Tips For Prosperity: ಲಕ್ಷ್ಮಿ ಕೃಪೆಯಿಂದ ಮನೆಯಲ್ಲಿರುವ ತಿಜೋರಿ ಸದಾ ತುಂಬಿ ತುಳುಕುತ್ತಿರಬೇಕೇ? ಇಲ್ಲಿವೆ ಕೆಲ ಉಪಾಯಗಳು!
Tips For Financial Prosperity::ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ (Remedies To Please Goddess Lakshmi) ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. (Spiritual News In Kannada)
Tips For Financial Prosperity:ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ (Remedies To Please Goddess Lakshmi) ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. ಇದಕ್ಕೆ ಹಲವು ವಾಸ್ತು ಕಾರಣಗಳಿರಬಹುದು. ಹಣವನ್ನು ಸುರಕ್ಷಿತವಾಗಿ ಇಡಲು ಬಳಸಲಾಗುವ ತಿಜೋರಿ ಎಂದಿಗೂ ಕೂಡ ಖಾಲಿ ಇರಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ತಿಜೋರಿಯಲ್ಲಿ ಯಾವಾಗಲು ಈ ಲೇಖನದಲ್ಲಿ ಸೂಚಿಸಲಾಗಿರುವ ಯಾವುದಾದರು ಒಂದು ಸಂಗತಿಯನ್ನು ಇರಿಸಿದರೆ, ನಿಮ್ಮ ಸಂಪತ್ತು ದ್ವಿಗುಣವಾಗುತ್ತದೆ ಎನ್ನಲಾಗಿದೆ. (Spiritual News In Kannada)
ಕಮಲದ ಹೂವು- ಸದಾ ವಿಷ್ಣುವಿನ ಕೈಯಲ್ಲಿರುವ ಮತ್ತು ತಾಯಿ ಲಕ್ಷ್ಮಿಗೆ ಆಸನವಾಗಿರುವ ಈ ಹೂವನ್ನು ತಿಜೋರಿಯಲ್ಲಿ ಕಾಣುವಂತೆ ಇಡುವುದು ತುಂಬಾ ಮಂಗಳಕರವಾಗಿದೆ. ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ನೀವು ಕಮಲದ ಹೂವನ್ನು ಅರ್ಪಿಸಬೇಕು ಮತ್ತು ನಂತರ ಅದನ್ನು ನಿಮ್ಮ ತಿಜೋರಿಯಲ್ಲಿಡಬೇಕು. ಈ ಹೂವು ಒಣಗಿಸಿದ ನಂತರ, ಅದನ್ನು ತಕ್ಷಣವೇ ಅಲ್ಲಿಂದ ತೆಗೆದುಹಾಕಿ. ಕಮಲದ ಹೂವನ್ನು ಇಡುವುದರಿಂದ ಸಂಪತ್ತು ಹೆಚ್ಚುತ್ತದೆ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. (Astrological remedies for financial growth)
ಅರಿಶಿನದ ಉಂಡೆ- ಅರಿಶಿನದ ಉಂಡೆ ನಿಮ್ಮ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿಯೂ ಕೂಡ ಬಳಸಲಾಗುತ್ತದೆ. ಇದಕ್ಕಾಗಿ ಗುರುವಾರ ಅಥವಾ ಶುಕ್ರವಾರದಂದು ಅರಿಶಿನದ ಉಂಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇರಿಸಿ. ಇದರಿಂದ ಲಕ್ಷ್ಮಿಯ ಕೃಪೆ ನಿಮ್ಮ ಮನೆಯಲ್ಲಿಯೇ ಉಳಿದು ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.(Astrological reasons for financial problems)
ಹಳದಿ ಕವಡೆ- ಹಳದಿ ಕವಡೆಗಳು ತಾಯಿ ಲಕ್ಷ್ಮಿಗೆ ತುಂಬಾ ಇಷ್ಟ. ಇವುಗಳನ್ನು ಹಣದ ತಿಜೋರಿಯಲ್ಲಿ ಇಡಬೇಕು ಎನ್ನಲಾಗುತದೆ. ಅಂದಹಾಗೆ, ದೀಪಾವಳಿ ಅಥವಾ ಧನತ್ರಯೋದಶಿಯ ದಿನದಂದು ಪೂಜಿಸಿದ ನಂತರ ಹಳದಿ ಕವಡೆಗಳನ್ನು ತಿಜೋರಿಯಲ್ಲಿ ಇರಿಸಲಾಗುತ್ತದೆ. ಇದಲ್ಲದೆ ನೀವು ಅವುಗಳನ್ನು ಯಾವುದೇ ಶುಕ್ರವಾರ ಅಥವಾ ಹುಣ್ಣಿಮೆಯ ದಿನದಂದೂ ಕೂಡ ತಿಜೋರಿಯಲ್ಲಿರಿಸಬಹುದು.
ಇದನ್ನೂ ಓದಿ-Chanakya Niti - ನಿಮ್ಮ ಈ ಅಭ್ಯಾಸಗಳು ದಾರಿದ್ರ್ಯಕ್ಕೆ ಕಾರಣವಾಗುತ್ತವೆ! ತಕ್ಷಣ ಬದಲಾಯಿಸಿಕೊಳ್ಳಿ!
ಕನ್ನಡಿ ಅಥವಾ ದರ್ಪಣ- ವಾಸ್ತುದಲ್ಲಿ ಕನ್ನಡಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನ್ನಡಿಯಲ್ಲಿ ಏನೇ ಕಂಡರೂ ಅದು ದ್ವಿಗುಣವಾಗುತ್ತದೆ ಎನ್ನುತ್ತಾರೆ. ಆದ್ದರಿಂದ, ತಿಜೋರಿಯ ಉತ್ತರ ಭಾಗದಲ್ಲಿ ಸಣ್ಣ ಕನ್ನಡಿ ಹಾಕಿ. ನಿಮ್ಮ ಹಣ ದ್ವಿಗುಣಗೊಳ್ಳಲು ಸಮಯ ಬೇಕಾಗುವುದಿಲ್ಲ.
ಕೆಂಪು ಬಟ್ಟೆ- ತಾಯಿ ಲಕ್ಷ್ಮಿಗೆ ಕೆಂಪು ಬಣ್ಣದ ಬಟ್ಟೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಹಣವನ್ನು ಇರಿಸುವ ಸ್ಥಳದಲ್ಲಿ ಕೆಂಪು ಬಟ್ಟೆಯಲ್ಲಿ 11 ಅಥವಾ 21 ರೂಪಾಯಿಗಳನ್ನು ಕಟ್ಟಿಕೊಳ್ಳಿ ಮತ್ತು ಅದನ್ನು ಹುಣ್ಣಿಮೆ, ಧನತ್ರಯೋದಶಿ ಅಥವಾ ದೀಪಾವಳಿಯಂತಹ ಯಾವುದೇ ಶುಭ ದಿನದಂದು ಇರಿಸಿ ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚಾಗತೊಡಗುತ್ತದೆ.
ಇದನ್ನೂ ಓದಿ-Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ!
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI