ಈ ವಸ್ತುಗಳು ಮನೆಯಲ್ಲಿದ್ರೆ ನಕಾರಾತ್ಮಕತೆ ಮಾತ್ರವಲ್ಲ...ದುಡ್ಡಿನ ಸಮಸ್ಯೆಯೂ ಎದುರಾಗುತ್ತೆ ಎಚ್ಚರ!!

Vastu tips : ನಿಮ್ಮ ಮನೆಯಲ್ಲಿ ಹಣವಿಲ್ಲವೇ? ನೀವು ಗಳಿಸಿದಷ್ಟೇ ವೇಗವಾಗಿ ಹಣವನ್ನು ಖರ್ಚು ಮಾಡುತ್ತಿದ್ದೀರಾ? ನೀವು ಯಾವಾಗಲೂ ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಹಾಗಿದ್ದರೆ ಇದಕ್ಕೆಲ್ಲಾ ನಿಮ್ಮ ಮನೆಯಲ್ಲಿರುವ ವಾಸ್ತು ದೋಷಗಳೇ ಕಾರಣ.  

Written by - Savita M B | Last Updated : Sep 8, 2023, 12:39 PM IST
  • ವಾಸ್ತು ಪ್ರಕಾರ ಒಬ್ಬರ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುವ ಬಹಳಷ್ಟು ವಸ್ತುಗಳು ಇರುತ್ತವೆ
  • ಇದರಿಂದ ಆ ಮನೆಯಲ್ಲಿ ಹಣದ ಸಮಸ್ಯೆ ಮಾತ್ರವಲ್ಲದೆ ಕೌಟುಂಬಿಕ ಸಮಸ್ಯೆಗಳೂ ಬರುತ್ತವೆ.
  • ಹೀಗಿರುವಾಗ ಆ ಮನೆಯವರು ಎಷ್ಟೇ ಕಷ್ಟಪಟ್ಟು ಹಣ ಗಳಿಸಲು ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.
ಈ ವಸ್ತುಗಳು ಮನೆಯಲ್ಲಿದ್ರೆ ನಕಾರಾತ್ಮಕತೆ ಮಾತ್ರವಲ್ಲ...ದುಡ್ಡಿನ ಸಮಸ್ಯೆಯೂ ಎದುರಾಗುತ್ತೆ ಎಚ್ಚರ!!  title=

Vastu tips for Wealth: ಹೌದು, ವಾಸ್ತು ಪ್ರಕಾರ ಒಬ್ಬರ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುವ ಬಹಳಷ್ಟು ವಸ್ತುಗಳು ಇದ್ದರೆ ಆ ಮನೆಯಲ್ಲಿ ಹಣದ ಸಮಸ್ಯೆ ಮಾತ್ರವಲ್ಲದೆ ಕೌಟುಂಬಿಕ ಸಮಸ್ಯೆಗಳೂ ಬರುತ್ತವೆ. ಹೀಗಿರುವಾಗ ಆ ಮನೆಯವರು ಎಷ್ಟೇ ಕಷ್ಟಪಟ್ಟು ಹಣ ಗಳಿಸಲು ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.

ಹಾಗಾದರೇ ಮನೆಯಲ್ಲಿ ಯಾವ ರೀತಿಯ ವಸ್ತುಗಳು ಇರಬಾರದು ಎನ್ನುವ ಪ್ರಶ್ನೆ ಉಂಟಾಗುತ್ತದೆ. ವಾಸ್ತು ಪ್ರಕಾರ ಯಾವ ವಸ್ತುಗಳು ಮನೆಯಲ್ಲಿದ್ದರೆ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ..

ಹಳೆಯ ಕಾಗದ, ರಸೀದಿ
ಅನೇಕರಿಗೆ ಪೇಪರ್ ಓದುವ ಅಭ್ಯಾಸವಿರುತ್ತದೆ. ಆದ್ದರಿಂದ ಅವರು ಪ್ರತಿದಿನ ಪೇಪರ್‌ ಖರೀದಿಸುತ್ತಾರೆ. ಅಂತಹ ಖರೀದಿಸಿದ ಕಾಗದವನ್ನು ಬಹಳ ದಿನಗಳವರೆಗೆ ಸಂಗ್ರಹಿಸುವುದನ್ನು ನೀವುಬಿಡಬೇಕು. ಅದೇ ರೀತಿ ಹಳೆಯ ರಸೀದಿಗಳು, ದಾಖಲೆಗಳು ಇತ್ಯಾದಿ ಉಪಯೋಗಕ್ಕೆ ಬಾರದೆ ಎಷ್ಟೋ ವರ್ಷಗಳಿಂದ ಸಂಗ್ರಹಿಸಿರುವ ಹಳೆಯ ಕಾಗದಗಳನ್ನು ಚೆಲ್ಲಬೇಕು. ಏಕೆಂದರೆ ಅದೆಲ್ಲವೂ ಕಸಕ್ಕೆ ಸಮ. ಕಸವನ್ನು ಮನೆಗೆ ಸೇರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. 

ಒಣಗಿದ ಸಸ್ಯಗಳು 
ಇತ್ತೀಚಿನ ದಿನಗಳಲ್ಲಿ ಅನೇಕರು ಮನೆಯ ಅಂದವನ್ನು ಹೆಚ್ಚಿಸುವ ಅನೇಕ ಒಳಾಂಗಣ ಸಸ್ಯಗಳನ್ನು ಖರೀದಿಸಿ ಬೆಳೆಸುತ್ತಾರೆ. ಹೀಗೆ ಮನೆಯಲ್ಲಿ ಗಿಡಗಳನ್ನು ಬೆಳೆಸುವಾಗ ಅವು ಒಣಗದಂತೆ ಸರಿಯಾಗಿ ನಿರ್ವಹಣೆ ಮಾಡಬೇಕು. ಒಂದು ವೇಳೆ ಅವು ಒಣಗಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಹೆಚ್ಚಿನ ಹಣದ ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ-Ayodhya Ram Mandir: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್

ಕಸ 
ಸ್ವಚ್ಛವಾದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಇರುತ್ತದೆ ಮತ್ತು ಲಕ್ಷ್ಮಿ ದೇವಿಯು ಅಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯಲ್ಲಿ ಹಣ ಉಳಿಯಬೇಕಾದರೆ, ದಿನನಿತ್ಯದ ಕಸವನ್ನು ನೀವು ಹೊರಗೆ ಹಾಕಲೇಬೇಕು. ಪ್ರತಿನಿತ್ಯ ಕಸ ಸಂಗ್ರಹಿಸಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿ ಹಣದ ಕೊರತೆ ಹೆಚ್ಚುತ್ತದೆ.

ಧೂಳು ಹಿಡಿದ ಕಿಟಕಿಗಳು
ಮನೆಯಲ್ಲಿ ಹೆಚ್ಚು ಧನಾತ್ಮಕ ಶಕ್ತಿಯ ಹರಿವನ್ನು ಹೊಂದಲು, ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ. ಆದರೆ ಪಾಸಿಟಿವ್ ಎನರ್ಜಿ ಪ್ರವೇಶಿಸುವ ಇಂತಹ ಕಿಟಕಿ ಬಾಗಿಲುಗಳು ಧೂಳುಹಿಡಿದಿದ್ದರೆ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಆಗಾಗ್ಗೆ ಅವುಗಳನ್ನು ಸ್ವಚ್ಛಗೊಳಿಸಿ. 

ಮುರಿದ ಪೈಪ್ 
ಮನೆಯ ಪೈಪ್‌ಗಳು ಸೋರುತ್ತಿವೆಯೇ? ಹಾಗಿದ್ದಲ್ಲಿ ಕೂಡಲೇ ಅವುಗಳನ್ನು ಸರಿಪಡಿಸಬೇಕು. ಏಕೆಂದರೆ ವಾಸ್ತು ಪ್ರಕಾರ, ನೀರನ್ನು ವ್ಯರ್ಥ ಮಾಡುವುದು ಅನಗತ್ಯ ವೆಚ್ಚಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಹಣದ ಕೊರತೆಯಿಂದ ಬಳಲಬಹುದು.

​ಇದನ್ನೂ ಓದಿ-ಎದೆಯೆಂಬ ಹಣತೆಯಲ್ಲಿ ಅಕ್ಷರವೆಂಬ ದೀಪ ಬೆಳಗಿಸಿ ಬಾಳಿಗೆ ಭವ್ಯ ಬೆಳಕು ನೀಡಿದ ಗುರುಗಳಿಗೆ ವಂದನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News