ಅಕ್ಟೋಬರ್ ನಲ್ಲಿ ಒಟ್ಟು 6 ಬಾರಿ ಗ್ರಹಗಳ ನಡೆ ಬದಲಾವಣೆ, ವಿಘ್ನ ವಿನಾಶಕನ ಕೃಪೆಯಿಂದ ಈ ರಾಶಿಗಳಿಗೆ ಭಾರಿ ಧನಲಾಭ!

October Month Planets Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ಗ್ರಹಗಳ ಸ್ಥಿತಿಗತಿಯ ವಿಷಯದಲ್ಲಿ ತುಂಬಾ ವಿಶೇಷವಾಗಿರಲಿದೆ. ಈ ತಿಂಗಳಿನಲ್ಲಿ ಹಲವು ದೊಡ್ಡ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಬದಲಾಯಿಸಲಿವೆ ಮತ್ತು ಅದರ ಜೊತೆಗೆ ನಡೆಯನ್ನು ಕೂಡ ಪರಿವರ್ತಿಸಲಿವೆ, ಗ್ರಹಗಳ ಈ ಗೋಚರಗಳು ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಆ ಗ್ರಹಗಳು ಯಾವುವು ಮತ್ತು ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ಹಲವು ಗ್ರಹಗಳು ತಮ್ಮ ತಮ್ಮ ನಡೆಯನ್ನು ಬದಲಾಯಿಸಲಿವೆ. ಗ್ರಹಗಳ ಈ ಸ್ಥಿತಿಗತಿ ಎಲ್ಲಾ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರಲಿವೆ. ಈ ತಿಂಗಳಿನಲ್ಲಿ ಸೂರ್ಯ, ಶುಕ್ರ, ರಾಹು, ಕೇತುಗಳಿಂದ ಹಿಡಿದು ಬುಧ ಗ್ರಹಗಳು ರಾಶಿ ಪರಿವರ್ತಿಸುವ ಮೂಲಕ ಲಾಭವನ್ನು ನೀಡಲಿವೆ, ಜೋತಿಷ್ಯ ಪಂಡಿತರ ಪ್ರಕಾರ ಗ್ರಹಗಳ ಇಂತಹ ಸ್ಥಿತಿ ಪರಿವರ್ತನೆ ಅಕ್ಟೋಬರ್ ತಿಂಗಳಿನಲ್ಲಿ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭವನ್ನು ತಂದುಕೊಡಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳ ಜನರು ಯಾರು ಎಂಬುದನ್ನೂ ತಿಳಿದುಕೊಳ್ಳಲು ಪ್ರಯತ್ನಿಸೋಣ, 

 

ಇದನ್ನೂ ಓದಿ-ತುಲಾ ರಾಶಿಯಲ್ಲಿ ಕೇತು-ಮಂಗಳರ ಮೈತ್ರಿ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ರಾಶಿಗಳ ಜನರ ತಿಜೋರಿ ಧನ-ಸಂಪತ್ತಿನಿಂದ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

1. ಕನ್ಯಾ ರಾಶಿಗೆ ಬುಧನ ಪ್ರವೇಶ: ಜೋತಿಷ್ಯ ಪಂಡಿತರ ಪ್ರಕಾರ ಬುದ್ಧಿಯ ಕಾರಕ ಹಾಗೂ ಗ್ರಹಗಳ ರಾಜಕುಮಾರ ಎಂದೇ ಖ್ಯಾತ ಬುಧ ಗ್ರಹ ಅಕ್ಟೋಬರ್ 1 , 2023 ರಂದು ರಾತ್ರಿ 8 ಗಂಟೆ 29 ನಿಮಿಷಕ್ಕೆ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.   

2 /9

2. ಸಿಂಹ ರಾಶಿಯಲ್ಲಿ ಶುಕ್ರನ ಗೋಚರ- ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ದೈತ್ಯ ಗುರು ಎಂದೇ ಹೇಳಲಾಗುವ ಶುಕ್ರ ಅಕ್ಟೋಬರ್ 2, 2023 ರಂದು ರಾತ್ರಿ 12 ಗಂಟೆ 43 ನಿಮಿಷಕ್ಕೆ ಸಿಂಹ ರಾಶಿಯಲ್ಲಿ ಗೋಚರಿಸಲಿದ್ದಾನೆ.   

3 /9

3. ತುಲಾ ರಾಶಿಯಲ್ಲಿ ಮಂಗಳನ ಗೋಚರ- ಗ್ರಹಗಳ ಸೇನಾಪತಿ ಮಂಗಳ ಅಕ್ಟೋಬರ್ 3, 2023 ರಂದು ಸಂಜೆ 5 ಗಂಟೆ 12 ನಿಮಿಷಕ್ಕೆ ತುಲಾ ರಾಶಿಯಲ್ಲಿ ಗೋಚರಿಸಲಿದ್ದಾನೆ.  

4 /9

4. ತುಲಾ ರಾಶಿಯಲ್ಲಿ ಸೂರ್ಯನ ಗೋಚರ- ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದೇ ಖ್ಯಾತ ಸೂರ್ಯ ದೇವ ಅಕ್ಟೋಬರ್ 18, 2023 ರಂದು ಮದ್ಯಾಹ್ನ 1 ಗಂಟೆ 18 ನಿಮಿಷಕ್ಕೆ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ.   

5 /9

5. ತುಲಾ ರಾಶಿಗೆ ಬುಧನ ಪ್ರವೇಶ- ಬುದ್ಧಿ ಹಾಗೂ ವಾಣಿಯ ಕಾರಕ ಗ್ರಹ ಬುಧ ಅಕ್ಟೋಬರ್ 19, 2023 ರಂದು ಮದ್ಯಾಹ್ನ 1 ಗಂಟೆ 6 ನಿಮಿಷಕ್ಕೆ ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ.   

6 /9

6. ಮೀನ ರಾಶಿಯಲ್ಲಿ ರಾಹು ಗೋಚರ - ಅಕ್ಟೋಬರ್ ತಿಂಗಳು ತುಂಬಾ ವಿಶೇಷವಾಗಿದೆ. ಈ ತಿಂಗಳಿನಲ್ಲಿ ಅಕ್ಟೋಬರ್ 30, 2023 ರಂದು ಮದ್ಯಾಹ್ನ 2 ಗಂಟೆ 13 ನಿಮಿಷಕ್ಕೆ ಹಿಮ್ಮುಖ ನಡೆಯಲ್ಲಿ ಸಾಗುತ್ತಿರುವ ರಾಹು ಮೇಷ ರಾಶಿಯನ್ನು ತೊರೆದು ದೇವಗುರು ಬೃಹಸ್ಪತಿಯ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ   

7 /9

7. ಕೇತು ಕನ್ಯಾ ಗೋಚರ- ಪಾಪಿಗ್ರಹ ರಾಹುವಿನ ಜೊತೆಗೆ ಮತ್ತೊಂದು ಛಾಯಾ ಗ್ರಹ ಕೇತು ಕೂಡ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಸುಮಾರು ಒಂದೂವರೆ ವರ್ಷಗಳ ಬಳಿಕ ಅಕ್ಟೋಬರ್ 30, 2023 ರಂದು ಮದ್ಯಾಹ್ನ 2 ಗಂಟೆ 13 ನಿಮಿಷಕ್ಕೆ ಕೇತು ಶುಕ್ರನ ಅಧಿಪತ್ಯದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ರಾಶಿಯಲ್ಲಿ ಆಗಲೇ ಸೂರ್ಯ ಹಾಗೂ ಬುಧ ಗ್ರಹಗಳು ವಿರಾಜಮಾನನಾಗಿರಲಿವೆ.   

8 /9

8. ಗ್ರಹಗಳ ಈ ಗೋಚರದಿಂದ ಯಾವ ರಾಶಿಗಳಿಗೆ ಲಾಭ ಸಿಗಲಿದೆ?- ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ಬುಧ, ಸೂರ್ಯ, ಶುಕ್ರ ಹಾಗೂ ರಾಹು-ಕೇತುಗಳ ರಾಶಿ ಪರಿವರ್ತನೆಯಿಂದ ಮಿಥುನ, ಸಿಂಹ, ಕನ್ಯಾ ಹಾಗೂ ಧನು ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ನೌಕರವರ್ಗದ ಜನರಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಇದರಿಂದ ನಿಮಗೆ ಪದೋನ್ನತಿಯ ಭಾಗ್ಯ ಕೂಡ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹಲವು ದೊಡ್ಡ ಡೀಲ್ ಗಳು ಕುದುರುವ ಸಾದ್ಯತೆ ಇದೆ. ವ್ಯಾಪಾರದಲ್ಲಿ ನೀವು ಮಾಡುವ ಹೂಡಿಕೆ ನಿಮಗೆ ಹಲವು ಪಟ್ಟು ಲಾಭವನ್ನು ತಂದು ಕೊಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ವೈವಾಹಿಕ ಜೀವನ ಸುಖಮಯವಾಗಿರಲಿದೆ.   

9 /9

9. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)