WPL 2024: ಪೆರ್ರಿ ಪವರ್‌ ಫುಲ್‌ ಶಾಟ್‌ಗೆ ಪುಡಿ ಪುಡಿ ಆಯ್ತು ಕಾರಿನ ಗ್ಲಾಸ್.!

Ellyse Perry's huge six in WPL : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್​ ಮತ್ತು ಯುಪಿ ವಾರಿಯರ್ಸ್​ ಪಂದ್ಯ ನಡೆಯಿತು. 

Written by - Chetana Devarmani | Last Updated : Mar 4, 2024, 11:20 PM IST
  • ಯುಪಿ ವಾರಿಯರ್ಜ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 37 ಎಸೆತಗಳಲ್ಲಿ 58 ರನ್‌ ಕಲೆ ಹಾಕಿದ ಎಲ್ಲಿಸ್ ಪೆರ್ರಿ
  • ಎಲ್ಲಿಸ್ ಪೆರ್ರಿ ಸಿಕ್ಸ್‌ ಹೊಡೆದ ವಿಡಿಯೋ ಎಲ್ಲೆಡೆ ವೈರಲ್‌
WPL 2024: ಪೆರ್ರಿ ಪವರ್‌ ಫುಲ್‌ ಶಾಟ್‌ಗೆ ಪುಡಿ ಪುಡಿ ಆಯ್ತು ಕಾರಿನ ಗ್ಲಾಸ್.!  title=

Ellyse Perry huge six in WPL Video :ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್​ ಮತ್ತು ಯುಪಿ ವಾರಿಯರ್ಸ್​ ಪಂದ್ಯ ನಡೆಯಿತು. ಮಹಿಳೆಯರ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.  

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು. ತಂಡದ ಪರ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 80 ರನ್ ಹೊಡೆದರು. 

ಇದನ್ನೂ ಓದಿ: ಸ್ಮೃತಿ ಮಂಧನಾ ಬಿರುಸಿನ ಹೊಡೆತಕ್ಕೆ ತತ್ತರಿಸಿದ ವಾರಿಯರ್ಸ್ : RCBಯಿಂದ ಯುಪಿಗೆ ಬಿಗ್ ಟಾರ್ಗೆಟ್ 

 

 

ಎಲ್ಲಿಸ್ ಪೆರ್ರಿ 37 ಎಸೆತಗಳಲ್ಲಿ 58 ರನ್‌ ಕಲೆ ಹಾಕುವ ಮೂಲಕ ಸ್ಮೃತಿಗೆ ಉತ್ತಮ ಸಾಥ್‌ ನೀಡಿದರು. ಈ ಪಂದ್ಯದಲ್ಲಿ ಪೆರ್ರಿ ಬಾರಿಸಿದ ಸಿಕ್ಸರ್ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಪೆರ್ರಿ ಹೊಡೆದ ಈ ಬಾಲ್‌ ಬೌಂಡರಿ ಬಳಿ ನಿಲ್ಲಿಸಿದ್ದ ಟಾಟಾ ಪಂಚ್​ ಕಾರಿನ ಗ್ಲಾಸ್‌ ಪುಡಿಪಡು ಆಯಿತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

33 ವರ್ಷದ ಪೆರ್ರಿ ಕೂಡ ಈ ಸಂದರ್ಭದಲ್ಲಿ ಆಶ್ಚರ್ಯಚಕಿತರಾದರು. ಕಾರಿನ ಕಿಟಕಿ ಗಾಜು ಒಡೆದಿದ್ದನ್ನು ತಿಳಿದು ಪೆರ್ರಿ ತಲೆ ಮೇಲೆ ಕೈ ಇಟ್ಟುಕೊಂಡರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: IPL 2024: ಧೋನಿ ಬಳಿಕ CSK ಮುಂದಿನ ನಾಯಕ ಇವರೇ: ಮಾಹಿ ಪೋಸ್ಟರ್ ಬೆನ್ನಲ್ಲೇ ಹೊರಬಿತ್ತು ಸೀಕ್ರೆಟ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News