ನಾಲಿಗೆ ಜಾರಿತು ತಪ್ಪಾಯ್ತು ಕ್ಷಮಿಸಿ..! ಬಹಿರಂಗವಾಗಿ ಭಾರತೀಯರ ಕ್ಷಮೆ ಕೇಳಿದ ಪಾಕ್ ಕ್ರಿಕೆಟಿಗ
Abdul razzaq on Aishwarya rai : ನಾಲಿಗೆ ಸ್ಲಿಪ್ ಆಗಿ ಈ ರೀತಿ ಹೇಳಿದೆ. ಆಕಸ್ಮಿಕವಾಗಿ ಐಶ್ವರ್ಯಾ ಹೆಸರು ಬಂತು. ನನ್ನ ತಪ್ಪಿಗೆ ನಾನು ನಿಜವಾಗಿಯೂ ಕ್ಷಮೆ ಕೇಳಲು ಬಯಸುತ್ತೇನೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕ್ಷಮೆಯಾಚಿಸಿದ್ದಾರೆ.
Abdul razzaq apology : ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರಿ ವಿರೋಧಕ್ಕೆ ಕಾರಣವಾಗಿದ್ದ, ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಬುಧವಾರ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. "ನಾಲಿಗೆಯ ಸ್ಲಿಪ್" ಆಗಿ ಈ ರೀತಿ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಯಾರ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಪೋಸ್ಟ್ ಮಾಡಿರುವ ರಜಾಕ್, ನಾವು ಕ್ರಿಕೆಟ್, ಕೋಚಿಂಗ್ ಮತ್ತು ಉದ್ದೇಶದ ಬಗ್ಗೆ ಮಾತನಾಡುತ್ತಿದ್ದೆವು. ಪರಿಸ್ಥಿತಿಯನ್ನು ವಿವರಿಸಲು ಉದಾಹರಣೆಯನ್ನು ನೀಡುವ ಭರದಲ್ಲಿ, ನಾಲಿಗೆ ಸ್ಲಿಪ್ ಆಗಿ ಈ ರೀತಿ ಹೇಳಿದೆ. ಆಕಸ್ಮಿಕವಾಗಿ ಐಶ್ವರ್ಯಾ ಹೆಸರು ಬಂತು. ನನ್ನ ತಪ್ಪಿಗೆ ನಾನು ನಿಜವಾಗಿಯೂ ಕ್ಷಮೆ ಕೇಳಲು ಬಯಸುತ್ತೇನೆ, ಐಶ್ವರ್ಯಾ ಅವರನ್ನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ?
ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಮಾಜಿ ವೇಗಿ ಉಮರ್ ಗುಲ್ ಅವರನ್ನೊಳಗೊಂಡ ಟೀಂ ಕಾರ್ಯಕ್ರಮವೊಂದರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಕುರಿತು ಮಾತನಾಡುವಾಗ ರಜಾಕ್ ನಟಿ ಐಶ್ವರ್ಯಾ ರೈ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಪಾಕ್ ಮಾಜಿ ಆಟಗಾರನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
'ಒಂದು ವೇಳೆ ನಾನು ಐಶ್ವರ್ಯಾ ರೈ ಜೊತೆ ವಿವಾಹ ಮಾಡಿಕೊಂಡು...' ಪಾಕ್ ಕ್ರಿಕೇಟಿಗನ ಉದ್ಧಟತನಕ್ಕೆ, ಚಪ್ಪಾಳೆ ಹೊಡೆದ ಆಫ್ರಿದಿ!
ನಂತರ, ಶಾಹಿದ್ ಅಫ್ರಿದಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿ, ಆ ಸಮಯದಲ್ಲಿ ರಜಾಕ್ ಏನು ಹೇಳಿದರು ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದರು. ಅಲ್ಲದೆ, "ನಾನು ವೇದಿಕೆಯಲ್ಲಿ ನಕ್ಕಿದ್ದೇನೆ ಆದರೆ ಅವನು ಹೇಳಿದ್ದು ನನಗೆ ಅರ್ಥವಾಗಲಿಲ್ಲ... ನಾನು ಮನೆಗೆ ಹಿಂದಿರುಗಿದಾಗ, ನಾನು ಯಾರೋ ಕಳುಹಿಸಿದ ವೀಡಿಯೊವನ್ನು ನೋಡಿದಾಗ ಅರ್ಥವಾಯಿತು, ರಜಾಕ್ ಹಾಗೆ ಹೇಳಬಾರದಿತ್ತು. ನನಗೆ ವಿಚಿತ್ರವೆನಿಸಿತು ... ಇಂತಹ ಹಾಸ್ಯಗಳು ಮಾಡಬಾರದು" ಎಂದು ಅಫ್ರಿದಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.