Women's Premier League 2024 : ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಂದು (ಮಾ.೪)ರಂದು ಸೋಮವಾರ  ಮಹಿಳಾ ಪ್ರೀಮಿಯರ್​ ಲೀಗ್​ 2024ರ ಎರಡನೇ ಆವೃತ್ತಿಯ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs UPW) ತಂಡಗಳು ಆಡಿದ್ದು, ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು 23 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಲೀಗ್​ನಲ್ಲಿ ಮತ್ತೆ ಗೆಲುವನ್ನು ಪಡೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಮೊದಲಿಗೆ ಯುಪಿ ನಾಯಕಿ ಅಲಿಸ್ಸಾ ಹೀಲಿ ಬೆಂಗಳೂರು ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.ಲೀಗ್​ನ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್​ಸಿಬಿ, ಆ ನಂತರ ಸತತ ಎರಡು ಪಂದ್ಯಗಳನ್ನು ಸೋತು ಲಯ ಕಳೆದುಕೊಂಡಿತ್ತು.


ಇದನ್ನು ಓದಿ : ಸ್ಮೃತಿ ಮಂಧನಾ ಬಿರುಸಿನ ಹೊಡೆತಕ್ಕೆ ತತ್ತರಿಸಿದ ವಾರಿಯರ್ಸ್ :  RCBಯಿಂದ ಯುಪಿಗೆ ಬಿಗ್ ಟಾರ್ಗೆಟ್


ನಾಯಕಿ ಸ್ಮೃತಿ ಮಂಧನಾ ಮತ್ತು ಪೆರ್ರಿ ಸ್ಪೋಟಕ ಬ್ಯಾಟಿಂಗ್​ ಮಾಡುವ ಮೂಲಕ ಆರ್​ಸಿಬಿ ತಂಡ 20 ಓವರ್​ ಗೆ 3 ವಿಕೆಟ್ ನಷ್ಟಕ್ಕೆ 198 ರನ್​ ಗಳಿಸಿತು. ಆರ್​ಸಿಬಿ ತಂಡದ ಬ್ಯಾಟರ್​ ಗಳು ಯುಪಿ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡುವ ಮತ್ತು ಮೂಲಕ ಚಿನ್ನಸ್ವಾಮಿ ಮೈದಾನದ ಮೂಲೆ ಮೂಲೆಗೂ ಚೆಂಡುಗಳನ್ನು ಅಟ್ಟಿದರು. 


WPL 2024: ಪೆರ್ರಿ ಪವರ್‌ ಫುಲ್‌ ಶಾಟ್‌ಗೆ ಪುಡಿ ಪುಡಿ ಆಯ್ತು ಕಾರಿನ ಗ್ಲಾಸ್.!


ಇವರನ್ನು ಹೊರತುಪಡಿಸಿದರೆ, ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಕ್ರಮವಾಗಿ 33 ಹಾಗೂ 31 ರನ್ ಗಳಿಸಿದರು.  ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡವು ನಿಗದಿತ 20 ಓರವ್​ಗೆ 8 ವಿಕೆಟ್ ನಷ್ಟಕ್ಕೆ 175  ರನ್​ ಗಳಿಸುವ ಮೂಲಕ 24 ರನ್​ ಗಳಿಂದ ಸೋಲನ್ನಪ್ಪಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.