USA vs PAK Super Over: ಸೂಪರ್ ಓವರ್‌ನಲ್ಲಿ ಪಾಕ್‌ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲು

T20 World Cup 2024: ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.

Written by - Chetana Devarmani | Last Updated : Jun 7, 2024, 08:19 AM IST
  • ಪಾಕಿಸ್ತಾನ vs ಅಮೆರಿಕ ನಡುವಿನ ರಣರೋಚಕ ಪಂದ್ಯ
  • ಸೂಪರ್ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲು
  • ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯ ಸೋತ ಪಾಕಿಸ್ತಾನ
USA vs PAK Super Over: ಸೂಪರ್ ಓವರ್‌ನಲ್ಲಿ ಪಾಕ್‌ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲು title=

T20 World Cup 2024: ಒಂದೆಡೆ ಬಾಬರ್ ಆಜಮ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಭಿಮಾನಿಗಳು ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ಮೈದಾನಕ್ಕಿಳಿದ ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ಅಮೆರಿಕ ವಿರುದ್ಧದ ರೋಚಕ ಪಂದ್ಯದಲ್ಲಿ 2009ರ ವಿಶ್ವ ಚಾಂಪಿಯನ್ ಪಾಕಿಸ್ತಾನ ಸೂಪರ್ ಓವರ್‌ನಲ್ಲಿ ಸೋಲುಂಡಿತು. ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.

ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಸೂಪರ್​ ಓವರ್‌ನಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿತು. ಆದರೆ ಅಮೆರಿಕದ ಬೌಲರ್‌ಗಳು ಪವರ್ ಪ್ಲೇನಲ್ಲಿಯೇ 3 ವಿಕೆಟ್ ಪಡೆಯುವ ಮೂಲಕ ಪಾಕ್‌ ಬ್ಯಾಟ್ಸಮನ್‌ಗಳನ್ನು ಕಟ್ಟಿ ಹಾಕಿದರು. 

ಇದನ್ನೂ ಓದಿ: ಡ್ರಾಪ್-ಇನ್ ಪಿಚ್ ಎಂದರೇನು? ಕ್ರಿಕೆಟ್’ನಲ್ಲಿ ಸಾಮಾನ್ಯ ಮೇಲ್ಮೈಗಿಂತ ಈ ಪಿಚ್ ಯಾಕೆ ವಿಶೇಷ?

ಅಮೆರಿಕದ ಬೌಲಿಂಗ್‌ ದಾಳಿ ಎದುರು 20 ಓವರ್‌ಗಳಲ್ಲಿ 160 ರನ್‌ಗಳ ಸ್ಕೋರ್ ತಲುಪಲುಷ್ಟೇ ಪಾಕಿಸ್ತಾನಕ್ಕೆ ಸಾಧ್ಯವಾಯಿತು. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ಗೆಲುವಿನತ್ತ ಭದ್ರ ಹೆಜ್ಜೆಯನ್ನಿಟ್ಟರೂ ಕೊನೆಯ ಓವರ್‌ಗಳಲ್ಲಿ ಪಾಕಿಸ್ತಾನ ತಿರುಗೇಟು ನೀಡಿತು. ಕೊನೆಯ ಓವರ್‌ನಲ್ಲಿ USA 14 ರನ್ ಗಳಿಸಿತು. ಪಂದ್ಯವು ಸೂಪರ್ ಓವರ್‌ಗೆ ಹೋಯಿತು.

ನಿಯಮಗಳ ಪ್ರಕಾರ, ಸೂಪರ್ ಓವರ್‌ನಲ್ಲಿ ಅಮೆರಿಕ ಮೊದಲು ಬ್ಯಾಟ್ ಮಾಡಲು ಬಂದಿತು. ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ಪಾಕಿಸ್ತಾನದ ಸೂಪರ್ ಓವರ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಪಡೆಯಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 1 ವಿಕೆಟ್ ಕಳೆದುಕೊಂಡು 13 ರನ್‌ ಮಾತ್ರ ಪಡೆಯಿತು. 5 ರನ್‌ಗಳಿಂದ ಸೋಲುಂಡಿತು. ಅಮೆರಿಕ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ವಿದ್ಯಾರ್ಹತೆ ಏನು ಗೊತ್ತಾ? ತಿಳಿದರೆ ದಂಗಾಗೋದು ಖಂಡಿತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News