May 2023 Horoscope In Kannada: 2023ರ ಮೇ ತಿಂಗಳಿನಲ್ಲಿ ಕೆಲವು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಿನಲ್ಲಿ ಗ್ರಹಗಳ ರಾಜ ಸೂರ್ಯದೇವ, ಮಂಗಳ, ಶುಕ್ರ ಗ್ರಹಗಳ ರಾಶಿ ಪರಿವರ್ತನೆ ಆಗಲಿವೆ. ಜೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಇಂದು ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹವು ರಾಶಿ ಪರಿವರ್ತನೆ ಮಾಡಿ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಾದ ಮೂರು ದಿನಗಳಲ್ಲಿ ಎಂದರೆ 05 ಮೇ 2023ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಇದಾಗ ಬಳಿಕ ಮೇ 10ರಂದು ಮಂಗಳ ಗ್ರಹವು ಚಂದ್ರನ ಚಿಹ್ನೆಯಾದ ಕರ್ಕಾಟಕ ರಾಶಿಯಲ್ಲಿ ಸಾಗಲಿದ್ದಾನೆ. ಮಂಗಳ ರಾಶಿ ಪರಿವರ್ತನೆಯಾದ ಐದು ದಿನಗಳ ನಂತರ 15 ಮೇ 2023ರಂದು ಸೂರ್ಯ ದೇವನು ರಾಶಿ ಚಕ್ರವನ್ನು ಬದಲಾಯಿಸಿ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 


COMMERCIAL BREAK
SCROLL TO CONTINUE READING

ಮೇ ಮಾಸದಲ್ಲಿ ಶುಕ್ರ, ಮಂಗಳ, ಸೂರ್ಯ ಗ್ರಹಗಳ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ತಮ್ಮ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಐದು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರರ ಪ್ರಕಾರ, ಮೇ ತಿಂಗಳಿನಲ್ಲಿ ಯಾವೆಲ್ಲಾ ರಾಶಿಯವರು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಈ ತಿಂಗಳಿನಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 


ಮೇ ತಿಂಗಳಿನಲ್ಲಿ ಮಂಗಳ, ಶುಕ್ರ, ಸೂರ್ಯರ ಸಂಚಾರದಿಂದ ಈ 5 ರಾಶಿಯವರಿಗೆ ಭಾರೀ ನಷ್ಟ :- 
ವೃಷಭ ರಾಶಿ: 

ಮೇ ಮಾಸದಲ್ಲಿ ಮೂರು ಪ್ರಮುಖ ಗ್ರಹಗಳ ಸಂಚಾರವು ವೃಷಭ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಸಂಕಷ್ಟಗಳನ್ನು ತಂದೊಡ್ಡಲಿವೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು - ವೆಚ್ಚಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಹದಗೆಡಬಹುದು. ಹಾಗಾಗಿ, ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ. ಜೊತೆಗೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಾಧ್ಯವಾದಷ್ಟು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. 


ಇದನ್ನೂ ಓದಿ- Shukra Mahadasha Effect: 20 ವರ್ಷಗಳವರೆಗೆ ರಾಜ ಯೋಗ, ಅಪಾರ ಕೀರ್ತಿ, ಸಂಪತ್ತು ಪ್ರಾಪ್ತಿ


ಕರ್ಕಾಟಕ ರಾಶಿ: 
ಮೇ ತಿಂಗಳಿನಲ್ಲಿ ಶುಕ್ರ, ಮಂಗಳ, ಸೂರ್ಯ ಗ್ರಹಗಳ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಅಷ್ಟು ಮಂಗಳಕರ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ವಾದ- ವಿವಾದಗಳನ್ನು ತಪ್ಪಿಸಿ. ಇಲ್ಲವಾದರೆ, ಇದು ನಿಮ್ಮ ವೃತ್ತಿ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲಿಯೂ ಕೂಡ ನಿಮ್ಮ ಮಾತೇ ನಿಮಗೆ ಮುಳ್ಳಾಗಬಹುದು ಹಾಗಾಗಿ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. 


ತುಲಾ ರಾಶಿ: 
ಮೇ ತಿಂಗಳಿನಲ್ಲಿ ಗ್ರಹಗಳ ರಾಶಿ ಪರಿವರ್ತನೆಯ ಪ್ರಭಾವದಿಂದಾಗಿ ತುಲಾ ರಾಶಿಯವರು ತುಂಬಾ ಏರಿಳಿತಗಳನ್ನು ಅನುಭವಿಸಬೇಕಾಗುತ್ತದೆ. ಅನಿರೀಕ್ಷಿತ ಖರ್ಚುಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಬಹುದು. ವೃತ್ತಿ ರಂಗದಲ್ಲಿಯೂ ನಾನಾ ರೀತಿಯ ಸವಾಲುಗಳು ಹೆಚ್ಚಾಗಬಹುದು. ಏನೇ ಆದರೂ, ಎದೆಗುಂದದೆ ಮುನ್ನಡೆಯಿರಿ. 


ವೃಶ್ಚಿಕ ರಾಶಿ: 
ಮೇ ಮಾಸದಲ್ಲಿ  ಶುಕ್ರ, ಮಂಗಳ, ಸೂರ್ಯ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯವರಿಗೆ ಕುಟುಂಬ, ಉದ್ಯೋಗ ಕ್ಷೇತ್ರಗಳಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು. ಆದರೆ, ದೀರ್ಘ ಕತ್ತಲೆಯ ನಂತರ ಬೆಳಕು ಬರಲೇ ಬೇಕು ಎಂಬುದನ್ನೂ ನೆನಪಿಡಿ. ಶಾಂತಚಿತ್ತರಾಗಿ ಈ ಸಮಯವನ್ನು ತಳ್ಳಿ, ಮುಂದಿನ ದಿನಗಳಲ್ಲಿ ಉಜ್ವಲವಾದ ಭವಿಷ್ಯ ನಿಮಗಾಗಿ ಕಾದಿರುತ್ತದೆ ಎಂಬುದನ್ನೂ ನೆನಪಿನಳ್ಳಿಡಿ. 


ಇದನ್ನೂ ಓದಿ- ವರ್ಷದ ಬಳಿಕ ವೃಷಭ ರಾಶಿಗೆ ಸೂರ್ಯನ ಪ್ರವೇಶ: ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ


ಮೀನ ರಾಶಿ: 
ಮೇ ಮಾಸವು ಮೀನ ರಾಶಿಯವರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಬಹುದು. ಈಸ್ ಆಮಯದಲ್ಲಿ ಕೌಟುಂಬಿಕ ಸಮಸ್ಯೆಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹದಗೆಡಿಸಬಹುದು. ರಸ್ತೆ ಅಪಘಾತದ ಸಂಭವವಿರುವುದರಿಂದ ವಾಹನ ಸಂಚಾರದ ವೇಳೆ ತುಂಬಾ ಜಾಗರೂಕರಾಗಿರಿ. ನಿಮ್ಮ ಆರೋಗ್ಯದ ವಿಷಯದಲ್ಲಿ ಸಣ್ಣ ವಿಷಯವನ್ನೂ ಕೂಡ ನಿರ್ಲಕ್ಷಿಸಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.