು ನಂಬಲಾಗಿದೆ. 


ವಾಸ್ತವವಾಗಿ, ಕರ್ಪೂರವು ಮನೆಯ ಪರಿಸರವನ್ನು ಶುದ್ಧವಾಗಿಡಲು ಸಹಾಯ ಮಾಡುವ ಬಿಳಿ ವಸ್ತುವಾಗಿದೆ. ಮನೆಯಲ್ಲಿ ಕರ್ಪೂರ ಇದ್ದರೆ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಮಾತ್ರವಲ್ಲ, ಇದು ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಆಕರ್ಷಿಸುವುದರಿಂದ ಮನೆಯಲ್ಲಿ ಎಂದಿಗೂ ಕೂಡ ಸಂಪತ್ತಿಗೆ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯ ಯಾವ ಜಾಗದಲ್ಲಿ ಕರ್ಪೂರ ಇಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ನೋಡುವುದಾದರೆ... 


ಇದನ್ನೂ ಓದಿ- ವಾಸ್ತು ಟಿಪ್ಸ್‌ : ಆರ್ಥಿಕ ಸಂಕಷ್ಟ ದೂರವಾಗಬೇಕೆಂದರೆ.. ಮನೆಯಲ್ಲಿ ಪೀಠೋಪಕರಣಗಳನ್ನು ಹೀಗೆ ಇಡಿ


ಮನೆಯ ಈ ನಾಲ್ಕು ಭಾಗಗಳಲ್ಲಿ ಕರ್ಪೂರ ಇಟ್ಟರೆ ಎಂದಿಗೂ ಕಾಡಲ್ಲ ಹಣಕಾಸಿನ ಮುಗ್ಗಟ್ಟು: 
ಅಡುಗೆ ಮನೆ: 

ಅಡುಗೆ ಮನೆಯೂ ಮಾತೆ ಅನ್ನಪೂರ್ಣೆ ವಾಸಿಸುವ ಸ್ಥಳವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಡುಗೆ ಮನೆಯಲ್ಲಿ ಕರ್ಪೂರ ಇಡುವುದನ್ನು ಮಂಗಳಕರ ಎಂದು ನಂಬಲಾಗಿದೆ. ಇದು ಮನೆಯಲ್ಲಿ ಹಣಕಾಸಿನ ಹರಿವನ್ನು ಹೆಚ್ಚಿಸುವುದರ ಜೊತೆಗೆ ಅಡುಗೆ ಮನೆಯಲ್ಲಿ ಕೀಟಗಳ ತೊಂದರೆಯನ್ನು ಸಹ ತಪ್ಪಿಸುತ್ತದೆ. 


* ಮುಖ್ಯ ದ್ವಾರ: 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಯಾವುದೇ ಧನಾತ್ಮಕ ಶಕ್ತಿ, ಋಣಾತ್ಮಕ ಶಕ್ತಿಯ ಪ್ರವೇಶವಾಗುವುದು ಮನೆಯ ಮುಖ್ಯ ದ್ವಾರದಿಂದಲೇ. ಹಾಗಾಗಿ, ಮನೆಯ ಮುಖ್ಯ ದ್ವಾರದ ಬಳಿ ಕರ್ಪೂರವನ್ನು ಇಡುವುದರಿಂದ ಅಂತಹ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುಡಿಳ್ಳ ಎಂದು ನಂಬಲಾಗಿದೆ. ಮಾತ್ರವಲ್ಲ, ಇದು ಮನೆಯಲ್ಲಿ ಸದಾ ಉತ್ಸಾಹ, ಸಂಭ್ರಮ, ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ ಎಂತಲೂ ಹೇಳಲಾಗುತ್ತದೆ. 


* ಬೆಡ್ ರೂಂ: 
ವಾಸ್ತು ಪ್ರಕಾರ, ಮನೆಯ ಬೆಡ್ ರೂಂನಲ್ಲಿ ಕರ್ಪೂರ ಇಡುವುದು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಮನೆಯ ಬೆಡ್ ರೂಂನಲ್ಲಿ ಅದರಲ್ಲೂ ದಂಪತಿಗಳು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಇಡುವುದರಿಂದ ದಂಪತಿಗಳಲ್ಲಿ ಅನ್ಯೋನ್ಯತೆ ಮೂಡುತ್ತದೆ. ಉತ್ತಮ ನಿದ್ರೆಯ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. 


ಇದನ್ನೂ ಓದಿ- Lucky Painting: ನಿಮ್ಮ ಮಲಗಿರುವ ಅದೃಷ್ಟವನ್ನೂ ಬಡಿದೆಬ್ಬಿಸುತ್ತದೆ ಮನೆಯಲ್ಲಿರುವ ಈ ಚಿತ್ರಗಳು


* ದೇವರ ಕೋಣೆ: 
ವಾಸ್ತು ಪ್ರಕಾರ, ಪ್ರತಿ ಮನೆಯ ದೇವರ ಕೋಣೆಯಲ್ಲಿ ಕರ್ಪೂರ ಇರಲೇ ಬೇಕು. ಮಾತ್ರವಲ್ಲ, ಇದನ್ನು ಸುರಕ್ಷಿತವಾಗಿ ಇಡಬೇಕು. ಈ ರೀತಿ ಮಾಡುವುದರಿಂದ ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಮಾತ್ರವಲ್ಲದೆ ಎಂದಿಗೂ ಕೂಡ ಆರ್ಥಿಕ ಸಮಸ್ಯೆಗಳು ಬಾಧಿಸುವುದಿಲ್ಲ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.