Ravi Shastri : 2019 ರ ವಿಶ್ವಕಪ್ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ರವಿಶಾಸ್ತ್ರಿ 

ಶಾಸ್ತ್ರಿ ಅವರು ತಮ್ಮ ಸ್ಥಾನವನ್ನು ತೊರೆದ ದಿನದಿಂದಲೂ ಅವರು ಆಯ್ಕೆಗಾರರು, ತಂಡದ ಡ್ರೆಸ್ಸಿಂಗ್ ರೂಮ್ ಮತ್ತು ಬೋರ್ಡ್ ಬಗ್ಗೆ ದೊಡ್ಡ, ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಶಾಸ್ತ್ರಿ ಕೂಡ 2019ರ ವಿಶ್ವಕಪ್‌(2019 World Cup)ನಲ್ಲಿ ಭಾರತದ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

Written by - Channabasava A Kashinakunti | Last Updated : Dec 11, 2021, 09:31 AM IST
  • ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ರವಿಶಾಸ್ತ್ರಿ
  • 2019ರ ಸೋಲಿನ ಕುರಿತು ಮಾತನಾಡಿದ ಮಾಜಿ ಕೋಚ್
  • ಆಯ್ಕೆಗಾರರ ​​ಬಗ್ಗೆ ಈ ವಿಷಯ ಹೇಳಿದ ರವಿಶಾಸ್ತ್ರಿ

Ravi Shastri : 2019 ರ ವಿಶ್ವಕಪ್ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ರವಿಶಾಸ್ತ್ರಿ  title=

ನವದೆಹಲಿ : 2021ರ ಟಿ20 ವಿಶ್ವಕಪ್‌ನೊಂದಿಗೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ರವಿಶಾಸ್ತ್ರಿ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಶಾಸ್ತ್ರಿ ಅವರು ತಮ್ಮ ಸ್ಥಾನವನ್ನು ತೊರೆದ ದಿನದಿಂದಲೂ ಅವರು ಆಯ್ಕೆಗಾರರು, ತಂಡದ ಡ್ರೆಸ್ಸಿಂಗ್ ರೂಮ್ ಮತ್ತು ಬೋರ್ಡ್ ಬಗ್ಗೆ ದೊಡ್ಡ, ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಶಾಸ್ತ್ರಿ ಕೂಡ 2019ರ ವಿಶ್ವಕಪ್‌(2019 World Cup)ನಲ್ಲಿ ಭಾರತದ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಶಾಸ್ತ್ರಿ ಹೇಳಿಕೆಯಿಂದ ಸಂಚಲನ

ಭಾರತದ 2019 ರ ಏಕದಿನ ವಿಶ್ವಕಪ್ ತಂಡದಲ್ಲಿ ಮೂರು ವಿಕೆಟ್‌ಕೀಪರ್‌ಗಳನ್ನು ಆಯ್ಕೆ ಮಾಡುವುದು ಅಗ್ರಾಹ್ಯ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ(Ravi Shastri) ಹೇಳಿದ್ದಾರೆ, ಏಕೆಂದರೆ ಈ ಪಂದ್ಯಾವಳಿಯಲ್ಲಿ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಬಹುದಿತ್ತು. 2019 ರ ವಿಶ್ವಕಪ್‌ಗೆ ಕೆಲವು ತಿಂಗಳುಗಳ ಮೊದಲು, ಆಗಿನ ODI ನಾಯಕ ವಿರಾಟ್ ಕೊಹ್ಲಿ ರಾಯುಡು ಪಂದ್ಯಾವಳಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ಹೇಳಿದ್ದರು. ಆದರೆ, ನಂತರ ಎಂಎಸ್ ಕೆ ಪ್ರಸಾದ್ ಆಯ್ಕೆ ಸಮಿತಿ ರಾಯುಡು ಅವರನ್ನು ಆಯ್ಕೆ ಮಾಡಲಿಲ್ಲ.

ಇದನ್ನೂ ಓದಿ : T20I ಮತ್ತು ODI ನಾಯಕರಾದ ನಂತರ ರೋಹಿತ್ ಶರ್ಮಾ ಸಂಭಾವನೆ ಎಷ್ಟು ಹೆಚ್ಚಾಗುತ್ತೆ? ಸಂಪೂರ್ಣ ವಿವರ ತಿಳಿಯಿರಿ

ತಂಡದ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ

ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂಭಾಷಣೆಯಲ್ಲಿ, ಶಾಸ್ತ್ರಿ ಅವರು ಮೂವರು ವಿಕೆಟ್ ಕೀಪರ್‌ಗಳ ಬದಲಿಗೆ ರಾಯುಡು(Ambati Rayudu) ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಬಹಿರಂಗಪಡಿಸಿದ್ದಾರೆ. ಶಾಸ್ತ್ರಿ, 'ಆ ತಂಡದ ಆಯ್ಕೆಯಲ್ಲಿ ನನ್ನ ಕೈವಾಡವಿರಲಿಲ್ಲ. ಆದರೆ, ವಿಶ್ವಕಪ್‌ಗೆ ಮೂವರು ವಿಕೆಟ್‌ಕೀಪರ್‌ಗಳನ್ನು ಆಯ್ಕೆ ಮಾಡುವ ನಿರ್ಧಾರವೂ ಗ್ರಹಿಕೆಗೆ ಮೀರಿದೆ. ಎಂಎಸ್ ಧೋನಿ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಮೂರು ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿ ಸೇರಿದ್ದಾರೆ.

ತಂಡದ ಆಯ್ಕೆಯಲ್ಲಿ ಶಾಸ್ತ್ರಿ ಕೈವಾಡ

ಮಾಜಿ ಮುಖ್ಯ ಕೋಚ್ ಅವರು ತಂಡದ ಆಯ್ಕೆಯಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ. ಆಯ್ಕೆಗಾರರ ​​ಕೆಲಸದಲ್ಲಿ ನಾನೆಂದೂ ಹಸ್ತಕ್ಷೇಪ ಮಾಡಿಲ್ಲ. ನಾನು ಯಾವುದೇ ಪ್ರತಿಕ್ರಿಯೆಯನ್ನು ಕೇಳಿದಾಗ ಹೊರತುಪಡಿಸಿ. ಆಗ ಮಾತ್ರ ನನ್ನ ಮನಸಿನ ಮಾತು. 2019ರ ಏಕದಿನ ವಿಶ್ವಕಪ್‌(2019 World Cup)ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಮ್ಯಾಂಚೆಸ್ಟರ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತದ ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿತು.

ಇದನ್ನೂ ಓದಿ : IPL 2022 Mega Auction ನಲ್ಲಿ ಅತ್ಯಂತ ದುಬಾರಿ ಈ ವಿಕೆಟ್-ಕೀಪರ್ ಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News