Jupiter Transit Effects: ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದರೆ ಅವರು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತದೆ. ಇದೀಗ ಮೇ 01ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಯಲಿದ್ದಾನೆ. ಬೃಹಸ್ಪತಿಯ ಈ ರಾಶಿ ಪರಿವರ್ತನೆಯ ಶುಭ-ಅಶುಭ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ನಿಮ್ಮ ರಾಶಿಯ ಮೇಲೆ ಗುರು ಸಂಚಾರದ ಪರಿಣಾಮವೇನು ತಿಳಿಯೋಣ...
ವೃಷಭ ರಾಶಿಗೆ ಬೃಹಸ್ಪತಿ ಪ್ರವೇಶ: ದ್ವಾದಶ ರಾಶಿಗಳ ಮೇಲೆ ಇದರ ಫಲಾಫಲ
ಮೇಷ ರಾಶಿ:
ಗುರು ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯವನ್ನು ನೀಡಲಿದೆ. ಆದರೆ, ಇದಕ್ಕಾಗಿ ನೀವು ಕಷ್ಟಪಟ್ಟು ಓದುವುದು ಬಹಳ ಮುಖ್ಯ.
ವೃಷಭ ರಾಶಿ:
ಗುರು ಸಂಚಾರದಿಂದ ವೃಷಭ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಾತ್ರವಲ್ಲ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಸಕಾಲ. ಆದಾಗ್ಯೂ, ಹಣಕಾಸಿನ ನಷ್ಟ ಸಾಧ್ಯತೆ ಇದೆ.
ಮಿಥುನ ರಾಶಿ:
ಮಿಥುನ ರಾಶಿಯ ವಿದ್ಯಾರ್ಥಿಗಳು ಅಪೇಕ್ಷಿತ ಫಲಿತಾಂಶ ಪಡೆಯಲು ಶ್ರಮವಹಿಸಬೇಕು. ಪ್ರೀತಿ-ಪ್ರೇಮದಲ್ಲಿರುವ ಯುವಕರಿಗೆ ಮನೆಯ ಹಿರಿಯರಿಂದ ಮದುವೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ:
ಈ ರಾಶಿಯವರು ವಿದ್ಯಾಭ್ಯಾಸ, ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಲು ಪೋಷಕರು, ಶಿಕ್ಷಕರ ಆಶೀರ್ವಾದವನ್ನು ಪಡೆಯುವುದು ಬಹಳ ಮುಖ್ಯ.
ಇದನ್ನೂ ಓದಿ- Shani Ashubha Yoga: ಜೀವನವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲ ಶನಿಯ ಈ 3 ಅಪಾಯಕಾರಿ ಯೋಗಗಳಿವು
ಸಿಂಹ ರಾಶಿ:
ಈ ರಾಶಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲು ನಿಮ್ಮ ಸೋಮಾರಿತನವನ್ನು ಬಿಟ್ಟು ಕಷ್ಟ ಪಟ್ಟು ಓದಿ. ಉದ್ಯೋಗಸ್ಥರೂ ಸಹ ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲ ಪಡೆಯಬಹುದು.
ಕನ್ಯಾ ರಾಶಿ:
ದೇವಗುರು ಬೃಹಸ್ಪತಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ನೀಡಲಿದ್ದಾನೆ. ನಿಮ್ಮ ಸ್ವಭಾವವು ನಿಮ್ಮ ಕುಟುಂಬದವರ ಮೇಲೂ ಪ್ರಭಾವ ಬೀರುವುದರಿಂದ ಏನೇ ಕೆಲಸ ಮಾಡುವಾಗಲೂ ನಿಮ್ಮ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.
ತುಲಾ ರಾಶಿ:
ದೀರ್ಘಕಾಲದಿಂದ ಮದುವೆಗಾಗಿ ಯತ್ನಿಸುತ್ತಿರುವ ತುಲಾ ರಾಶಿಯವರಿಗೆ ಈ ಸಮಯದಲ್ಲಿ ಮದುವೆ ಫಿಕ್ಸ್ ಆಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಗಳಿಸುವರು.
ವೃಶ್ಚಿಕ ರಾಶಿ:
ಗುರು ರಾಶಿ ಪರಿವರ್ತನೆಯ ಪ್ರಭಾವದಿಂದ ವೃಶ್ಚಿಕ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಸಿಗಲಿದೆ. ಸರ್ಕಾರಿ ಕೆಲಸಕ್ಕಾಗಿ ಯತ್ನಿಸುತ್ತಿರುವವರಿಗೂ ಈ ಸಮಯದಲ್ಲಿ ಗುಡ್ ನ್ಯೂಸ್ ಸಿಗಲಿದೆ.
ಇದನ್ನೂ ಓದಿ- ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಬಂಪರ್ ಲಾಭ
ಧನು ರಾಶಿ:
ಧನು ರಾಶಿಯ ವಿದ್ಯಾರ್ಥಿಗಳು, ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಆತ್ಮವಿಶ್ವಾಸದಿಂದ ನೀವು ಮಾಡಿದ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮಕರ ರಾಶಿ:
ಗುರು ಸಂಚಾರವು ಮಕರ ರಾಶಿಯವರಿಗೆ ಸವಾಲಿನ ಸಮಯ ಎಂದೇ ಹೇಳಬಹುದು. ನೀವು ಯಾವುದೇ ವಿಚಾರದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತೋರದಿದ್ದರೆ ಒಳಿತು. ಇಲ್ಲದಿದ್ದರೆ, ಸಂಕಷ್ಟಕ್ಕೆ ಸಿಲುಕಬೇಕಾಗಬಹುದು.
ಕುಂಭ ರಾಶಿ:
ಕುಂಭ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಇದಲ್ಲದೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಉತ್ತಮ ಸಮಯ ಇದಾಗಿದೆ.
ಮೀನ ರಾಶಿ:
ಗುರು ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ವಿದ್ಯಾಭ್ಯಾಸವಿರಲಿ ಅಥವಾ ಉದ್ಯೋಗ ರಂಗವಿರಲಿ ನೀವು ಶ್ರಮವಹಿಸಿದರಷ್ಟೇ ಒಳ್ಳೆಯ ಫಲ ನಿಮಗೆ ಸಿಗಲಿದೆ. ಇಲ್ಲದಿದ್ದರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.