ನವಪಂಚಮ ಯೋಗದಿಂದ ಇಂದಿನಿಂದ ಈ ಐದು ರಾಶಿಯವರ ಜೀವನದಲ್ಲಿ ಹಣವೇ ಹಣ

ಜ್ಯೋತಿಷ್ಯದಲ್ಲಿ, ಮಂಗಳನನ್ನು ಧೈರ್ಯ, ಶೌರ್ಯ, ಮದುವೆ, ಭೂಮಿ, ಸಹೋದರನ ಅಂಶವೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯಲ್ಲಿದ್ದ ಮಂಗಳ ಗ್ರಹವು  ಇಂದು ಮುಂಜಾನೆ 5.33 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಶನಿಯೊಂದಿಗೆ ನವಪಂಚಮ ಯೋಗ  ನಿರ್ಮಾಣವಾಗಲಿದೆ. ಇದರಿಂದ 5 ರಾಶಿಯವರಿಗೆ ಸಾಕಷ್ಟು ಪ್ರಗತಿ ಹಾಗೂ ಸಂಪತ್ತು ಲಭಿಸಲಿದೆ. 

 ಬೆಂಗಳೂರು : ಜ್ಯೋತಿಷ್ಯದಲ್ಲಿ, ಮಂಗಳನನ್ನು ಧೈರ್ಯ, ಶೌರ್ಯ, ಮದುವೆ, ಭೂಮಿ, ಸಹೋದರನ ಅಂಶವೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯಲ್ಲಿದ್ದ ಮಂಗಳ ಗ್ರಹವು  ಇಂದು ಮುಂಜಾನೆ 5.33 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಶನಿಯೊಂದಿಗೆ ನವಪಂಚಮ ಯೋಗ  ನಿರ್ಮಾಣವಾಗಲಿದೆ. ಇದರಿಂದ 5 ರಾಶಿಯವರಿಗೆ ಸಾಕಷ್ಟು ಪ್ರಗತಿ ಹಾಗೂ ಸಂಪತ್ತು ಲಭಿಸಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a

1 /5

ಮಂಗಳ ಮೇಷ ರಾಶಿಯ ಅಧಿಪತಿಯಾಗಿದ್ದು, ಮಂಗಳನ ರಾಶಿ ಬದಲಾವಣೆ ಮೇಷ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯವರ ಶಕ್ತಿ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ. ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯುತ್ತಾರೆ. ತಂದೆ ಮತ್ತು ಸಹೋದರರಿಂದ ಬೆಂಬಲ ಸಿಗಲಿದೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. 

2 /5

ಮಂಗಳನು ​​ರಾಶಿಯನ್ನು ಬದಲಾಯಿಸಿದ ನಂತರ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಈ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಆಸ್ತಿಯಿಂದ ದೊಡ್ಡ ಮಟ್ಟದ ಲಾಭವಾಗಬಹುದು. ಆಸ್ತಿ ಸಂಬಂಧಿತ ವ್ಯವಹಾರಗಳನ್ನು ಮಾಡಲು ಇದು ಉತ್ತಮ ಸಮಯ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

3 /5

ಸಿಂಹ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಬಹಳಷ್ಟು ಪ್ರಯೋಜನಗಳನ್ನು ನೀಡಲಿದೆ. ಹಳೆಯ ಹೂಡಿಕೆ ಲಾಭವಾಗಲಿದೆ. ಹೊಸ ಹೂಡಿಕೆಗಳನ್ನು ಮಾಡಲು ಇದು ಉತ್ತಮ ಸಮಯ.  ಆರ್ಥಿಕ ಪ್ರಯೋಜನವಾಗಲಿದೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ.

4 /5

ಮಂಗಳನ ಸಂಚಾರವು ಕನ್ಯಾ ರಾಶಿಯ ಜನರ ವೃತ್ತಿ ಬದುಕಿನಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ. ಈ ಸಮಯದಲ್ಲಿ ನೀವು ಮಾಡುವ ಕೆಲಸ ಜನರಿಂದ ಮೆಚ್ಚುಗೆ ಪಡೆಯಲಿದೆ. ಆತ್ಮಸ್ಥೈರ್ಯ ವೃದ್ಧಿಯಾಗಲಿದೆ.

5 /5

ಮಂಗಳನ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ನೀವು ಬಯಸಿದ ಕೆಲಸದ ಆಫರ್ ಸಿಗಬಹುದು. ಆದಾಯ ಹೆಚ್ಚುತ್ತದೆ. ಅದೇ ರೀತಿ ಖರ್ಚು ಕೂಡಾ ಹೆಚ್ಚಾಗುತ್ತದೆ. ಆದರೆ ಹಣಕಾಸಿನ ತೊಂದರೆ ಮಾತ್ರ ಎದುರಾಗುವುದಿಲ್ಲ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)