Mangal Asta: ಜ್ಯೋತಿಷ್ಯದಲ್ಲಿ ಕಮಾಂಡರ್ ಗ್ರಹ ಎಂತಲೇ ಕರೆಯಲಾಗುವ ಮಂಗನೌ ನೆನ್ನೆಯಷ್ಟೇ (ಸೆಪ್ಟೆಂಬರ್ 24, 2023) ಸಂಜೆ 06:26 ಕ್ಕೆ ಕನ್ಯಾ ರಾಶಿಯಲ್ಲಿ ಅಸ್ತಮಿಸಿದ್ದಾನೆ. ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಆಸ್ತಮ ಸ್ಥಿತಿಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಇದೀಗ ಮಂಗಳ ಅಸ್ತಮ ಸ್ಥಿತಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಅಸ್ತಮಿಸಿರುವ ಮಂಗಳನು ಐದು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು? ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಕನ್ಯಾ ರಾಶಿಯಲ್ಲಿ ಮಂಗಳ ಅಸ್ತ: ಐದು ರಾಶಿಯವರಿಗೆ ಕೆಟ್ಟ ದಿನಗಳು ಆರಂಭ:-
ಮೇಷ ರಾಶಿ: 

ಕನ್ಯಾ ರಾಶಿಯಲ್ಲಿ ಮಂಗಳ ಅಸ್ತದ ಋಣಾತ್ಮಕ ಪರಿಣಾಮದಿಂದಾಗಿ ಮೇಷ ರಾಶಿಯವರಿಗೆ ಉದ್ವೇಗ ಹೆಚ್ಚಾಗಲಿದೆ. ಇದು ನಿಮ್ಮ ಕೆಲಸ ಕಾರ್ಯಗಳಲ್ಲೂ ಸಮಸ್ಯೆಯನ್ನು ಹೆಚ್ಚಿಸಲಿದೆ. ಮಾತ್ರವಲ್ಲ, ಹಣಕಾಸಿನ ನಷ್ಟ ಸಾಧ್ಯತೆ ಇದ್ದು, ಕೌಟುಂಬಿಕ ಕಷ್ಟಗಳು ಹೆಚ್ಚಾಗಲಿವೆ. 


ವೃಷಭ ರಾಶಿ: 
ಈ ಸಮಯದಲ್ಲಿ ಮಂಗಳನು ನಿಮ್ಮ ಉದ್ಯೋಗ ರಂಗದಲ್ಲಿ  ಕೆಲಸದ ಹೊರೆ ಮತ್ತು ಜವಾಬ್ದಾರಿಗಳಿಂದ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ ನೀವು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. ಸಾಧ್ಯವಾದಷ್ಟು ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. 


ಇದನ್ನೂ ಓದಿ- ಅಕ್ಟೋಬರ್ 1 ರಿಂದ ಸೂರ್ಯನಂತೆ ಹೊಳೆಯಲಿದೆ ಈ ಜನರ ಅದೃಷ್ಟ, ಧನಲಕ್ಷ್ಮಿಯ ಕೃಪೆಯಿಂದ ಹಣದ ಸುರಿಮಳೆ!


ಕರ್ಕಾಟಕ ರಾಶಿ: 
ಮಂಗಳ ಅಸ್ತದ ಪರಿಣಾಮವಾಗಿ ಕರ್ಕಾಟಕ ರಾಶಿಯವರ ಜೀವನಶೈಲಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ, ಅನಗತ್ಯ ಕೋಪ ಮತ್ತು ವಿವಾದಗಳಿಂದ ದೂರವಿರುವುದು ಒಳಿತು. ಇದಲ್ಲದೆ, ಮಾನಸಿಕ ಅಸಮಾಧಾನಗಳು ನಿಮ್ಮನ್ನು ಹೆಚ್ಚು ಕಾಡುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. 


ಸಿಂಹ ರಾಶಿ: 
ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ. ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಯಾವುದೇ ಕೆಲಸದಲ್ಲಿ ಜಾಗರೂಕರಾಗಿರಿ. ಇಲ್ಲದಿದ್ದರೆ, ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಇದು ಹೆಚ್ಚು ಪ್ರಭಾವ ಬೀರಲಿದ್ದು ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಕಠಿಣವಾಗಬಹುದು. 


ಇದನ್ನೂ ಓದಿ- ಅಕ್ಟೋಬರ್ ನಲ್ಲಿ ಒಟ್ಟು 6 ಬಾರಿ ಗ್ರಹಗಳ ನಡೆ ಬದಲಾವಣೆ, ವಿಘ್ನ ವಿನಾಶಕನ ಕೃಪೆಯಿಂದ ಈ ರಾಶಿಗಳಿಗೆ ಭಾರಿ ಧನಲಾಭ!


ಧನು ರಾಶಿ: 
ಅಸ್ತಮಿಸಿರುವ ಮಂಗಳನು ಧನು ರಾಶಿಯವರ ವೃತ್ತಿ ರಂಗದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳು ವಿಫಲವಾಗುವುದರಿಂದ ಮನಸ್ಸಿನ ಒತ್ತಡ ಹೆಚ್ಚಾಗಬ್ ಅಹುದು. ಇದಲ್ಲದೆ, ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಸವಾಲುಗಳು ಹೆಚ್ಚಾಗಲಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.