Smriti Mandhana : ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇಂದು (ಮಾ.೪)ರಂದು ಸೋಮವಾರ ಮಹಿಳಾ ಪ್ರೀಮಿಯರ್ ಲೀಗ್ 2024ರ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs UPW) ತಂಡಗಳು ಆಡುತ್ತಿವೆ.
ಮೊದಲಿಗೆ ಯುಪಿ ನಾಯಕಿ ಅಲಿಸ್ಸಾ ಹೀಲಿ ಬೆಂಗಳೂರು ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರ್ಸಿಬಿ ತಂಡದ ಬ್ಯಾಟರ್ ಗಳು ಯುಪಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮತ್ತು ಮೂಲಕ ಚಿನ್ನಸ್ವಾಮಿ ಮೈದಾನದ ಮೂಲೆ ಮೂಲೆಗೂ ಚೆಂಡುಗಳನ್ನು ಅಟ್ಟಿದರು.
ಇದನ್ನು ಓದಿ : ಬೆಂಗಳೂರು ಮೂಲದ Gobuds Sports Earbuds ಬಿಡುಗಡೆ : ಈ ಕುರಿತು ಮಾಹಿತಿ ಇಲ್ಲಿದೆ
ಅದರಲ್ಲಿಯೂ ನಾಯಕಿ ಸ್ಮೃತಿ ಮಂಧನಾ ಪೆರ್ರಿ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಆರ್ಸಿಬಿ ತಂಡ ಅಂತಿಮವಾಗಿ 20 ಓವರ್ ಗೆ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸುವ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ 199 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಆರಂಭಿಕರು ಉತ್ತಮ ಆರಂಭ ನೀಡಿದರು. ವೇಗವಾಗಿ ಸಿಕ್ಸ್, ಫೋರ್ ಗಳ ಮೂಲಕ ರನ್ ಗಳಿಸುವ ಮೂಲಕ ಮಿಂಚಿದರು. ನಾಯಕಿಯಾಗಿ ಮತ್ತೊಮ್ಮೆ ಮಿಂಚಿದ ಸ್ಮೃತಿ ಮಂಧಾನ 50 ಎಸೆತದಲ್ಲಿ 10 ಬೌಂಡರಿ ಮತ್ತು 3 ಸಿಕ್ಸ್ ಮೂಲಕ 80 ರನ್ ಗಳಿಸಿ ಶತಕ ಮಿಸ್ ಮಾಡಿಕೊಂಡರು. ಮಂಧನಾ ಬಳಿಕ ಎಲ್ಲಿಸ್ ಪೆರ್ರಿ ಅವರೂ ಸಹ ಭರ್ಜರಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಸಿಡಿಸಿದರು.
ಇದನ್ನು ಓದಿ : ರಾಜ್ಯದಲ್ಲಿ 1,190 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಮುಂದಾದ ಎಸ್ಕಾಂ
ಕೊನೆಯಲ್ಲಿ ಮಿಂಚಿದ ಎಲ್ಲಿಸ್ ಪೆರ್ರಿ 37 ಎಸೆತದಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ ಮೂಲಕ 58 ರನ್ ಗಳಿಸಿದರು. ಉಳಿದಂತೆ ಸೋಫಿ ಡಿವೈನ್ 2 ರನ್, ಸಬ್ಬಿನೇನಿ ಮೇಘನಾ 21 ಎಸೆತದಲ್ಲಿ 5 ಬೌಂಡರಿ ಮೂಲಕ 28 ರನ್, ರಿಚಾ ಘೋಷ್ 10 ಎಸೆತದಲ್ಲಿ 2 ಬೌಂಡರಿ ಮತ್ತು 1 ಸಿಕ್ಸ್ ಮೂಲಕ 21 ರನ್ ಗಳಿಸಿದರು.
Batting carnage in Bengaluru 💥
Captain Smriti Mandhana and Ellyse Perry power @RCBTweets to 198/3
Do we have a high-scoring thriller on the cards ❓
Find out 🔜
Scorecard 💻📱https://t.co/iplAqFh4Yz#TATAWPL | #UPWvRCB pic.twitter.com/tiFhDB2uG5
— Women's Premier League (WPL) (@wplt20) March 4, 2024
ಈ ಪಂದ್ಯದಲ್ಲಿ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿದ್ದು, ಯುಪಿ ವಾರಿಯರ್ಸ್ ತಂಡಕ್ಕೆ 199 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.