Team India Cricketer: ಜುಲೈ 12 ರಂದು ವೆಸ್ಟ್ ಇಂಡೀಸ್ ವಿರುದ್ಧ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಆಟಗಾರನನ್ನು ಟೆಸ್ಟ್ ಓಪನರ್ ಮಾಡುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ವಿರುದ್ಧದ ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಈ ಮಾರಕ ಬ್ಯಾಟ್ಸ್‌ಮನ್ ಟೀಂ ಇಂಡಿಯಾ ಪ್ರವೇಶಿಸಬಹುದು. ಈ ಬ್ಯಾಟ್ಸ್‌ಮನ್ ಎಷ್ಟು ಅಪಾಯಕಾರಿ ಎಂದರೆ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನವನ್ನು ತಿನ್ನಬಹುದು.
ಪ್ರಸ್ತುತ, ರೋಹಿತ್ ಶರ್ಮಾ ಕಳಪೆ ಫಿಟ್ನೆಸ್ ಮತ್ತು ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಬಿಸಿಸಿಐ ಭವಿಷ್ಯದ ಆರಂಭಿಕ ಆಟಗಾರನನ್ನು ಹುಡುಕುತ್ತಿದೆ. 21 ವರ್ಷದ ಯುವ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ವೃತ್ತಿಜೀವನಕ್ಕೆ ಕಂಟಕವಾಘುವ ಸಾಧ್ಯತೆಯಿದೆ. ಶೀಘ್ರದಲ್ಲೇ ಹಿಟ್‌ಮ್ಯಾನ್ ನಿವೃತ್ತರಾಗುವಂತೆಯೂ ಒತ್ತಾಯಿಸಬಹುದು. ಈ 21 ವರ್ಷದ ಯುವ ಬ್ಯಾಟ್ಸ್‌ಮನ್ 'ಹಿಟ್‌ಮ್ಯಾನ್' ರೋಹಿತ್ ಶರ್ಮಾಗಿಂತ ಹೆಚ್ಚು ಅಪಾಯಕಾರಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಖಾಯಂ ಆರಂಭಿಕ ಆಟಗಾರನಾಗುವ ಸಾಧ್ಯತೆಗಳು ಸಹ ದಟ್ಟವಾಗಿದೆ.
ಇದನ್ನೂ ಓದಿ: ಭಾರತ vs ಪಾಕಿಸ್ತಾನ ಪಂದ್ಯದ ಮಾಹಿತಿ ಬಹಿರಂಗ..!
ರೋಹಿತ್ ಶರ್ಮಾಗೆ ಈ ವರ್ಷ ಅತ್ಯಂತ ಮಹತ್ವದ್ದಾಗಿದೆ. ಭಾರತ ಈ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಏಷ್ಯಾ ಕಪ್ 2023 ಮತ್ತು ವಿಶ್ವಕಪ್ 2023 ನಂತಹ ದೊಡ್ಡ ಟೂರ್ನಿಗಳನ್ನು ಆಡಬೇಕಾಗಿದೆ. ಈ ದೊಡ್ಡ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟ್ ಮೌನವಾಗಿದ್ದರೆ, ಅವರ ನಾಯಕತ್ವ ಮತ್ತು ಭಾರತ ತಂಡದಲ್ಲಿ ಸ್ಥಾನ ಎರಡೂ ಅಪಾಯಕ್ಕೆ ಸಿಲುಕುತ್ತವೆ. ಟೀಂ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವೇಗದ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಈ ಆಟಗಾರನು ಕ್ರೀಸ್‌ಗೆ ಬಂದ ತಕ್ಷಣ ದೊಡ್ಡ ಬೌಲರ್ ಅನ್ನು ಮಣಿಸಲು ಪ್ರಾರಂಭಿಸುತ್ತಾರೆ. ಯಶಸ್ವಿ ಜೈಸ್ವಾಲ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಉಳ್ಳವರು. ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ ಉತ್ತಮ ಆಟ ಆಡಿ ಎಲ್ಲರ ಗಮನ ಸೆಳೆದರು. ಯಶಸ್ವಿ ಜೈಸ್ವಾಲ್ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಓಪನರ್‌ಗಳಾಗಬಹುದು.
ಯಶಸ್ವಿ ಜೈಸ್ವಾಲ್ ಭಾರತದ ಮುಂದಿನ ಸ್ಟಾರ್ ಓಪನರ್ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಯಶಸ್ವಿ ಜೈಸ್ವಾಲ್ ಎದುರಾಳಿ ತಂಡವನ್ನು ಬ್ಯಾಟ್ ಮೂಲಕ ಕಟ್ಟಿ ಹಾಕುವ ಶಕ್ತಿ ಹೊಂದಿದ್ದಾರೆ. ಐಪಿಎಲ್ 2023 ರಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ, ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಯಶಸ್ವಿ ಜೈಸ್ವಾಲ್ ಎಡಗೈ ಬ್ಯಾಟ್ಸ್‌ಮನ್, ಯಾವುದೇ ತಂಡಕ್ಕೆ ದೊಡ್ಡ ಎಕ್ಸ್-ಫ್ಯಾಕ್ಟರ್ ಆಗುವ ಸಾಧ್ಯತೆಯಿದೆ. ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರ 14 ಪಂದ್ಯಗಳಲ್ಲಿ 163.61 ಸ್ಟ್ರೈಕ್ ರೇಟ್‌ನಲ್ಲಿ 82 ಬೌಂಡರಿ ಮತ್ತು 26 ಸಿಕ್ಸರ್‌ಗಳನ್ನು ಒಳಗೊಂಡಂತೆ 625 ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ ಯಶಸ್ವಿ ಜೈಸ್ವಾಲ್ ಅವರ ಅತ್ಯುತ್ತಮ ಸ್ಕೋರ್ 124 ರನ್.
ಇದನ್ನೂ ಓದಿ: ನಾಟೌಟ್ ವಿವಾದ: ಅಂಪೈರ್ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದ ಶುಭ್ಮನ್’ಗೆ ದಂಡ ವಿಧಿಸಿದ ICC
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.