ಡ್ರಾಪ್-ಇನ್ ಪಿಚ್ ಎಂದರೇನು? ಕ್ರಿಕೆಟ್’ನಲ್ಲಿ ಸಾಮಾನ್ಯ ಮೇಲ್ಮೈಗಿಂತ ಈ ಪಿಚ್ ಯಾಕೆ ವಿಶೇಷ?

New York Pitch: ಭಾರತ-ಐರ್ಲೆಂಡ್ ಪಂದ್ಯದ ಸಂದರ್ಭದಲ್ಲಿ ಪಿಚ್‌’ನಲ್ಲಿ ತುಂಬಾ ಅಸಮವಾದ ಬೌನ್ಸ್ ಇತ್ತು. ನಾಯಕ ರೋಹಿತ್ ಶರ್ಮಾ ಕೈಗೆ ಚೆಂಡು ಬಡಿದ ಕಾರಣ, ಮೈದಾನದಿಂದ ಹೊರನಡೆದರು. ಅಷ್ಟೇ ಅಲ್ಲ, ಇದೇ ಪಂದ್ಯದಲ್ಲಿ ರಿಷಬ್ ಪಂತ್’ಗೆ ಕೂಡ  ಹಲವು ಬಾರಿ ಚೆಂಡು ಬಡಿದಿತ್ತು.

Written by - Bhavishya Shetty | Last Updated : Jun 6, 2024, 09:57 PM IST
    • ಟಿ20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿವೆ
    • ಡ್ರಾಪ್​ ಇನ್​ ಪಿಚ್ ಅನ್ನು ಒಂದು ಮೈದಾನದಿಂದ ಇನ್ನೊಂದು ಸ್ಥಳಕ್ಕೆ ರವಾನಿಸಬಹುದಾಗಿದೆ.
    • ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಡ್ರಾಪ್ ಇನ್ ಪಿಚ್‌’ಗಳನ್ನು ಬಳಸಲಾಗುತ್ತದೆ.
ಡ್ರಾಪ್-ಇನ್ ಪಿಚ್ ಎಂದರೇನು? ಕ್ರಿಕೆಟ್’ನಲ್ಲಿ ಸಾಮಾನ್ಯ ಮೇಲ್ಮೈಗಿಂತ ಈ ಪಿಚ್ ಯಾಕೆ ವಿಶೇಷ? title=
what is drop-in pitch

New York Pitch: ಟಿ20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿವೆ. ಆದರೆ ಇದೀಗ ನ್ಯೂಯಾರ್ಕ್‌’ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಪ್ರಶ್ನೆಗಳ ಸುಳಿಗೆ ಸಿಲುಕಿದೆ. ಆಡಿದ ಕೇವಲ 2 ಪಂದ್ಯಗಳಲ್ಲೇ ಇಷ್ಟೊಂದು ಚರ್ಚೆಗೆ ಕಾರಣವಾಗಲು ಕಾರಣವೇನು ಎಂಬುದನ್ನು ಮುಂದೆ ತಿಳಿಯೋಣ.

ಭಾರತ-ಐರ್ಲೆಂಡ್ ಪಂದ್ಯದ ಸಂದರ್ಭದಲ್ಲಿ ಪಿಚ್‌’ನಲ್ಲಿ ತುಂಬಾ ಅಸಮವಾದ ಬೌನ್ಸ್ ಇತ್ತು. ನಾಯಕ ರೋಹಿತ್ ಶರ್ಮಾ ಕೈಗೆ ಚೆಂಡು ಬಡಿದ ಕಾರಣ, ಮೈದಾನದಿಂದ ಹೊರನಡೆದರು. ಅಷ್ಟೇ ಅಲ್ಲ, ಇದೇ ಪಂದ್ಯದಲ್ಲಿ ರಿಷಬ್ ಪಂತ್’ಗೆ ಕೂಡ  ಹಲವು ಬಾರಿ ಚೆಂಡು ಬಡಿದಿತ್ತು. ಐರ್ಲೆಂಡ್‌’ನ ಬ್ಯಾಟ್ಸ್‌ಮನ್‌’ಗಳು ಕೂಡ ಸಂಕಷ್ಟದಲ್ಲಿ ಸಿಲುಕಿರುವುದು ಕಂಡುಬಂದಿತ್ತು. ಇದೇ ಕಾರಣದಿಂದ ನ್ಯೂಯಾರ್ಕ್’ನ ಈ ಪಿಚ್ ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಇದನ್ನು ಅಪಾಯಕಾರಿ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಇದು ಆಡಲು ಯೋಗ್ಯವಾದ ಪಿಚ್ ಅಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?

ಪಿಚ್ ನೋಡಿತ್ತಿದ್ದರೆ, ಆಟಗಾರರು ಗಾಯಗೊಳ್ಳುವ ಅಪಾಯ ಹೆಚ್ಚು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ವೇಗದ ಬೌಲರ್ ಜೋಶುವಾ ಲಿಟಲ್ ಅವರ ಎಸೆತದಲ್ಲಿ ತೋಳಿಗೆ ಗಾಯ ಮಾಡಿಕೊಂಡಿದ್ದರು. ಈ ಬಳಿಕ ಮೈದಾನವನ್ನು ತೊರೆಯಬೇಕಾದ ಪರಿಸ್ಥಿತಿ ಬಂದಿತ್ತು. ಇದರ ಬೆನ್ನಲ್ಲೇ ಈ ಬಗ್ಗೆ ಮತ್ತು ಪಿಚ್ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಇನಿಂಗ್ಸ್‌’ನ 11 ನೇ ಓವರ್‌’ನಲ್ಲಿ ಜೋಶುವಾ ಲಿಟಲ್ ಅವರ ಎಸೆತದಲ್ಲಿ ರೋಹಿತ್ ಮಾತ್ರವಲ್ಲ, ರಿಷಬ್ ಪಂತ್ ಅವರ ಮೊಣಕೈಗೆ ಕೂಡ ಗಾಯವಾಗಿತ್ತು. ಆದರೆ, ಸ್ವಲ್ಪ ಸಮಯದ ನಂತರ ಮತ್ತೆ ಬ್ಯಾಟಿಂಗ್‌’ಗೆ ಬಂದರು.

ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ವೇಳೆ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಸ್ಥಿತಿ ಕಂಡು ಇಂಗ್ಲೆಂಡ್ ದಿಗ್ಗಜರಾದ ಮೈಕೆಲ್ ವಾನ್ ಮತ್ತು ಆಂಡಿ ಫ್ಲವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಂಡಿ ಫ್ಲವರ್ವಾನ್, ESPN ನಲ್ಲಿ ಮಾತನಾಡಿ, “ಇದು ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಉತ್ತಮ ಪಿಚ್ ಅಲ್ಲ. ಇದು ಅಪಾಯಕಾರಿಯಾಗುವ ಹಂತದಲ್ಲಿದೆ. ಚೆಂಡು ಎರಡೂ ಬದಿಗಳಲ್ಲಿ ಬಲವಾಗಿ, ಉದ್ದವಾಗಿ ಬೌನ್ಸ್ ಆಗುತ್ತಿದೆ. ದೊಡ್ಡ ವಿಷಯವೆಂದರೆ ಅದು ಅಸಾಮಾನ್ಯ ರೀತಿಯಲ್ಲಿ ಎತ್ತರಕ್ಕೆ ಬೌನ್ಸ್ ಆಗುತ್ತದೆ. ಇದರಿಂದ ಹೆಬ್ಬೆರಳುಗಳು, ಕೈಗವಸುಗಳು ಮತ್ತು ಹೆಲ್ಮೆಟ್‌ಗಳಿಗೆ ಬಡಿದು ಬ್ಯಾಟ್ಸ್‌ಮನ್‌ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಇನ್ನೊಂದೆಡೆ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೆಲ್ ವಾನ್ ಎಕ್ಸ್‌’ನಲ್ಲಿ ಪೋಸ್ಟ್ ಮಾಡಿ, “ಶಾಕಿಂಗ್ ಪಿಚ್. ಅಮೆರಿಕದಲ್ಲಿ ಆಟವನ್ನು ಮಾರಾಟ ಮಾಡಲು ಪ್ರಯತ್ನಿಸಿದಂತಿದೆ. ಆದರೆ ನ್ಯೂಯಾರ್ಕ್‌’ನಲ್ಲಿ ಈ ಕಳಪೆ ಪಿಚ್’ನಲ್ಲಿ ಆಟಗಾರರು ಆಡುವುದು ಉತ್ತಮವಲ್ಲ” ಎಂದಿದ್ದಾರೆ.

ಇನ್ನು ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನ್ಯೂಯಾರ್ಕ್‌’ನಲ್ಲಿ ನಡೆಯಲಿದೆ. ಎರಡೂ ತಂಡಗಳು ವಿಶ್ವ ದರ್ಜೆಯ ವೇಗದ ಬೌಲರ್‌’ಗಳನ್ನು ಹೊಂದಿದ್ದು, ಪಿಚ್‌’ನ ಅಸಮವಾದ ಬೌನ್ಸ್ ಬ್ಯಾಟ್ಸ್‌ಮನ್‌’ಗಳಿಗೆ ಯಾವ ರೀತಿಯ ಸಂಕಷ್ಟ ತಂದೊಡ್ಡುತ್ತದೆ ಎಂಬುದು ಸದ್ಯಕ್ಕಿರುವ ಆತಂಕ.

ಡ್ರಾಪ್​ ಇನ್​ ಪಿಚ್ ಎಂದರೇನು​?

ಡ್ರಾಪ್​ ಇನ್​ ಪಿಚ್ ಅನ್ನು ಒಂದು ಮೈದಾನ ಅಥವಾ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸಬಹುದಾಗಿದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಡ್ರಾಪ್ ಇನ್ ಪಿಚ್‌’ಗಳನ್ನು ಬಳಸಲಾಗುತ್ತದೆ. ಏಕೆಂದರೆ ಇಲ್ಲಿ ಕ್ರಿಕೆಟ್ ಮಾತ್ರವಲ್ಲದೆ ಫುಟ್‌ಬಾಲ್, ರಗ್ಬಿಯಂತಹ ಆಟಗಳನ್ನು ಸಹ ಆಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಸೀಸನ್ ಮುಗಿದ ಮೇಲೆ ಡ್ರಾಪ್-ಇನ್ ಪಿಚ್ ಗಳನ್ನು ತೆಗೆದು ಮರಳು, ನಂತರ ಕೃತಕ ಹುಲ್ಲನ್ನು ಬೆಳೆಸಿ ಮತ್ತೆ ಬಳಕೆಗೆ ಸಿದ್ಧ ಮಾಡಲಾಗುತ್ತದೆ.

ಡ್ರಾಪ್ ಇನ್ ಪಿಚ್ ತಯಾರಿ ಹೀಗೆ…

ಉದಾಹರಣೆಗೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಪಿಚ್ ಬಗ್ಗೆ ಮಾತನಾಡಿದರೆ, 24 ಮೀಟರ್ ಉದ್ದ, ಮೂರು ಮೀಟರ್ ಅಗಲ ಮತ್ತು 20 ಸೆಂಟಿ ಮೀಟರ್ ಅಡಿಯಲ್ಲಿ ಗುಂಡಿ ತೆಗೆದಿರಲಾಗುತ್ತದೆ. ಇನ್ನು ಗುಂಡಿ ಸುತ್ತಲೂ ಸಿಮೆಂಟ್​ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್​​​​​​’ನ ಅಳತೆಗೆ ತಕ್ಕಂತೆ, ಸ್ಟೀಲ್​​​ ಕೇಸ್​​ ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು ಕಪ್ಪು ಮಣ್ಣಿನ ಪದರದಿಂದ ಮುಚ್ಚಿದರೆ, ಮೇಲೆ ಹುಲ್ಲನ್ನು ಬೆಳೆಯಲಾಗುತ್ತದೆ.

ಇದನ್ನೂ ಓದಿ: ಓಪನಿಂಗ್ ಆಯ್ತು… ಇನ್ಮುಂದೆ ಬೌಲರ್ ಆಗಿ ಕಣಕ್ಕಿಳಿಯುವರೇ ವಿರಾಟ್? ರೋಹಿತ್’ಗೆ ಬಂತು ವಿಶೇಷ ಮನವಿ!!

ಕ್ರಿಕೆಟ್ ಪಂದ್ಯ ನಡೆಯುವಾಗ, 30 ಟನ್ ತೂಕದ ಈ ಪಿಚ್‌’ಗಳನ್ನು ಕಸ್ಟಮೈಸ್ ಮಾಡಿದ ಟ್ರೈಲರ್‌’ನಿಂದ ಮೇಲಕ್ಕೆತ್ತಿ 27 ಮೀಟರ್ ಆಳದ ಸಿಮೆಂಟ್ ಸ್ಲ್ಯಾಬ್‌’ನ ಮೇಲೆ ಇರಿಸಲಾಗುತ್ತದೆ. ಈ ಪಿಚ್ ಅನ್ನು ಉಕ್ಕಿನ ಚೌಕಟ್ಟಿನೊಳಗೆ ಮಾಡಲಾಗಿರುವುದರಿಂದ ಒಡೆಯುವುದಿಲ್ಲ. ಇನ್ನು ಈ ಪಿಚ್​​’ಗಳು ಬೌಲರ್ ಸ್ನೇಹಿ. ಆದರೆ ಹೆಚ್ಚು ಬೌನ್ಸ್​​ ಆಗುತ್ತವೆ ಎಂಬುದು ಇದರ ಬಗ್ಗೆ ಸದ್ಯಕ್ಕಿರುವ ಚರ್ಚೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News