Surya Rashi Parivartane Effect On Zodiac Signs: ನವಗ್ರಹಗಳಲ್ಲಿ ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಸೂರ್ಯ ದೇವನು ಪ್ರತಿ ತಿಂಗಳು ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದನ್ನು ಸೂರ್ಯ ಸಂಕ್ರಮಣ ಎಂತಲೂ ಕರೆಯಲಾಗುತ್ತದೆ. ಇದೀಗ, ಮೇ ತಿಂಗಳ ಮಧ್ಯಂತರದಲ್ಲಿ ಅಂದರೆ ಮೇ 15ರಂದು ಸೂರ್ಯ ರಾಶಿ ಪರಿವರ್ತನೆ ಹೊಂದುವ ಮೂಲಕ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗಮನಾರ್ಹವಾಗಿ, ವರ್ಷದ ಬಳಿಕ ವೃಷಭ ರಾಶಿಗೆ ಸೂರ್ಯನ ಪ್ರವೇಶವು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಅವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇ ಎರಡನೇ ವಾರದಲ್ಲಿ ಸೂರ್ಯ ರಾಶಿ ಪರಿವರ್ತನೆ: ಹೊಳೆಯಲಿದೆ 4 ರಾಶಿಯವರ ಅದೃಷ್ಟ
ಕರ್ಕಾಟಕ ರಾಶಿ:
ಮೇ ತಿಂಗಳಿನಲ್ಲಿ ಸೂರ್ಯ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರ ಬಹುದಿನದ ಕನಸುಗಳು ನನಸಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ಇದೀಗ ವೇಗವನ್ನು ಪಡೆಯಬಹುದು. ಕೌಟುಂಬಿಕ ಜೀವನವೂ ಸುಖಮಯವಾಗಿರಲಿದ್ದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಅತ್ಯುತ್ತಮ ಸಮಯವನ್ನು ಕಳೆಯುವಿರಿ. ಇದರಿಂದ ಉತ್ತಮ ಆರೋಗ್ಯವನ್ನೂ ಕಾಪಾಡಿಕೊಳ್ಳುವಿರಿ.
ಇದನ್ನೂ ಓದಿ- Mangala Shukra Yuti: ಐದು ದಿನಗಳ ಬಳಿಕ ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾರೆ ಮಂಗಳ-ಶುಕ್ರ!
ಸಿಂಹ ರಾಶಿ:
ಸಿಂಹ ರಾಶಿಯವರ ಅಧಿಪತಿಯಾದ ಸೂರ್ಯನ ಸಂಚಾರವು ಈ ರಾಶಿಯವರಿಗೆ ಸಾಕಷ್ಟು ಒಳ್ಳೆಯ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ನೀವು ಆತ್ಮವಿಶ್ವಾಸದಿಂದ ಮಾಡಿದ ಪ್ರತಿ ಕೆಲಸದಲ್ಲಿಯೂ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮನ್ನಣೆ ನೀಡುವರು. ಇದರಿಂದ ಬಡ್ತಿ, ವೇತನ ಹೆಚ್ಚಳಕ್ಕೂ ಅನುಕೂಲವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದರಿಂದ ಸಮಾಜದಲ್ಲಿ ಗೌರವ, ಮನ್ನಣೆಗೂ ಪಾತ್ರರಾಗುವಿರಿ.
ಕನ್ಯಾ ರಾಶಿ:
ಮೇ ಮಾಸದಲ್ಲಿ ಗ್ರಹಗಳ ರಾಜ ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಭಾರೀ ಯಶಸ್ಸು, ಕೀರ್ತಿಯನ್ನು ತರಲಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ನಿಮ್ಮ ಪ್ರಯತ್ನ ಪ್ರತಿಫಲವನ್ನು ನೀಡಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ನಿರೀಕ್ಷೆ ಇದೆ. ಜೊತೆಗೆ ಹಠಾತ್ ಹಣಕಾಸಿನ ಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಇಷ್ಟು ದಿನಗಳ ಆರ್ಥಿಕ ತೊಳಲಾಟಗಳಿಂದ ಮುಕ್ತಿಯನ್ನು ಪಡೆಯುವಿರಿ.
ಇದನ್ನೂ ಓದಿ- ಮೇ ಮಾಸದಲ್ಲಿ ಗುರು ರಾಶಿ ಪರಿವರ್ತನೆ: ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ ಯೋಗ
ಮಕರ ರಾಶಿ:
ಮೇ ತಿಂಗಳಿನಲ್ಲಿ ಸೂರ್ಯ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ಭರ್ಜರಿ ವಿತ್ತೀಯ ಲಾಭವನ್ನು ತರಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಆಧ್ಯಾತ್ಮದತ್ತ ಒಲವು ಹೆಚ್ಚಾಗಲಿದ್ದು, ಧ್ಯಾನ-ಯೋಗದಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಅಷ್ಟೇ ಅಲ್ಲ ನಿಮ್ಮ ಪ್ರೇಮ ಜೀವನವೂ ಕೂಡ ಸುಂದರವಾಗಿರಲಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಒಳ್ಳೆಯ ಮನಸ್ಸಿನಿಂದ ಮಾಡಿದ ಯಾವುದೇ ಕೆಲಸದಲ್ಲಿ ನಿಮಗೆ ಜಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ