Budhaditya Yoga Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಮೊನ್ನೆಯಷ್ಟೇ ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನ ಮಕರ ಸಂಕ್ರಮಣದ ಬಳಿಕ ಮಕರ ಸಂಕ್ರಾಂತಿ ಹಬ್ಬವನ್ನು ಕೂಡ ಆಚರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗ್ರಹಗಳ ರಾಜಕುಮಾರನಾದ ಬುಧನು ಕೂಡ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ರಾಶಿಚಕ್ರ ಚಿಹ್ನೆ ಮಕರ ರಾಶಿಯಲ್ಲಿ ಸೂರ್ಯ ಮತ್ತು ಬುಧರ ಸಂಯೋಗದಿಂದಾಗಿ ಶುಭಕರವಾದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. 


COMMERCIAL BREAK
SCROLL TO CONTINUE READING

ಫೆಬ್ರವರಿ 7, 2023ರಂದು ಮಕರ ರಾಶಿಯಲ್ಲಿ ಸೂರ್ಯ ಮತ್ತು ಬುಧರ ಸಂಯೋಗದಿಂದಾಗಿ ಬುಧಾದಿತ್ಯ ಯೋಗ ರಚನೆಯಾಗಲಿದೆ. ಬುಧಾದಿತ್ಯ ಯೋಗದ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ ಇದರ ಪ್ರಭಾವ ನಾಲ್ಕು ರಾಶಿಯವರಿಗೆ ತುಂಬಾ ಶುಭಕರ ಎಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...


ಬುಧಾದಿತ್ಯ ಯೋಗದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ:
ಮೇಷ ರಾಶಿ:

ಫೆಬ್ರವರಿ 7ರಂದು ಮಕರ ರಾಶಿಗೆ ಬುಧನ ಪ್ರವೇಶದಿಂದ ರೂಪುಗೊಳ್ಳಲಿರುವ ಬುಧಾದಿತ್ಯ ಯೋಗದಿಂದಾಗಿ ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.


ಇದನ್ನೂ ಓದಿ- Rahu Gochar 2023: ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ರಾಹು


ಕನ್ಯಾ ರಾಶಿ:
ಬುಧಾದಿತ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಗರಿಷ್ಠ ಲಾಭದಾಯಕವಾಗಿದೆ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ಬಲಶಾಲಿಯಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಸಮಯ ತುಂಬಾ ಚೆನ್ನಾಗಿದೆ. ಪ್ರೇಮ ಜೀವನ ಉತ್ತಮವಾಗಿರಲಿದೆ.


ತುಲಾ ರಾಶಿ:
ಬುಧಾದಿತ್ಯ ಯೋಗದ ಪರಿಣಾಮದಿಂದಾಗಿ ತುಲಾ ರಾಶಿಯವರಿಗೆ ಆದಾಯ ಹೆಚ್ಚಾಗಲಿದ್ದು, ಆಸ್ತಿ-  ವಾಹನ ಖರೀದಿ ಯೋಗವೂ ಇದೆ.  ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದ್ದು, ಆಸ್ತಿಯಿಂದ ಲಾಭವಾಗಲಿದೆ.


ಇದನ್ನೂ ಓದಿ- Shukra Gochar 2023: ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ- ಈ ರಾಶಿಯವರಿಗೆ ಧನ ಲಾಭ


ಮಕರ ರಾಶಿ:
ಮಕರ ರಾಶಿಯಲ್ಲಿಯೇ ಸೂರ್ಯ ಮತ್ತು ಬುಧರ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿರುವುದರಿಂದ ಇದರ ಗರಿಷ್ಠ ಪರಿಣಾಮ ಮಕರ ರಾಶಿಯವರ ಮೇಲೆ ಕಂಡು ಬರಲಿದೆ. 
ಈ ಸಮಯದಲ್ಲಿ ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.