Hardik Pandya, Indian Test team: ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್‌ ನಲ್ಲಿ ಸೋತಾಗಿನಿಂದ, ಆಟಗಾರರು ಕೋಚಿಂಗ್ ಸಿಬ್ಬಂದಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತಂಡದ ಹಲವು ಮ್ಯಾಚ್ ವಿನ್ನಿಂಗ್ ಆಟಗಾರರು ಗಾಯದ ಸಮಸ್ಯೆಯಿಂದ ಈ ಬಿಗ್ ಮ್ಯಾಚ್ ನಲ್ಲಿ ಆಡಲು ಸಾಧ್ಯವಾಗದೇ ಇರುವುದು ಕೂಡ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ನಡುವೆ ಮಾಜಿ ಕ್ರಿಕೆಟಿಗರು ದೊಡ್ಡ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾದ ಆಟಗಾರನೊಬ್ಬ ಟೆಸ್ಟ್ ಕ್ರಿಕೆಟ್‌ ಗೆ ಮರಳುವ ಸಾಧ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಆಟಗಾರ 2018 ರಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs WI: ರೋಹಿತ್ ಬದಲಿಗೆ ಟೆಸ್ಟ್ ಟೀಂನಲ್ಲಿ ಈ ಮಾರಕ ಬ್ಯಾಟ್ಸ್‌ಮನ್!! 'ಹಿಟ್‌ಮ್ಯಾನ್' ಭವಿಷ್ಯಕ್ಕೆ ಕುತ್ತು?


ಭಾರತ ಟೆಸ್ಟ್ ತಂಡದಿಂದ ಸುದೀರ್ಘ ಕಾಲ ಹೊರಗುಳಿದಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಮರಳುತ್ತಾರಾ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. 2018 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ ಹಾರ್ದಿಕ್ ಬಗ್ಗೆ ಎಲ್ಲಾ ಅನುಭವಿಗಳು ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಇದೀಗ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ದೊಡ್ಡ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಟೆಸ್ಟ್ ಕ್ರಿಕೆಟ್‌ ಗೆ ಮರಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದಲ್ಲಿ ಇಲ್ಲದಿರುವುದರಿಂದ ಶ್ರೇಷ್ಠ ಆಲ್‌ರೌಂಡರ್‌ ನ ಕೊರತೆ ಕಾಡುತ್ತಿದೆ ಎಂದು ಈಗಾಗಲೇ ಹಲವು ದಿಗ್ಗಜರು ಹೇಳಿದ್ದಾರೆ.


ಹಾರ್ದಿಕ್ ಪಾಂಡ್ಯ ಅವರು ಆಗಸ್ಟ್ 2018ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅದೇ ವರ್ಷ ಏಷ್ಯಾಕಪ್ ಸಮಯದಲ್ಲಿ, ಹಾರ್ದಿಕ್ ಬೆನ್ನುನೋವಿನಿಂದ ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಈ ಗಾಯದ ನಂತರ ಅವರು ಟೀಮ್ ಇಂಡಿಯಾಕ್ಕೆ ಮರಳಿದರು, ಆದರೆ ಅವರು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದೀಗ ಅನೇಕ ಅನುಭವಿ ಕ್ರಿಕೆಟಿಗರು ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿ ಇರಬೇಕೆಂದು ಹೇಳಿದ್ದಾರೆ.


ಐಪಿಎಲ್ 2022 ರಲ್ಲಿ, ಹಾರ್ದಿಕ್ ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿತ್ತು. ಈ ಬಾರಿಯೂ ಕೂಡ ಫೈನಲ್ ಪ್ರವೇಶಿಸಿದ್ದ ಗುಜರಾತ್, ಟಫ್ ಫೈಟ್ ನೀಡಿತ್ತು. ಆದರೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿತು.


ಇದನ್ನೂ ಓದಿ: ಚೀನಾ ವಿಮಾನನಿಲ್ದಾಣದಲ್ಲಿ ಲಿಯೋನಲ್‌ ಮೆಸ್ಸಿಯನ್ನು ವಶಕ್ಕೆ ಪಡೆದ ಪೊಲೀಸರು, ಕಾರಣವೇನು ಗೊತ್ತಾ?


ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡುವುದಾದರೆ ಇವರು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 19 ಇನ್ನಿಂಗ್ಸ್‌ ಗಳಲ್ಲಿ 532 ರನ್ ಗಳಿಸಿದ್ದಾರೆ, ಬೌಲಿಂಗ್ ಮಾಡುವಾಗ 17 ವಿಕೆಟ್‌ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನದಲ್ಲಿ 74 ಪಂದ್ಯಗಳನ್ನು ಆಡಿರುವ ಹಾರ್ದಿಕ್ 1584 ರನ್‌ ಗಳೊಂದಿಗೆ 72 ವಿಕೆಟ್‌ ಗಳನ್ನು ಪಡೆದಿದ್ದಾರೆ. ಟಿ 20 ಕ್ರಿಕೆಟ್‌ ನಲ್ಲಿ, ಹಾರ್ದಿಕ್ 87 ಪಂದ್ಯಗಳನ್ನು ಆಡುತ್ತಾ 1271 ರನ್ ಗಳಿಸಿ, 69 ವಿಕೆಟ್‌ ಗಳನ್ನು ಸಹ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 


Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ