Ridhima Pandit Shubman Gill Wedding :ರಿಧಿಮಾ ಪಂಡಿತ್ ಮತ್ತು ಶುಭ್‌ಮಾನ್ ಗಿಲ್ ವಿವಾಹದ ಬಗ್ಗೆ ನಿರಂತರ ಸುದ್ದಿಯಾಗುತ್ತಲೇ ಇದೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.ಅವರ ಮದುವೆಗೆ ಫೋನ್ ತರುವುದನ್ನು ನಿಷೇಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಆದರೆ,ಕೆಲವು ದಿನಗಳ ಹಿಂದೆ ನಟಿ ರಿಧಿಮಾ ಪಂಡಿತ್ ಮದುವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಈ ಸುದ್ದಿಯ ನಡುವೆಯೇ  ಈಗ  ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ನಟಿಯ ಕಣ್ಣಿನಲ್ಲಿ ನೀರು ಹರಿಯುತ್ತಿರುವುದನ್ನು ಕಾಣಬಹುದು. ರಿಧಿಮಾ ಅವರ ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು  ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ರಿದಿಮಾ ಪಂಡಿತ್  ಕಣ್ಣೀರೆಕೆ ?:
ಕೆಲ ದಿನಗಳ ಹಿಂದೆ ರಿದಿಮಾ ಪಂಡಿತ್ ಶುಭಗಂ ಗಿಲ್ ಜೊತೆಗಿನ ವಿವಾಹದ ಸುದ್ದಿ ಸುಳ್ಳು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.ಮತ್ತೊಂದೆಡೆ ಅಳುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರಿದಿಮಾ ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ. ಈ ಫೋಟೋವನ್ನು ನಟಿ ಶೇರ್ ಮಾಡುತ್ತಿದ್ದಂತೆಯೇ ಫೋಟೋ ವೈರಲ್ ಆಗಿದೆ.


ಇದನ್ನೂ ಓದಿ : ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಅಮೆರಿಕಾ


ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳ ಅಸಮಾಧಾನ:
ರಿದಿಮಾ ಶೇರ್ ಮಾಡಿರುವ ಫೋಟೋಗೆ ಸೆಲೆಬ್ರಿಟಿಗಳಿಂದ ಅಭಿಮಾನಿಗಳವರೆಗೆ ಎಲ್ಲರೂ ಪ್ರತಿಕ್ರಿಯಿಸುತ್ತಿದ್ದಾರೆ.ರವೀನಾ ಟಂಡನ್ ಮಗಳು ರಶಾ ಥಡಾನಿ ಈ ಫೋಟೋ ಗೆ ಪ್ರತಿಕ್ರಿಯಿಸಿದ್ದು,'ನೀವು ಯಾಕೆ ಅಳುತ್ತೀರಿ?' ಎಂದು ಪ್ರಶ್ನಿಸಿದ್ದಾರೆ. ಇನ್ನು 'ಮೇಡಂ, ನೀವು ಯಾಕೆ ದುಃಖಿತರಾಗಿದ್ದೀರಿ? ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. 


ಶುಭ್‌ಮನ್ ಗಿಲ್ ಮತ್ತು ರಿದ್ಧಿಮಾ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾದುತ್ತಿದ್ದಂತೆಯೇ ನಟಿ ಸ್ವತಃ ಮುಂದೆ ಬಂದು ಈ ಸುದ್ದಿ ಶುದ್ದ ಸುಳ್ಳು ಎಂದು ಹೇಳಿದ್ದರು. ಇದು ಕೆಲವರ ಕಲ್ಪನೆಯಷ್ಟೇ, ಯಾರೋ ಈ ಸುದ್ದಿಯನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಿಟ್ಟಿದ್ದಾರೆ ಎಂದು ಹೇಳಿದ್ದರು. ನನಗೆ ಶುಭ್‌ಮಾನ್ ಗಿಲ್ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ಆದರೆ ಬೆಳಿಗ್ಗೆಯಿಂದ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದು, ಈ ಸುದ್ದಿ ಎಂದು ಹೇಳಿ ಹೇಳಿ ಸುಸ್ತಾಗಿದೆ ಎಂದಾಗಿದ್ದಾರೆ. 


ಇದನ್ನೂ ಓದಿ : ಬಲಿಷ್ಠ ಪಾಕ್‌ ಎದುರು ಅಬ್ಬರಿಸಿದ ಅಮೇರಿಕಾ: ಸೂಪರ್‌ ಓವರ್‌ನಲ್ಲಿ ಪಂದ್ಯ ಗೆದ್ದ ಯುಎಸ್‌ಎ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.