ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ?

World Cup Semi final : ಸೆಮಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ಮುಖ್ಯ ವಿಚಾರಗಳನ್ನು ಹೇಳಿದ್ದಾರೆ. 

Written by - Ranjitha R K | Last Updated : Nov 15, 2023, 10:49 AM IST
  • ಆಟವನ್ನು ಸುಧಾರಿಸುವತ್ತ ಗಮನ
  • ತಂಡದ ಮನಸ್ಥಿತಿ ಉತ್ತಮವಾಗಿದೆ - ಟೀಂ ಇಂಡಿಯಾ ನಾಯಕ
  • 'ಟಾಸ್ ದೊಡ್ಡ ಅಂಶವಾಗುವುದಿಲ್ಲ - ರೋಹಿತ್
ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ?  title=

World Cup Semi final : 2023 ರ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಸೆಮಿ ಫೈನಲ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 
ನಡೆಯಲಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.  ಈ ಪಂದ್ಯ ಹೆದ್ದ ತಂಡವು ಫೈನಲ್ ಪ್ರವೇಶಿಸುತ್ತದೆ. ಈ ಮಧ್ಯೆ ಸೆಮಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ಮುಖ್ಯ ವಿಚಾರಗಳನ್ನು ಹೇಳಿದ್ದಾರೆ. ತಂಡದ ಆಟಗಾರರು ವರ್ತಮಾನದಲ್ಲಿ ಮಾತ್ರ ಬದುಕುತ್ತಾರೆ. ಹಿಂದೆ ನಡೆದದ್ದು ಈಗ ಇತಿಹಾಸ. ಹಿಂದೆ ಏನು ನಡೆದಿದೆ ಎನ್ನುವುದು ಈಗ ಮುಖ್ಯವಲ್ಲ ಎಂದಿದ್ದಾರೆ. 

ಆಟವನ್ನು ಸುಧಾರಿಸುವತ್ತ ಗಮನ  : 
2019 ರಲ್ಲಿ ಸೆಮಿಫೈನಲ್ ನಲ್ಲಿ ಭಾರತ ನ್ಯೂ ಜಿಲ್ಯಾಂಡ್ ಎದುರು ಸೋತಿತ್ತು. ಅಲ್ಲದೆ ಪ್ರತಿ ಬಾರಿ ಸೆಮಿ ಫೈನಲ್ ತನಕ ಅರ್ಹತೆ ಗಿಟ್ಟಿಸಿಕೊಳ್ಳುವ ಭಾರತ ಸೆಮೀಸ್ ನಲ್ಲಿ ಎಡವಿರುವುದು ಇತಿಹಾಸ. ಈ ಬಗ್ಗೆ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಹಿಂದೆ ನಡೆದದ್ದು ಈಗ ಇತಿಹಾಸ. ಹಿಂದೆ ನಡೆದಿರುವುದು ಈಗ ಮುಖ್ಯ ಅಲ್ಲ ಎಂದಿದ್ದಾರೆ. ಇನ್ನು ಈ ಪಂದ್ಯದಲ್ಲಿ  ಬೌಲಿಂಗ್ ಮಾಡಲು ಪಾರ್ಟ್‌ಟೈಮರ್‌ಗಳ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : 'ಒಂದು ವೇಳೆ ನಾನು ಐಶ್ವರ್ಯಾ ರೈ ಜೊತೆ ವಿವಾಹ ಮಾಡಿಕೊಂಡು...' ಪಾಕ್ ಕ್ರಿಕೇಟಿಗನ ಉದ್ಧಟತನಕ್ಕೆ, ಚಪ್ಪಾಳೆ ಹೊಡೆದ ಆಫ್ರಿದಿ!

ತಂಡದ  ಮನಸ್ಥಿತಿ ಉತ್ತಮವಾಗಿದೆ : 
ಸದ್ಯಕ್ಕೆ ನನ್ನ ಪ್ರಯಾಣದ ಬಗ್ಗೆ ಯೋಚಿಸಲು ನನಗೆ ಸಮಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ಶಿಸ್ತಿನ ತಂಡಗಳಲ್ಲಿ ಒಂದಾಗಿದೆ. ನ್ಯೂಜಿಲೆಂಡ್ ಆಟಗಾರರು ನಮ್ಮ ಆಟಗಾರರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಎರಡೂ ತಂಡಗಳ ಆಟಗಾರರು ಪರಸ್ಪರರ ಆಟಗಳನ್ನು ಅರಿತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

'ಟಾಸ್ ದೊಡ್ಡ ಅಂಶವಾಗುವುದಿಲ್ಲ : 
ವಾಂಖೆಡೆಯಲ್ಲಿ ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಟಾಸ್ ದೊಡ್ಡ ಅಂಶವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ವಿಶ್ವಕಪ್‌ನಿಂದ ನಾವು ಪಾಠ ಕಲಿತಿದ್ದೇವೆ. ಲೀಗ್ ಹಂತದಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಸದ್ಯಕ್ಕೆ ನಮ್ಮ ಗಮನ ಮುಂದಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗುತ್ತದೆ ಎಂದು ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತ ಬಲಿಷ್ಠ ತಂಡವಾಗಿದ್ದು, ಹಲವು ಅನುಭವಿ ಆಟಗಾರರನ್ನು ಹೊಂದಿದೆ ಎಂದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಆಟವಾಡಲು ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ : ಒಂದೇ ಓವರ್ ನಲ್ಲಿ ಆರು ವಿಕೆಟ್ ಪತನ ! ಇದು ಹ್ಯಾಟ್ರಿಕ್ ಅಲ್ಲ ಡಬಲ್ ಹ್ಯಾಟ್ರಿಕ್ ದಾಖಲೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News