ಚೀನಾ ವಿಮಾನನಿಲ್ದಾಣದಲ್ಲಿ ಲಿಯೋನಲ್‌ ಮೆಸ್ಸಿಯನ್ನು ವಶಕ್ಕೆ ಪಡೆದ ಪೊಲೀಸರು, ಕಾರಣವೇನು ಗೊತ್ತಾ?

Lionel Messie : ಫುಟ್‌ಬಾಲ್‌ ಜಗತ್ತಿನ ಮಾಂತ್ರಿಕ ಆಟಗಾರ, ವಿಶ್ವಕಪ್‌ ವಿಜೇತ ನಾಯಕ ಲಿಯೋನೆಲ್‌ ಮೆಸ್ಸಿ ಅವರಿಗೆ ಚೀನಾದ ವಿಮಾನ ನಿಲ್ದಾನದಲ್ಲಿ ಮುಜುಗರ ಪಡುವಂತಹ ಘಟನೆ ನಡೆದಿದೆ.   

Written by - Savita M B | Last Updated : Jun 14, 2023, 04:34 PM IST
  • 2017ರ ನಂತರ ಇದೇ ಮೊದಲ ಬಾರಿಗೆ ಚೀನಾಗೆ ತೆರಳಿರುವ ಮೆಸ್ಸಿ
  • ಸೌಹಾರ್ದ ಪಂದ್ಯವನ್ನು ಆಡಲು ಲಿಯೋನಲ್‌ ಮೆಸ್ಸಿ ಅವರು ಚೀನಾಗೆ ತೆರಳಿದ್ದರು.
  • ಗಡಿ ಭದ್ರತಾ ಪಡೆಯ ಪೋಲಿಸರು ಬೀಜಿಂಗ್‌ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿದ್ದಾರೆ.
 ಚೀನಾ ವಿಮಾನನಿಲ್ದಾಣದಲ್ಲಿ ಲಿಯೋನಲ್‌ ಮೆಸ್ಸಿಯನ್ನು ವಶಕ್ಕೆ ಪಡೆದ ಪೊಲೀಸರು, ಕಾರಣವೇನು ಗೊತ್ತಾ?  title=

Foot Ball Player Lionel Messie : ಆಸ್ಟ್ರೇಲಿಯಾ ವಿರುಧ್ಧ ಗುರುವಾರ ಸೌಹಾರ್ದ ಪಂದ್ಯವನ್ನು ಆಡಲು ಲಿಯೋನಲ್‌ ಮೆಸ್ಸಿ ಅವರು ಚೀನಾಗೆ ತೆರಳಿದ್ದರು. ಆದರೆ ಮೆಸ್ಸಿ ಅವರು ಯಾವದೇ ಸರಿಯಾದ ದಾಖಲೆಗಳನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಮಾಂತ್ರಿಕ ಆಟಗಾರನನ್ನು ಗಡಿ ಭದ್ರತಾ ಪಡೆಯ ಪೋಲಿಸರು ಬೀಜಿಂಗ್‌ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿದ್ದಾರೆ. 

2017ರ ನಂತರ ಇದೇ ಮೊದಲ ಬಾರಿಗೆ ಚೀನಾಗೆ ತೆರಳಿರುವ ಮೆಸ್ಸಿ ಅವರು ವೀಸಾಗೆ ಅರ್ಜಿ ಸಲ್ಲಿಸಿರಲಿಲ್ಲ. ಅಲ್ಲದೇ ಅರ್ಜೆಂಟೀನಾದ ಬದಲಾಗಿ ಸ್ಪ್ಯಾನಿಷ್‌ ಪಾಸ್‌ಪೋರ್ಟ್‌ನೊಂದಿಗೆ ಮೆಸ್ಸಿ ಅವರು ಪ್ರಯಾಣಿಸಿದ್ದರು. ಆದರೆ ಈ ಪಾಸ್‌ ಪೋರ್ಟ್‌ ಚೀನಾ ಪ್ರವೇಶದ ವೀಸಾ ಹೊಂದಿರಲಿಲ್ಲ. ಇದೇ ಕಾರಣಕ್ಕಾಗಿ ಏರ್ ಪೋರ್ಟ್‌ನಲ್ಲಿ ಮೆಸ್ಸಿ ಅವರನ್ನು ಪೋಲಿಸರು ತಡೆದು ನಿಲ್ಲಿಸಿದ್ದರು. 

ಇದನ್ನೂ ಓದಿ-ICC ODI World Cup 2023 : ಭಾರತ vs ಪಾಕಿಸ್ತಾನ ಪಂದ್ಯದ ಮಾಹಿತಿ ಬಹಿರಂಗ..!

30 ನಿಮಿಷಗಳ ಕಾಲ ವಿಚಾರಣೆ ನಡೆಸಿ ವೀಸಾ ಸಮಸ್ಯೆ ಕುರಿತು ಚರ್ಚಿಸಿದ ಅಧಿಕಾರಿಗಳು ಮೆಸ್ಸಿಗೆ ತೆರಳಲು ಅನುಮತಿ ನೀಡಿದ್ದಾರೆ. ಸದ್ಯ ಮೆಸ್ಸಿಯವರನ್ನು ಪೋಲಿಸರು ತಡೆಹಿಡಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ಪುಟ್‌ಬಾಲ್‌ ಮಾಂತ್ರಿಕ ಆಟಗಾರನನ್ನು ಸ್ವಾತಿಸಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಬಳಗವೇ ಸೇರಿತ್ತು.

ಪ್ಯಾರಿಸ್‌ ಸೇಂಟ್‌-ಜರ್ಮೈನ್‌ ಜೊತೆಗಿನ ಒಪ್ಪಂದವು ಕಳೆದ ತಿಂಗಳು ಕೊನೆಗೊಂಡ ನಂತ ಅಮೇರಿಕಾದ ಮೇಜರ್‌ ಲೀಗ್‌ ಸಾಕರ್‌ ಟೂರ್ನಿಯ ಇಂಟರ್‌ ಮಿಯಾಮಿ ಕ್ಲಬ್‌ ಪರವಾಗಿ ಮುಂದಿನ ದಿನಗಳಲ್ಲಿ ಮೆಸ್ಸಿ ಕದನಕ್ಕಿಳಿಯಲಿದ್ದಾರೆ. ಇನ್ನು ತಮ್ಮ ಬಾಲ್ಯದ ಎಫ್‌ಸಿ ಬಾರ್ಸಿಲೋನಾಗೆ ಮತ್ತೊಮ್ಮೆ ಮೆಸ್ಸಿ ಬರುತ್ತಾರೆ ಎನ್ನುವ ಅಭಿಮಾನಿಗಳ ಆಸೆ ನಿರಾಸೆಯಾಗಿದೆ. 

ಇದನ್ನೂ ಓದಿ-IND vs WI: ರೋಹಿತ್ ಬದಲಿಗೆ ಟೆಸ್ಟ್ ಟೀಂನಲ್ಲಿ ಈ ಮಾರಕ ಬ್ಯಾಟ್ಸ್‌ಮನ್!! 'ಹಿಟ್‌ಮ್ಯಾನ್' ಭವಿಷ್ಯಕ್ಕೆ ಕುತ್ತು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News