ಇನ್ನೆರಡು ದಿನಗಳಲ್ಲಿ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿದೆ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಂಡಾಗ ಕೆಲವು ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಯೋಗಗಳಲ್ಲಿ ಬುಧಾದಿತ್ಯ ರಾಜಯೋಗವೂ ಒಂದು. ಬುಧ ಮತ್ತು ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಜಿಸಿದಾಗ ಈ ಬುಧಾದಿತ್ಯ ರಾಜಯೋಗವು ನಿರ್ಮಾಣಗೊಳ್ಳುತ್ತದೆ.  

Written by - Yashaswini V | Last Updated : Mar 13, 2023, 07:40 AM IST
  • ಬುಧಾದಿತ್ಯ ರಾಜಯೋಗವನ್ನು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಶುಭಕರ ರಾಜಯೋಗ ಎಂದು ಬಣ್ಣಿಸಲಾಗುತ್ತದೆ.
  • ಇದೀಗ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಇನ್ನೆರಡು ದಿನಗಳಲ್ಲಿ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿದೆ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ  title=
Budhaditya Rajyoga Effect

ಬೆಂಗಳೂರು: ಮಾರ್ಚ್  16, 2023 ರಂದು ಗ್ರಹಗಳ ರಾಜ ಸೂರ್ಯ ದೇವನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದೇ ದಿನ ಗ್ರಹಗಳ ರಾಜಕುಮಾರನಾದ ಬುಧ ಕೂಡ ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದಾಗಿ ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳಲಿದೆ. ಬುಧಾದಿತ್ಯ ರಾಜಯೋಗವನ್ನು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಶುಭಕರ ರಾಜಯೋಗ ಎಂದು ಬಣ್ಣಿಸಲಾಗುತ್ತದೆ. ಇದೀಗ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದ್ದು, ಅಪಾರ ಸಂಪತ್ತನ್ನು ಕೂಡ ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಮೀನ ರಾಶಿಯಲ್ಲಿ ಶುಭ ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್:-
ವೃಶ್ಚಿಕ ರಾಶಿ:

ಬುಧ-ಆದಿತ್ಯರ ರಾಶಿ ಪರಿವರ್ತನೆಯಿಂದ ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮಗೆ ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ. ಜೊತೆಗೆ ವೃತ್ತಿ ಜೀವನದಲ್ಲಿ ಕೀರ್ತಿ-ಯಶಸ್ಸನ್ನು ಪಡೆಯುವಿರಿ. ಹಣಕಾಸಿನ ಹಠಾತ್ ಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ.

ಇದನ್ನೂ ಓದಿ-  Shani Gochar: ಮಹಾಭಾಗ್ಯ ರಾಜಯೋಗದಿಂದ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯ ಜನ

ಧನು ರಾಶಿ:
ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೂ ಸಹ ಮಂಗಳಕರ ಫಲಗಳನ್ನು ನೀಡಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದನ್ನು ಅತ್ಯುತ್ತಮ ಸಮಯ ಎಂದೇ ಹೇಳಬಹುದು. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ. ಭೂಮಿ-ವಾಹನ ಖರೀದಿ ಯೋಗವೂ ಇದೆ.

ಇದನ್ನೂ ಓದಿ- ಶುಕ್ರ ಗೋಚಾರ: ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಮೀನ ರಾಶಿ:
ಮೀನ ರಾಶಿಯಲ್ಲೇ ಬುಧ-ಸೂರ್ಯ ಸಂಚಾರಗೊಳ್ಳಲಿದ್ದು ಇದರಿಂದ ನಿರ್ಮಾಣಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮ ಉಂಟು ಮಾಡಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದ್ದು ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಭವಿಷ್ಯದಲ್ಲಿ ಉತ್ತಮ ಫಲಗಳನ್ನು ನೀಡಲಿವೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯತೆ ಇದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News