ಮುಂಬೈ : ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ವಜಾಗೊಳಿಸಿದ ನಂತರ ಎಲ್ಲೆಡೆ ಈ ಬಗ್ಗೆ ಭಾರೀ ಚರ್ಚೆ ನಡೆದಿದೆ. ಆದರೆ ರೋಹಿತ್ ಶರ್ಮಾಗೆ ಏಕದಿನ ಮತ್ತು ಟಿ20 ನಾಯಕತ್ವ ನೀಡುವುದು ಸರಿಯಾದ ನಿರ್ಧಾರ ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಹೇಳಿದ್ದಾರೆ.  ಟೆಸ್ಟ್ ಮತ್ತು ODI-T20 ಕ್ರಿಕೆಟ್‌ ಗೆ ಪ್ರತ್ಯೇಕ ನಾಯಕನನ್ನು ಹೊಂದುವುದು ಉತ್ತಮ ಬೆಳೆವಣಿಗೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಈ ನಿರ್ಧಾರವನ್ನು ಅವರು ಬೆಂಬಲಿಸಿದ್ದಾರೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರೆ, ರೋಹಿತ್ ಶರ್ಮಾ ಟಿ20 ಮತ್ತು ಏಕದಿನ ತಂಡದ ನಾಯಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ರೋಹಿತ್ ನಾಯಕರಾದ ತಕ್ಷಣ ಮಾತಿನ ದಾಟಿ ಬದಲಿಸಿದ ಶಾಸ್ತ್ರಿ : 
ಮಾಧ್ಯಮವೊಂದರಲ್ಲಿ ಮಾತನಾಡಿದ ರವಿ ಶಾಸ್ತ್ರಿ (Ravi Shastri) , ಟೆಸ್ಟ್ ಮತ್ತು ODI-T20 ಕ್ರಿಕೆಟ್‌ ಗೆ ಪ್ರತ್ಯೇಕ ನಾಯಕನನ್ನು ಹೊಂದುವುದು ವಿರಾಟ್ (Virat Kohli) ಮತ್ತು ರೋಹಿತ್ (Rohit Sharma) ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳಿದ್ದಾರೆ. ಎಲ್ಲಿಯವರೆಗೆ  ಬಯೋ ಬಬಲ್‌ ನೀತಿಯನ್ನು ಅನುಸರಿಸಬೇಕು ಎನುವುದು ಗೊತ್ತಿಲ್ಲ, ಎಲ್ಲಿಯವರೆಗೆ ಈ ರೀತಿಯ ಜೀವನ ಶೈಲಿಯನ್ನು ಅಳವಡಿಸಬೇಕು ಎನ್ನುವುದು ಕೂಡಾ ತಿಳಿದಿಲ್ಲ. ಹೀಗಿರುವಾಗ ಒಬ್ಬ ವ್ಯಕ್ತಿಯೇ ಎಲ್ಲವನ್ನೂ  ನಿಭಾಯಿಸಲು ಸಾಧ್ಯವಿಲ್ಲ. ಇದು ಸುಲಭಡ ಮಾತಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ : South Africa vs India: ಕೆ.ಎಲ್.ರಾಹುಲ್ ಭರ್ಜರಿ ಅಜೇಯ ಶತಕಕ್ಕೆ ಹರಿದು ಬಂದು ಮೆಚ್ಚುಗೆ ಸುರಿಮಳೆ


ಕೊಹ್ಲಿ ಬಗ್ಗೆ ಹೇಳಿದ ಮಾತೇನು ? 
'ನಾನು ಏನು ಮಾಡಬೇಕು ಎನ್ನುವುದು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು. ಒಬ್ಬ ಬ್ಯಾಟ್ಸ್‌ಮನ್ ಆಗಿ ಅವರಿಂದ  ಅತ್ಯುತ್ತಮವಾದುದನ್ನು ಹೊರ ತರಲು ಸಾಧ್ಯವಾಗದಿದ್ದರೆ ಅದು ಕೋಚ್ (Coach) ಆಗಿ ನನ್ನ ವೈಫಲ್ಯ ಎಂದು ನಾನು ಭಾವಿಸುತ್ತೇನೆ ಎಂದು ಶಾಸ್ತ್ರಿ ಹೇಳಿದ್ದಾರೆ. ಭಾರತ ಪರ 80 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಾಸ್ತ್ರಿ, ಕೊಹ್ಲಿ ಜತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ನಾವಿಬ್ಬರೂ ತುಂಬಾ ಆಕ್ರಮಣಕಾರಿ ಪ್ರವೃತ್ತಿಯವರು. ಗೆಲ್ಲಲು ಬೇಕಾಗಿ ಆಡುತ್ತೇವೆ. ಗೆಲ್ಲಬೇಕಾದರೆ 20 ವಿಕೆಟ್‌ಗಳನು ಪಡೆಯಬೇಕು ಎನ್ನುವುದನ್ನು ನಾವು ಬಹಳ ಬೇಗನೆ ಅರಿತುಕೊಂಡೆವು.  ನಾವು ಆಕ್ರಮಣಕಾರಿ ಮತ್ತು ನಿರ್ಭೀತ ಕ್ರಿಕೆಟ್ ಆಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.