ಬೆಂಗಳೂರು: ಈ ವರ್ಷ 2023ರಲ್ಲಿ ಮೊದಲ ಮಂಗಳ ಸಂಕ್ರಮಣ ಸಂಭವಿಸಿದೆ. ಇಂದು ಮುಂಜಾನೆ 5.30 ರ ಸುಮಾರಿಗೆ ಮಂಗಳ ಗ್ರಹವು ರಾಶಿ ಪರಿವರ್ತನೆ ಹೊಂದಿ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರಲಿದೆ. ಆದಾಗ್ಯೂ, ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿರುವ ಮಂಗಳನು  ಕೆಲವು ರಾಶಿಯವರ ಜೀವನದಲ್ಲಿ ಅಮಂಗಳಕರ ಪರಿಣಾಮಗಳನ್ನು ಉಂಟುಮಾಡಲಿದ್ದಾನೆ. ಮಂಗಳ ವಕ್ರ ದೃಷ್ಟಿಯಿಂದ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಯೋಣ...


ಇಂದಿನಿಂದ ಈ ರಾಶಿಯವರ ಜೀವನದಲ್ಲಿ ವಿನಾಶ ಉಂಟುಮಾಡಲಿದ್ದಾನೆ ಮಂಗಳ: 
ವೃಷಭ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿರುವ ಮಂಗಳನು ಈ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ತಂದೊಡ್ಡಲಿದ್ದಾನೆ. ಈ ಸಮಯದಲ್ಲಿ ನೀವು "ಮಾತು ಆಡಿದರೆ ಹೋಯಿತು-ಮುತ್ತು ಹೊಡೆದರೆ ಹೋಯಿತು" ಎಂಬ ನಾಣ್ಣುಡಿಯನ್ನು ನೆನಪಿನಲ್ಲಿಡಿ. ಮಾತ್ರವಲ್ಲ, ಪೈಸೆ ಪೈಸೆಯನ್ನೂ ಯೋಚಿಸಿ ಖರ್ಚು ಮಾಡಿ. ಇಲ್ಲದಿದ್ದರೆ, ತೊಂದರೆಗೆ ಸಿಲುಕಬಹುದು. 


ಇದನ್ನೂ ಓದಿ- ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ


ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೂ ಸಹ ಮಂಗಳ ರಾಶಿ ಪರಿವರ್ತನೆ ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಈ ಸಂದರ್ಭದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ವರ್ಗಾವಣೆ ಜೊತೆಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ, ಕೌಟುಂಬಿಕ ಕಲಹ ಹೆಚ್ಚಾಗಲಿದ್ದು ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.


ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಅಧಿಪತಿಯಾಗಿರುವ ಮಂಗಳನ ರಾಶಿ ಪರಿವರ್ತನೆಯು ಈ ರಾಶಿಯ ಜನರ ಜೀವನದಲ್ಲೂ ಹಲವು ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಮಾತಿನಲ್ಲಿ ಸಂಯಮವಿರಲಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಕೂಡ ಮುಖ್ಯವಾಗಿದೆ.


ಇದನ್ನೂ ಓದಿ- ರಾಹುವಿನ ನಕ್ಷತ್ರದಲ್ಲಿ ಶನಿ ಆಟ ಆರಂಭ, 6 ರಾಶಿಗಳಿಗೆ ಜಾಕ್ ಪಾಟ್


ಧನು ರಾಶಿ:
ಮಂಗಳನ ಸಂಚಾರವು ಧನು ರಾಶಿಯವರಿಗೆ ಅಷ್ಟು ಚೆನ್ನಾಗಿಲ್ಲ. ಈ ಸಮಯದಲ್ಲಿ ಧನು ರಾಶಿಯವರು ವೃತ್ತಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಅಡೆತಡೆಗಳನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ. ಇಲ್ಲದಿದ್ದರೆ, ನಿಮ್ಮ ಕೋಪವೇ ನಿಮ್ಮ ಶತ್ರುವಾಗಿ ಪರಿಣಮಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.