Shukra Gochar 2023: ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ- ಈ ರಾಶಿಯವರಿಗೆ ಧನ ಲಾಭ

Venus Transit Effect: ಸಂಕ್ರಾಂತಿ ಬಳಿಕ ಸಂಪತ್ತು, ಐಶಾರಾಮಿ ಜೀವನಕಾರಕನಾದ ಶುಕ್ರನು ತನ್ನ ಮಿತ್ರ ಗ್ರಹ ಶನಿಯ ರಾಶಿಯಲ್ಲಿ ಎಂದರೆ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಜನವರಿ 22ರಂದು ಶುಕ್ರ ರಾಶಿ ಪರಿವರ್ತನೆ ನಡೆಯಲಿದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jan 12, 2023, 07:54 AM IST
  • ಶುಕ್ರನು ಜನವರಿ ತಿಂಗಳ ಕೊನೆಯ ವಾರದಲ್ಲಿ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.
  • 2023ರಲ್ಲಿ ಜನವರಿ 22 ರಂದು ಶುಕ್ರನು ತನ್ನ ಮಿತ್ರ ಗ್ರಹ ಶನಿಯ ರಾಶಿಯಲ್ಲಿ ಎಂದರೆ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
  • ಈ ಸಮಯದಲ್ಲಿ ಶುಕ್ರನ ದಯೆಯಿಂದ ಮೂರು ರಾಶಿಯವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ.
Shukra Gochar 2023: ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ- ಈ ರಾಶಿಯವರಿಗೆ ಧನ ಲಾಭ  title=
Shukra Gochar

Venus Transit Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಸಂತೋಷ, ಸಂಪತ್ತು, ಐಶಾರಾಮಿ ಜೀವನಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಜನವರಿ ತಿಂಗಳ ಕೊನೆಯ ವಾರದಲ್ಲಿ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 2023ರಲ್ಲಿ ಜನವರಿ 22 ರಂದು ಶುಕ್ರನು ತನ್ನ ಮಿತ್ರ ಗ್ರಹ ಶನಿಯ ರಾಶಿಯಲ್ಲಿ ಎಂದರೆ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರ ರಾಶಿ ಪರಿವರ್ತನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮವನ್ನು ಬೀರಲಿದೆ. ಆದರೆ, ಈ ಸಮಯದಲ್ಲಿ ಶುಕ್ರನ ದಯೆಯಿಂದ ಮೂರು ರಾಶಿಯವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ...

ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶ- ಹೊಳೆಯಲಿದೆ ಮೂರು ರಾಶಿಯವರ ಅದೃಷ್ಟ :
ವೃಷಭ ರಾಶಿ:

ಶನಿಯ ರಾಶಿಚಕ್ರದಲ್ಲಿ ಶುಕ್ರನ ರಾಶಿ ಪರಿವರ್ತನೆಯಿಂದಾಗಿ ವೃಷಭ ರಾಶಿಯವರಿಗೆ ಅಧಿಕ ಲಾಭವಾಗಲಿದೆ. ಈ ಸಮಯದಲ್ಲಿ ವೃಷಭ ರಾಶಿಯ ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯುವ ಸಾಧ್ಯತೆ ಇದೆ. ಇದಲ್ಲದೆ, ಶುಕ್ರನ ಆಶೀರ್ವಾದದಿಂದ ಮಂಗಳ ಕಾರ್ಯಗಳು ಜರುಗಲಿದ್ದು, ಭೂಮಿ, ವಾಹನ ಖರೀದಿಯ ಯೋಗವೂ ಇದೆ.

ಇದನ್ನೂ ಓದಿ- Shani Gochar 2023: ಇನ್ನೊಂದು ವಾರದಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ ನಿಮ್ಮ ಮೇಲೆ ಏನು ಪರಿಣಾಮ

ತುಲಾ ರಾಶಿ: 
ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಬಣ್ಣದ ಬದುಕಿನಲ್ಲಿರುವ ಸ್ತ್ರೀಯರಿಗೆ ಸಮಯದ ಉತ್ತಮವಾಗಿದೆ. ನಿಮ್ಮ ಕಲೆಗೆ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಮೌಲ್ಯ ದೊರೆಯುವ ಸಾಧ್ಯತೆ ಇದೆ. ಇದಲ್ಲದೆ, ಕೌಟುಂಬಿಕ ಜೀವನವೂ ಮಾಧುರ್ಯದಿಂದ ಕೂಡಿರಲಿದೆ.

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಕುಂಭ ರಾಶಿ:
ಸ್ವ ರಾಶಿಯಲ್ಲಿ ಶುಕ್ರನ ಸಂಚಾರವು ಕುಂಭ ರಾಶಿಯವರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಕುಂಭ ರಾಶಿಯಾರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಇದು ಉತ್ತಮ ಸಮಯ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂತಾನ ಭಾಗ್ಯವೂ ಪ್ರಾಪ್ತಿಯಾಗಬಹುದು. ಉದ್ಯೋಗ-ವ್ಯವಹಾರದಲ್ಲೂ ನಿರೀಕ್ಷಿತ ಫಲ ದೊರೆಯಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮ್ಮ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News