Yuvraj Singh: ಯುವರಾಜ್ ಸಿಂಗ್ ಇಂತಹ ಕೆಲಸಕ್ಕೆ ಸೊಸೆ ಗಂಭೀರ ಆರೋಪ ಮಾಡಿದ್ದರು!
ಯುವರಾಜ್ ಸಿಂಗ್ ಅವರ ಮಾಜಿ ಸೊಸೆ ಆಕಾಂಕ್ಷಾ ಶರ್ಮಾ(Akanksha Sharma) ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದರು.
ನವದೆಹಲಿ: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್(Yuvraj Singh) ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಹೀರೋ ಆಗಿದ್ದರು. ಯುವರಾಜ್ ಮೈದಾನದಲ್ಲಿ ಸಿಕ್ಸರ್ ಬಾರಿಸಿದಷ್ಟು ಸಲೀಸಾಗಿ ಅವರ ವೈಯಕ್ತಿಕ ಬದುಕು ಸುಲಭವಾಗಿರಲಿಲ್ಲ. ಯುವಿ ಹಲವು ಬಾರಿ ದೊಡ್ಡ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ಪೈಕಿ ಅವರ ಮಾಜಿ ಸೊಸೆ(Yuvraj Singh Sister In Law) ಯುವಿ ಕುಟುಂಬದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಏನಿದು ಆರೋಪ ಅಂತೀರಾ..?
ಯುವರಾಜ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ
ಯುವರಾಜ್ ಸಿಂಗ್ ಅವರ ಮಾಜಿ ಸೊಸೆ ಆಕಾಂಕ್ಷಾ ಶರ್ಮಾ(Akanksha Sharma) ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದರು. ಸುದ್ದಿ ಸಂಸ್ಥೆ ANI ಪ್ರಕಾರ, ಯುವರಾಜ್ ಸಿಂಗ್ ಅವರ ಸೊಸೆ ಆಕಾಂಕ್ಷಾ ಶರ್ಮಾ ಅವರು 2017ರಲ್ಲಿ ಯುವಿ, ಅವರ ಸಹೋದರ ಜೋರಾವರ್ ಸಿಂಗ್ ಮತ್ತು ಅವರ ತಾಯಿ ಶಬ್ನಮ್ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆಕಾಂಕ್ಷಾ ಶರ್ಮಾ ಅವರು ಬಿಗ್ ಬಾಸ್ 10ರ ಸಂದರ್ಭದಲ್ಲಿ ಅನೇಕ ಸಂದರ್ಶನಗಳನ್ನು ನೀಡಿದ್ದರು. ಈ ವೇಳೆ ಅವರು ಯುವರಾಜ್ ಸಿಂಗ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳ ನಂತರ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿತ್ತು.
ಇದನ್ನೂ ಓದಿ: IPL Mega Auction: ಈ ಆಟಗಾರರನ್ನು ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಬೇಕೆಂದು ಆಕಾಶ್ ಚೋಪ್ರಾ ಬಯಸಿದ್ದಾರೆ
ಯುವಿ ವಿರುದ್ಧ ಗಾಂಜಾ ಸೇವನೆಯ ಆರೋಪ
ಸಂದರ್ಶನವೊಂದರಲ್ಲಿ ಯುವರಾಜ್ ಸಿಂಗ್ ಗಾಂಜಾ ಸೇದುವುದನ್ನು ನೋಡಿದ್ದೇನೆ ಎಂದು ಆಕಾಂಕ್ಷಾ ಹೇಳಿಕೊಂಡಿದ್ದರು. ಯುವಿ ಮತ್ತು ಅವರ ಸಹೋದರ ಝೊರಾವರ್‌ಗೆ ಮರಿಜುವಾನಾ ಡ್ರಗ್ಸ್ ಸೇದುವ ಚಟ ಇದೆ ಎಂದು ಬಹಿರಂಗ ಆರೋಪ ಮಾಡಿದ್ದರು. ಈ ವೇಳೆ ಆಕಾಂಕ್ಷಾ ಶರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯುವರಾಜ್ ತಾಯಿ ಶಬನಂ ನಿರ್ಧರಿಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.
ಯುವಿ ಸಹೋದರನ ಮಾಜಿ ಪತ್ನಿ ಆಕಾಂಕ್ಷಾ ಶರ್ಮಾ
ಯುವರಾಜ್ ಸಿಂಗ್(Yuvraj Singh) ಅವರಿಗೆ ಇಬ್ಬರು ಸಹೋದರರಿದ್ದಾರೆ. ಅವರ ಕಿರಿಯ ಸಹೋದರನ ಹೆಸರೇ ಜೋರಾವರ್ ಸಿಂಗ್. ಜೋರಾವರ್ ಮಾರ್ಚ್ 1, 2014ರಂದು ತಮ್ಮ ಗೆಳತಿ ಆಕಾಂಕ್ಷಾ ಶರ್ಮಾ ಅವರನ್ನು ವಿವಾಹವಾಗಿದ್ದರು. ಆದರೆ ಕೇವಲ 4 ತಿಂಗಳೊಳಗೆ ಆಕಾಂಕ್ಷಾ ತಮ್ಮ ವೈವಾಹಿಕ ಜೀವನದ ಬಗ್ಗೆ ಅಸಮಾಧಾನಗೊಂಡಿದ್ದರು. ಬಳಿಕ ಅವರು ವಿಚ್ಛೇದನಕ್ಕೆ ನಿರ್ಧರಿಸಿದರು. ಅವರ ಆರೋಪಗಳ ನಂತರ ಯುವರಾಜ್ ವಿರುದ್ಧ ಯಾವುದೇ ರೀತಿ ಕ್ರಮ ಕೈಗೊಂಡಿರುವ ಬಗ್ಗೆ ಸುದ್ದಿಯಾಗಲಿಲ್ಲ.
ಇದನ್ನೂ ಓದಿ: South Africa Series: ದಕ್ಷಿಣ ಆಫ್ರಿಕಾ ಪ್ರವಾಸ; ಸರಣಿ ಆರಂಭಕ್ಕೂ ಮೊದಲೇ ರದ್ದುಗೊಳ್ಳುತ್ತದೆಯೇ?
ಕೌಟುಂಬಿಕ ದೌರ್ಜನ್ಯ ಪ್ರಕರಣ
ಸುದ್ದಿ ಸಂಸ್ಥೆ ANI ಪ್ರಕಾರ ಯುವರಾಜ್, ಅವರ ಸಹೋದರ ಮತ್ತು ತಾಯಿ ವಿರುದ್ಧ ಆಕಾಂಕ್ಷಾ ಕೌಟುಂಬಿಕ ದೌರ್ಜನ್ಯ(Domestic Violence Case)ದ ಪ್ರಕರಣವನ್ನು ದಾಖಲಿಸಿದ್ದರು. ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಅವರು ಎಲ್ಲಾ ಆಭರಣಗಳನ್ನು ವಾಪಸ್ ಪಡೆಯಲು ಬಯಸಿದ್ದರು ಮತ್ತು ಮಗುವನ್ನು ಹೊಂದುವಂತೆ ತನಗೆ ಒತ್ತಡ ಹೇರುತ್ತಿದ್ದರು ಎಂದು ಆಕಾಂಕ್ಷಾ ಹೇಳಿಕೊಂಡಿದ್ದರು. ಯುವಿ ತಾಯಿ ಶಬ್ನಮ್ ತುಂಬಾ ಪ್ರಬಲರಾಗಿದ್ದರು ಮತ್ತು ಅವರು ತಮ್ಮ ನಿರ್ಧಾರಗಳನ್ನು ಎಲ್ಲರ ಮೇಲೆ ಹೇರುತ್ತಿದ್ದರು ಅಂತಾ ಆಕಾಂಕ್ಷಾ ಆರೋಪಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.