ನವದೆಹಲಿ : ಕೊರೊನಾವೈರಸ್‌ನ ಓಮಿಕ್ರಾನ್ (Omicrom) ರೂಪಾಂತರದ ಭೀತಿ ನಡುವೆ, ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ (South Africa Tour) ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರ ಬಿದ್ದಿದೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ  (BCCI) ಗ್ರೀನ್ ಸಿಗ್ನಲ್ ನೀಡಿದೆ.


COMMERCIAL BREAK
SCROLL TO CONTINUE READING

 ದಕ್ಷಿಣ ಆಫ್ರಿಕಾಕ್ಕೆ ತೆರಳಲಿರುವ ಟೀಂ ಇಂಡಿಯಾ :
ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ (IND-NZ test) ಮುಗಿದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿದೆ. ಹಳೆಯ ವೇಳಾಪಟ್ಟಿಯ ಪ್ರಕಾರ, ಸುಮಾರು 7 ವಾರಗಳ ಈ ಪ್ರವಾಸದಲ್ಲಿ 3 ಟೆಸ್ಟ್, 3 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿತ್ತು, ಆದರೆ ಈಗ  ಈ ಕಾರ್ಯಕ್ರಮಗಳಲ್ಲಿ ಕಡಿತಗೊಳಿಸಲಾಗಿದೆ.


ರೋಹಿತ್ ಮತ್ತು ವಿರಾಟ್ ನಡುವೆ ಉತ್ತಮ ನಾಯಕ ಯಾರು? ಗೌತಮ್ ಗಂಭೀರ್ ಶಾಕಿಂಗ್ ಉತ್ತರ!


'ಭಾರತ ಕ್ರಿಕೆಟ್ ತಂಡವು (Team India)  ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಅವರು 3 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದ್ದಾರೆ. ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ನಂತರ ಆಡಲಾಗುವುದು ಎಂದು, ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಹೇಳಿದ್ದಾರೆ. 


ಕ್ವಾರಂಟೈನ್‌ ನಲ್ಲಿರಬೇಕು ಭಾರತೀಯ ಆಟಗಾರರು : 
ಒಮಿಕ್ರಾನ್ (Omicron) ರೂಪಾಂತರದಿಂದಾಗಿ ಕಾರ್ಯಕ್ರಮವನ್ನು ಮೊಟಕುಗೊಳಿಸಬೇಕಾಗಿ ಬಂದರೂ, ಆರಂಭದಿಂದಲೂ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸುವುದು ಬಿಸಿಸಿಐಗೆ (BCCI) ಇಷ್ಟವಿರಲಿಲ್ಲ. ಭದ್ರತೆಯ ದೃಷ್ಟಿಯಿಂದ ಭಾರತೀಯ ಆಟಗಾರರು ಕಟ್ಟುನಿಟ್ಟಾದ ಕ್ವಾರಂಟೈನ್ ಪಾಲಿಸಬೇಕಾಗುತ್ತದೆ. 


ಈ ಸುನಿಲ್ ಗವಾಸ್ಕರ್ ಸಲಹೆಯು ಶತಕ ಗಳಿಸಲು ಸಹಾಯ ಮಾಡಿತು- ಮಯಾಂಕ್ ಅಗರ್ವಾಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.