ನವದೆಹಲಿ : ಟಿ20ಐ ಸರಣಿಗೆ ಟೀಂ ಇಂಡಿಯಾ ಇಂಗ್ಲೆಂಡ್ ಟೆಸ್ಟ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ತಂಡವು ಸಿದ್ಧವಾಗುತ್ತಿದೆ. ಈ ಮಧ್ಯ ಆಸ್ಟ್ರೇಲಿಯಾದಲ್ಲಿ ಮುಂಬರುವ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ತಂಡವು ಹೇಗಿರುತ್ತದೆ? ಎಂಬ ಕುತೊಹಲ ಕ್ರಿಕೆಟ್ ಪ್ರೇಮಿಗಳಿಗಿದೆ. ಈ ಕುರಿತು ಮಹತ್ವದ ಸುಳಿವು ಸಿಕ್ಕಿದೆ.


COMMERCIAL BREAK
SCROLL TO CONTINUE READING

ಇದೀಗ ಈ ಬಗ್ಗೆ ಸುಳಿವು ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ಹೆಡ್ ಕೋಚ್, ರಾಹುಲ್ ದ್ರಾವಿಡ್ ಮತ್ತು ಟೀಂ ಮ್ಯಾನೇಜ್‌ಮೆಂಟ್ ಇಂಗ್ಲೆಂಡ್ ಟಿ20ಐ ನಂತರ ಟೀಂ  ಇತ್ಯರ್ಥಪಡಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : 'ಈ ಭಾರತೀಯ ಆಟಗಾರ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ'-ಡೇಲ್ ಸ್ಟೇನ್


ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ, "ಕೋಚ್ ರಾಹುಲ್ ದ್ರಾವಿಡ್ ಇದನ್ನು ಪರಿಶೀಲಿಸುತ್ತಿದ್ದಾರೆ. ಅವರು ಕೆಲವು ಹಂತದಲ್ಲಿ ಸ್ಥಿರವಾದ ಆಟಗಾರರನ್ನು ಆಡಲು ಯೋಜಿಸಿದ್ದಾರೆ. ಬಹುಶಃ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸದಲ್ಲಿ ಆಡುವ ಸಾಧ್ಯತೆಯಿರುವ ಆಟಗಾರರ ಪಟ್ಟಿ ತಯಾರಿಸಲಿದ್ದೇವೆ.


ಹರಿಣಗಳ ವಿರುದ್ಧ ಆಡುತ್ತಿರುವ ತಂಡವನ್ನು ನೋಡಿದರೆ, ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಅವೇಶ್ ಖಾನ್ ಅವರ ಸ್ಥಾನಕ್ಕಾಗಿ ಖಚಿತವಾಗಿ ಪ್ರಬಲ ಆಟಗಾರ ಲಿಸ್ಟ್ ರೆಡಿ ಮಾಡಲಿದೆ ಮತ್ತು ಕ್ಯಾಪ್ಟನ್ ರಿಷಬ್ ಪಂತ್, ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಸ್ವಲ್ಪ ನಿರಾಸೆ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ. 


ಜೂನ್ 26 ರಂದು ಪ್ರಾರಂಭವಾಗಲಿರುವ ಐರ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ರಾಹುಲ್ ತ್ರಿಪಾಠಿ ಕೂಡ ಮರಳಲಿದ್ದಾರೆ.


ಇದನ್ನೂ ಓದಿ : IND vs SA : ರಿಷಬ್ ಪಂತ್ ನಂಬಿಕೆ ಹುಸಿಗೊಳಿಸಿದ ಈ ಇಬ್ಬರು ಆಟಗಾರರು!


ಟೆಸ್ಟ್ ಸರಣಿಗೆ ಸಂಬಂಧಿಸಿದಂತೆ, ಭಾರತವು ಮೂರು ಟಿ20ಐ ಗಳನ್ನು ಆಡಲಿದೆ, ಇದರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೂಡ ಮರಳಲಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.