Tips For Prosperity In Life: ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಶ್ರೀಮಂತರಾಗುವ ಕನಸು ಯಾರಿಗಿರಲ್ಲ ಹೇಳಿ. ಇದರ ಹೊರತಾಗಿಯೂ ಕೂಡ ಎಲ್ಲರ ಈ ಕನಸು ಈಡೇರುವುದಿಲ್ಲ. ಈ ಕನಸು ಪೂರೈಸಲು ನಾವು ನಮ್ಮ ಕೆಲಸ ಮಾಡುವ ವಿಧಾನವನ್ನು ಬದಲಾವಣೆ (Habits) ಮಾಡಬೇಕು. (Spiritual News In Kannada)
1. ಚಾಣಕ್ಯ ನೀತಿಯಲ್ಲಿದೆ (Chanakya Niti) ಜೀವನದ ಸಾರ - ಚಾಣಕ್ಯ ನೀತಿಯಲ್ಲಿ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಮತ್ತು ವ್ಯಕ್ತಿಗಳ ಬಗ್ಗೆ ತಿಳಿಸಲಾಗಿದೆ. ಚಾಣಕ್ಯ ಬಡತನದ (Poverty) ಬಗ್ಗೆಯೂ ಮಾತನಾಡಿದ್ದಾರೆ. ಇಂದು ನಾವು ಅಂತಹ ಕೆಲ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ. ಸಮಯಕ್ಕೆ ಇರುವಂತೆ ಈ ಅಭ್ಯಾಸಗಳನ್ನು ಸರಿಪಡಿಸದೆ ಹೋದರೆ, ನಂತರ ವ್ಯಕ್ತಿಯ ಜೀವನವು ಯಾವಾಗಲೂ ಬಡತನದಲ್ಲಿ ಕಳೆದುಹೋಗುತ್ತದೆ.(chanakya rules for success)
2. ಬೆಳಗ್ಗೆ ಬೇಗನೆ ಏಳಲು ಪ್ರಯತ್ನಿಸಿ - ಪ್ರತಿಯೊಬ್ಬರೂ ಬೆಳಗ್ಗೆ ಬೇಗನೆ ಎದ್ದು, ಬೆಳಗಿನ ಸಮಯದ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಬೆಳಗ್ಗೆ ಬೇಗನೆ ಏಳದೆ ತುಂಬಾ ಹೊತ್ತು ಹಾಸಿಗೆಯಲ್ಲಿ ಕಾಲ ಕಳೆಯುವವರಿಂದ ತಾಯಿ ಲಕ್ಷ್ಮಿ (Goddess Lakshmi) ಮುನಿಸಿಕೊಳ್ಳುವ ಸಾಧ್ಯತೆ ಇದೆ ಮತ್ತು ಇದರಿಂದ ಮನೆಯಲ್ಲಿ ದಾರಿದ್ರ್ಯ ಬರಬಹುದು. (chanakya niti important points in kannada)
3. ನಿತ್ಯ ಸ್ನಾನ ಮಾಡಿ ಸ್ವಚ್ಛ ಬಟ್ಟೆ ಧರಿಸಿ - ಬೆಳಿಗ್ಗೆ ಎದ್ದಾಕ್ಷಣ ನಿತ್ಯ ಕರ್ಮಗಳನ್ನು ಮುಗಿಸಿ ಹಲ್ಲುಗಳನ್ನು ಉಜ್ಜಬೇಕು. ಹೇಗೆ ಮಾಡದೆ ಹೋದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಹಾಗೂ ನೀವು ಸಂಗ್ರಹಿಸಿಟ್ಟ ಹಣ ಅನಾರೋಗ್ಯಕ್ಕೆ ಖರ್ಚಾಗುವ ಸಾಧ್ಯತೆ ಇದೆ.
4. ಸಂತುಲಿತ ಆಹಾರ ಸೇವಿಸಿ - ಶರೀರವನ್ನು ಸರಿಯಾಗಿಡಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅವಶ್ಯಕ. ಇದರಿಂದ ನಮ್ಮ ಶರೀರದಲ್ಲಿ ಶಕ್ತಿ ಇರುತ್ತದೆ. ಊಟ ಮಾಡುವಾಗ ನಾವು ನಮ್ಮ ಶಾರೀರಿಕ ಅಗತ್ಯತೆಗಳನ್ನು ತಿಳಿದುಕೊಳ್ಳಬೇಕು. ಅತಿ ಹೆಚ್ಚು ಊಟ ಮಾಡುವುದರಿಂದ ಬೊಜ್ಜು, ಸಕ್ಕರೆ ಕಾಯಿಲೆಗಳು (Diabetes) ಬರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೆಯಿಂದ ಹಣ ಹೊರಟುಹೋಗಬಹುದು.
5. ಪ್ರತಿ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿರಿ - ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲಿ ಮೃದುಭಾಷೆ ನಿಮ್ಮದಾಗಿರಲಿ ಮತ್ತು ಸಕಾರಾತ್ಮಕವಾಗಿ ಯೋಚಿಸಿ. ಸಿಹಿಯಾಗಿ ಮಾತನಾಡುವವರು ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಕಹಿ ಮಾತನಾಡುವವರು, ಚಾಡಿ ಹೇಳುವವರನ್ನು ಜನರು ಮೆಚ್ಚುವುದಿಲ್ಲ. ಈ ಚರಿತ್ರೆ ಇರುವವರ ಬಳಿಯೂ ಕೂಡ ಲಕ್ಷ್ಮಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ ಹಾಗೂ ಕೆಲವೇ ದಿನಗಳಲ್ಲಿ ಬಡತನ ಎದುರಾಗುತ್ತದೆ.
ಇದನ್ನೂ ಓದಿ-Lifestyle Tips: ತಿಳಿದು ಅಥವಾ ತಿಳಿಯದೆ ನೀವು ಮಾಡುವ ಈ ತಪ್ಪುಗಳು ಜೀವನದಲ್ಲಿ ದಾರಿದ್ರ್ಯಕ್ಕೆ ಕಾರಣ!
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI