Diabetes ಸೇರಿದಂತೆ ಈ ಐದು ಸಮಸ್ಯೆಗಳ ಅಪಾಯ ಹೆಚ್ಚಿಸುತ್ತೆ ನಿದ್ರಾಹೀನತೆ!

Sleeping Disorder: ಉತ್ತಮ ಗುಣಮಟ್ಟದ ಮತ್ತು ಗಾಢವಾದ ನಿದ್ರೆ ಪಡೆಯದಿರುವುದು ದೇಹದ ಮೇಲೆ ವಿವಿಧ ರೀತಿಯ ಪ್ರತಿಕೂಲ ಪ್ರಭಾವವನ್ನುಂಟು ಮಾಡುತ್ತದೆ. ಹೀಗಾಗಿ ನಿದ್ರೆಯ ಕೊರೆತೆಯಿಂದಾಗಿ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಇಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)  

Written by - Nitin Tabib | Last Updated : Mar 17, 2024, 01:17 PM IST
  • ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಡಯಾಬಿಟಿಸ್ ಇಂಡಿಯಾದ ಪ್ರಕಾರ,
  • ನೀವು ಉತ್ತಮ ಮತ್ತು ಗಾಢವಾದ ನಿದ್ರೆಯನ್ನು ಮಾಡದೆ ಹೋದಲ್ಲಿ , ಅದು ಮಧುಮೇಹದ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  • 3 ರಿಂದ 4 ಗಂಟೆಗಳ ಕಾಲ ನಿದ್ದೆ ಮಾಡುವವರಿಗೆ ಮಧುಮೇಹದ ಅಪಾಯ ಹೆಚ್ಚು ಎಂದು ಸಂಶೋಧನೆಯು ಹೇಳುತ್ತದೆ.
Diabetes ಸೇರಿದಂತೆ ಈ ಐದು ಸಮಸ್ಯೆಗಳ ಅಪಾಯ ಹೆಚ್ಚಿಸುತ್ತೆ ನಿದ್ರಾಹೀನತೆ! title=

Sleeping Disorder Health Effects: ನಿದ್ರೆ ಮತ್ತು ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ನಿದ್ರೆ ದಿನ ಆಚರಿಸಲಾಗುತ್ತದೆ. ಅರ್ಥಾತ್ ಆರೋಗ್ಯದ ದೃಷ್ಟಿಯಿಂದ ನಿದ್ದೆ ಎಷ್ಟು ಮುಖ್ಯ ಎಂದು ತಿಳಿಯಪಡಿಸುವುದು ಇದರ ಉದ್ದೇಶ. ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ ಎಂದು ನಮ್ಮಲ್ಲಿ ಹಲವರು ತಿಳಿದಿದ್ದಾರೆ(Sleeping disorder symptoms). ಆದರೆ ಒಳ್ಳೆಯ ಮತ್ತು ಗಾಢವಾದ ನಿದ್ದೆ ಮಾಡದಿದ್ದರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.  ಬಹುಶಃ ಅನೇಕ ಜನರಿಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಅನೇಕ ರೋಗಗಳ ಅಪಾಯವಿದೆ ಎಂದು ತಿಳಿದಿರುವುದಿಲ್ಲ. ಒಳ್ಳೆಯ ಮತ್ತು ಗಾಢವಾದ ನಿದ್ದೆ ಮಾಡದಿರುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)

ಉತ್ತಮ ನಿದ್ರೆಯ ಕೊರತೆಯಿಂದ ಮಧುಮೇಹದ ಅಪಾಯ ಹೆಚ್ಚಾಗಬಹುದು (Deep sleep disorder symptoms)
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಡಯಾಬಿಟಿಸ್ ಇಂಡಿಯಾದ ಪ್ರಕಾರ, ನೀವು ಉತ್ತಮ ಮತ್ತು ಗಾಢವಾದ ನಿದ್ರೆಯನ್ನು ಮಾಡದೆ ಹೋದಲ್ಲಿ , ಅದು ಮಧುಮೇಹದ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 3 ರಿಂದ 4 ಗಂಟೆಗಳ ಕಾಲ ನಿದ್ದೆ ಮಾಡುವವರಿಗೆ ಮಧುಮೇಹದ ಅಪಾಯ ಹೆಚ್ಚು ಎಂದು ಸಂಶೋಧನೆಯು ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ಮಧುಮೇಹದಂತಹ ಸಮಸ್ಯೆ ನಿಮಗೆ ಬರಬಾರದು ಎಂದು ನೀವು ಬಯಸುತ್ತಿದ್ದಾರೆ, ಖಂಡಿತವಾಗಿಯೂ ಉತ್ತಮ ಮತ್ತು ಗಾಢವಾದ ನಿದ್ರೆ ಮಾಡಿ.(What are the 5 types of sleep disorders)

ಮೆದುಳಿನ ಮೇಲೆ ಪರಿಣಾಮ ಉಂಟಾಗುತ್ತದೆ
ನೀವು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಅದು ನಿಮ್ಮ ಮೆದುಳಿನ ಅಂಗಾಂಶಗಳ ಮೇಲೆ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ ನಿಮ್ಮ ಸ್ಮರಣ ಶಕ್ತಿಯ ಮೇಲೂ ಅದು ಪರಿಣಾಮ ಬೀರಬಹುದು (What causes sleep disorders).

ಮನಸ್ಥಿತಿ ಹಾಳಾಗುತ್ತದೆ
ಉತ್ತಮ ಮತ್ತು ಗಾಢವಾದ ನಿದ್ರೆ ಮಾಡದೆ ಹೋದರೆ, ಮೂಡ್ ಹಾಳಾಗುತ್ತದೆ, ಅಷ್ಟೇ ಅಲ್ಲ ಜನರು ಅತಿಯಾದ ಕೋಪ ಮತ್ತು ಕಿರಿಕಿರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ, ಪ್ರತಿದಿನ ಉತ್ತಮ ಮತ್ತು ಗಾಢ  ನಿದ್ರೆ ಪಡೆಯಲು ಪ್ರಯತ್ನಿಸಿ.

ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ 
ಸಾಕಷ್ಟು ನಿದ್ರೆ ಮಾಡದಿರುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಮಲಬದ್ಧತೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಕ್ರಮೇಣ ಈ ಸಮಸ್ಯೆಯು ಪೈಲ್ಸ್‌ಗೆ ಕಾರಣವಾಗಬಹುದು.

ಇದನ್ನೂ ಓದಿ-Hair Fall Causing Food: ಈ ಪದಾರ್ಥಗಳ ಸೇವನೆ ಬೋಳು ತಲೆ ಸಮಸ್ಯೆಗೆ ಕಾರಣ, ತಕ್ಷಣ ನಿಲ್ಲಿಸಿ!

ದೇಹಕ್ಕೆ ವಿಶ್ರಾಂತಿ ಸಿಗುವುದಿಲ್ಲ
ಉತ್ತಮ ಮತ್ತು ಗಾಢ ನಿದ್ರೆಯ ಕೊರತೆಯಿಂದಾಗಿ, ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಇಂತಹ  ಪರಿಸ್ಥಿತಿಯಲ್ಲಿ, ವ್ಯಕ್ತಿ ತುಂಬಾ ಆಯಾಸವನ್ನು ಅನುಭವಿಸಬಹುದು. ಶಕ್ತಿಯ ಮಟ್ಟವೂ ಸಹ ಪ್ರಭಾವಕ್ಕೆ ಒಳಗಾಗುತ್ತದೆ . ನಿಮಗೂ ನಿದ್ದೆ ಬರದಿದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ-Diabetes-Cholesterol Control Tips: ಮಧುಮೇಹ-ಕೊಲೆಸ್ಟರಾಲ್ ಸೇರಿದಂತೆ ಹಲವು ಕಾಯಿಲೆಗಳಿಗೆ ಪರಿಣಾಮಕಾರಿ ಮನೆಮದ್ದು ಈ ಹಣ್ಣು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News