ನವದೆಹಲಿ: ಸೆಂಚುರಿಯನ್‌ನಲ್ಲಿರುವ ಸೂಪರ್‌ಸ್ಪೋರ್ಟ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಉತ್ತಮ ಆರಂಭವನ್ನು ಕಂಡಿದೆ.
ಇದನ್ನೂ ಓದಿ: South Africa vs India, 1st Test: ಹರಿಣಗಳ ನಾಡಿನಲ್ಲಿ ಅಬ್ಬರಿಸಿದ ಕನ್ನಡಿಗದ್ವಯರು ..!
ಕನ್ನಡಿಗರಾದ ಕೆ.ಎಲ್.ರಾಹುಲ್ ಮತ್ತು ಮಾಯಾಂಕ್ ಆಗರ್ವಾಲ್ ಅವರ ಭರ್ಜರಿ ಶತಕದ ಜೊತೆಯಾಟದಿಂದಾಗಿ ಭಾರತ ಉತ್ತಮ ಆರಂಭವನ್ನು ಕಂಡಿತು, ಆದರೆ ಈ ಸಂದರ್ಭದಲ್ಲಿ ಮಾಯಾಂಕ್ 60 ರನ್ ಗಳಿಸಿ ವಿಕೆಟ್ ಒಪ್ಪಿಸಿದರು, ಇದಾದ ನಂತರ ಬಂದಂತಹ ಚೇತೆಶ್ವರ್ ಪೂಜಾರ್ ಶೂನ್ಯಕ್ಕೆ ಔಟಾದರು.ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಇನ್ನೇನೂ ಉತ್ತಮ ಇನಿಂಗ್ಸ್ ಕಟ್ಟಬೇಕು ಎನ್ನುವಷ್ಟರಲ್ಲಿ 35 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.ಕೆ.ಎಲ್ ರಾಹುಲ್ ಜೊತೆಗೂಡಿದ ಅಜಿಂಕ್ಯಾ ರಹಾನೆ ಈಗ 40 ರನ್ ಗಳಿಸಿ 73 ರನ್ ಗಳ ಜೊತೆಯಾಟವಾಡುವ ಮೂಲಕ ಭಾರತ ತಂಡವು ಮೊದಲ ದಿನ ಮೇಲುಗೈ ಸಾಧಿಸಿದೆ.
Simply sensational from KL Rahul as he brings up his seventh Test century 🔥
What a knock from the opener!
Watch #SAvIND live on https://t.co/CPDKNx77KV (in select regions) 📺#WTC23 pic.twitter.com/ybV0KDHiVi
— ICC (@ICC) December 26, 2021
ಇನ್ನೊಂದೆಡೆಗೆ ಭಾರತದ ತಂಡದ ಪರವಾಗಿ ಭರ್ಜರಿ ಇನಿಂಗ್ಸ್ ಆಡಿದ ಕೆ.ಎಲ್ ರಾಹುಲ್ 248 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 122 ರನ್ ಗಳಿಸುವ ಮೂಲಕ ವಾಸಿಂ ಜಾಫರ್ ನಂತರ ದಕ್ಷಿಣ ಆಫ್ರಿಕಾದ ನೆಲದಲ್ಲಿ ಶತಕಗಳಿಸಿದ ಎರಡನೇ ಆರಂಭಿಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈಗ ಭಾರತ ತಂಡವು ಮೊದಲ ದಿನದಾಟದಲ್ಲಿ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳನ್ನು ಗಳಿಸಿದೆ.
ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.