Omicron Variant Updates:'Omicron ಕೊರೊನಾದ ಇತರ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಸಾಕ್ಷಾಧಾರ ಸಿಕ್ಕಿಲ್ಲ'

Omicron Variant Updates: ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಮೂಲಕ ಈ ರೂಪಾಂತರಿಯನ್ನು (Omicron Virus) ಹೇಗೆ ಎದುರಿಸಬೇಕು ಎಂಬುದನ್ನು ಅರಿಯಲು ಸಾಕಷ್ಟು ಸಮಯ ಸಿಗುತ್ತದೆ ಎಂದು ಸಚಿವಾಲಯ ಹೇಳಿದೆ.

Written by - Nitin Tabib | Last Updated : Dec 4, 2021, 11:42 AM IST
  • ಓಮಿಕ್ರಾನ್ ಕೊರೋನಾದ ಇತರ ರೂಪಾಂತರಿಗಿಂತ ಅಪಾಯಕಾರಿಯಲ್ಲ.
  • ಈ ಕುರಿತಾದ ಯಾವುದೇ ಪುರಾವೆಗಳು ದೊರೆತಿಲ್ಲ.
  • ಓಮಿಕ್ರಾನ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಅಥವಾ ಅಧ್ಯಯನದ ಅವಶ್ಯಕತೆ ಇದೆ.
Omicron Variant Updates:'Omicron ಕೊರೊನಾದ ಇತರ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಸಾಕ್ಷಾಧಾರ ಸಿಕ್ಕಿಲ್ಲ' title=
Omicron Variant Updates (File Photo)

Omicron Variant Updates - ಕರೋನಾ ವೈರಸ್‌ನ ಹೊಸ  ರೂಪಾಂತರಿ Omicron ಗೆ ಸಂಬಂಧಿಸಿದ ರೋಗಲಕ್ಷಣಗಳು (Omicron Symptoms) ಕೊರೋನಾದ ಇತರ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿ ಅಥವಾ ಅಸ್ತಿತ್ವದಲ್ಲಿರುವ ಲಸಿಕೆಗಳು ಅಥವಾ ಚಿಕಿತ್ಸೆಗಳು ಅದರ ಮೇಲೆ ನಿಷ್ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. 'ಚಾನೆಲ್ ನ್ಯೂಸ್ ಏಷ್ಯಾ'ದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಒಮಿಕ್ರಾನ್ ಸೋಂಕಿತ ಇಬ್ಬರು (Omicron Cases) ಸಿಂಗಾಪುರದಿಂದ ಮಲೇಷ್ಯಾ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಒಮಿಕ್ರಾನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಮತ್ತು ಅಧ್ಯಯನಗಳ ಅಗತ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಹೆಚ್ಚಿನ ಪ್ರಕರಣಗಳು ಬರುವ ನಿರೀಕ್ಷೆಯಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ-Jawad Alert : ಜವಾದ್ ಚಂಡಮಾರುತದ ಭೀತಿ, 107 ರೈಲುಗಳು ರದ್ದು, ಒಡಿಶಾದಲ್ಲಿ ಶಾಲೆಗಳಿಗೂ ರಜೆ

ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಈ ರೂಪಾಂತರಿಯನ್ನು ಹೇಗೆ ಎದುರಿಸಬೇಕೆಂದು ಅರಿಯಲು ರೋಗಿಗಳಿಗೆ ಹೆಚ್ಚನ ಸಮಯ ಸಿಗುತ್ತದೆ ಎಂದು ಸಚಿವಾಲಯ ಹೇಳಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಒಮಿಕ್ರಾನ್ ಸೋಂಕಿನ ಹರಡುವಿಕೆಯ ಕುರಿತು ಸಚಿವಾಲಯವು ನವೆಂಬರ್ 27 ರಂದು ಜೋಹಾನ್ಸ್‌ಬರ್ಗ್‌ನಿಂದ ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಸೋಂಕಿನ ಮೊದಲ ಪ್ರಕರಣವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ-Cyclone Jawad: ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಂದ 54,008 ಜನರ ಸ್ಥಳಾಂತರ

ನವೆಂಬರ್ 28 ರಂದು ಸಿಡ್ನಿಗೆ ಭೇಟಿ ನೀಡಿದ್ದರು
ವ್ಯಕ್ತಿ ಅದೇ ದಿನ ಟ್ರಾನ್ಸಿಟ್ ವಿಮಾನಕ್ಕಾಗಿ ಇಲ್ಲಿಗೆ ತಲುಪಿದ್ದರು. ಇದರ ನಂತರ ವ್ಯಕ್ತಿ ನವೆಂಬರ್ 28 ರಂದು ಮತ್ತೊಂದು ಸಿಂಗಾಪುರ್ ಏರ್ಲೈನ್ ​​ವಿಮಾನದಲ್ಲಿ ಸಿಡ್ನಿಗೆ ಪ್ರಯಾಣ ಬೆಳೆಸಿದ್ದರು. ವ್ಯಕ್ತಿಗೆ ಸೋಂಕು ತಗುಲಿರುವುದನ್ನು ಆಸ್ಟ್ರೇಲಿಯಾ ದೃಢಪಡಿಸಿದೆ. ನವೆಂಬರ್ 24 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ವ್ಯಕ್ತಿಯ ಕೊರೊನಾ ವರದಿ  ನೆಗೆಟಿವ್ ಹೊರಬಂದಿದೆ. ಶುಕ್ರವಾರದವರೆಗೆ ಸಿಂಗಾಪುರದಲ್ಲಿ 2,67,916 ಸೋಂಕು ಪ್ರಕರಣಗಳು ವರದಿಯಾಗಿದ್ದು, 744 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ-Cyclone Jawad Updates: ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ವೇಗ ಪಡೆಯಲಿದೆ ಜವಾದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News