ನವದೆಹಲಿ: ಆರ್‌ಪಿಎಸ್‌ಜಿ ಒಡೆತನದ ಲಕ್ನೋ ಫ್ರಾಂಚೈಸಿಯು ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್‌ರನ್ನು ಮುಖ್ಯ ಕೋಚ್ ಮತ್ತು ಟೀಂ ಇಂಡಿಯಾ(Team India)ದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್(Gautam Gambhir) ಅವರನ್ನು ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ. 2 ಹೊಸ ತಂಡಗಳ ಸೇರ್ಪಡೆಯೊಂದಿಗೆ 2022ನೇ ಸಾಲಿನ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮತ್ತಷ್ಟು ರಂಗು ಬಂದಿದೆ.
ಆರ್‌ಪಿ-ಸಂಜೀವ್ ಗೋಯೆಂಕಾ ಅವರು ಲಕ್ನೋ ತಂಡಕ್ಕಾಗಿ ಸಾವಿರಾರು ಕೋಟಿ ರೂ. ಮೊತ್ತದ ಬಿಡ್(IPL 2022 Mega Auction) ಅನ್ನು ಗೆದ್ದಿದ್ದಾರೆ. ಮೆಗಾ ಹರಾಜಿಗೂ ಮೊದಲೇ ಈಗಾಗಲೇ ಅವರು ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿದ್ದಾರೆ. ಮಾಜಿ ಭಾರತ ಅಂತಾರಾಷ್ಟ್ರೀಯ ವಿವರಣೆಗಾರ ಆಕಾಶ್ ಚೋಪ್ರಾ ಇದನ್ನು ಅನುಮೋದಿಸಿದ್ದಾರೆ. ‘ಲಕ್ನೋ ಫ್ರಾಂಚೈಸಿಯು ಎಲ್ಲಾ ಸರಿಯಾದ ಕ್ರಮಗಳನ್ನು ಮಾಡುತ್ತಿದೆ. ತಮ್ಮ ತಂಡಕ್ಕೆ ಅತ್ಯುತ್ತಮ ತರಬೇತುದಾರರಾಗಿ ಆಂಡಿ ಫ್ಲವರ್‌ರನ್ನು ನೇಮಕ ಮಾಡಿಕೊಂಡಿದ್ದ ಲಕ್ನೋ ಫ್ರಾಂಚೈಸಿಯು, 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಅವರನ್ನು ಮಾರ್ಗದರ್ಶಕರಾಗಿ ಆಯ್ಕೆ ಮಾಡಿಕೊಂಡಿದೆ. ಸದ್ಯ ಅತ್ಯುತ್ತಮ ತಂಡ ಕಟ್ಟಲು ಅನುಭವಿ ಆಟಗಾರರನ್ನು ಪಿಕ್ ಮಾಡಲು ಕಾಯುತ್ತಿದ್ದೇನೆ ಎಂದು ಕೆಕೆಆರ್ ತಂಡದ ಮಾಜಿ ಬ್ಯಾಟ್ಸ್ ಮನ್ ಟ್ವೀಟ್ ಮಾಡಿದ್ದಾರೆ.
Lucknow franchise is making all the right moves…Flower as a coach. Gambhir as a mentor. Now, waiting for the draft picks. These three will make their season—
1. Rahul
2. Rashid
3. Ishan/Hardik #IPL2022— Aakash Chopra (@cricketaakash) December 18, 2021
ಇದನ್ನೂ ಓದಿ: Pakistan ಲೆಗ್ ಸ್ಪಿನ್ನರ್ Yasir Shah ವಿರುದ್ಧ ಗನ್ ಪಾಯಿಂಟ್ ಮೇಲೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ!
ಚೋಪ್ರಾ ಈಗ ಮೆಗಾ ಹರಾಜಿನ ಸಮಯದಲ್ಲಿ ಡ್ರಾಫ್ಟ್ ಪಿಕ್ಸ್ ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೊಸ ಐಪಿಎಲ್ ಫ್ರಾಂಚೈಸಿ(Lucknow Franchise)ಯು ಕನ್ನಡಿಗ ಕೆ.ಎಲ್.ರಾಹುಲ್, ಅಫ್ಘಾನ್ ಲೆಗ್ ಸ್ಪಿನ್ನರ್ ರಶೀದ್ ಖಾನ್, ಇಶಾನ್ ಕಿಶನ್ ಅಥವಾ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆ.ಎಲ್.ರಾಹುಲ್(KL Rahul) ಲಕ್ನೋ ತಂಡದೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆ. ಕಳೆದ ಋತುವಿನ ಅತಿಹೆಚ್ಚು ರನ್ ಗಳಿಸಿ ಮಿಂಚಿದ್ದ ರಾಹುಲ್ ಪಂಜಾಬ್ ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದರು. ಬಳಿಕ ಅವರ ಹೊಸದಾಗಿ ಸೇರ್ಪಡೆಯಾಗಿರುವ 2 ಪ್ರಾಂಚೈಸಿಗಳ ಕಡೆ ಮುಖ ಮಾಡಿದ್ದರು. ಅವರು ಬಹುತೇಕ ಲಕ್ನೋ ತಂಡದ ಜವಾಬ್ದಾರಿಯನ್ನು ಹೊರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: VIDEO: ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ವಿಸ್ಮಯ, ಕ್ಲೀನ್ ಬೌಲ್ಡ್ ಆದ ನಂತರವೂ ಬ್ಯಾಟ್ಸ್‌ಮನ್ ಔಟಾಗಲಿಲ್ಲ
‘ಹಿಟ್ ಮ್ಯಾನ್’ ರೋಹಿತ್ ಶರ್ಮಾ ಗಾಯಾಳು ಆಗಿದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ(Team India)ದ ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಉಪನಾಯಕನ್ನಾಗಿ ಬಿಸಿಸಿಐ(BCCI)ನೇಮಿಸಿದೆ. ಹೈದರಾಬಾದ್ ತಂಡವು ಆಶ್ಚರ್ಯಕರವಾಗಿ ರಶೀದ್ ಖಾನ್ ಅವರನ್ನು ಬಿಟ್ಟುಕೊಟ್ಟಿದೆ. ಮುಂಬೈ ಇಂಡಿಯನ್ಸ್ ನ ಮಾಜಿ ಆಟಗಾರರಾಗಿರುವ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹರಾಜಿನ ಸಮಯದಲ್ಲಿ ಬಿಡ್ಡರ್‌ಗಳನ್ನು ಹೆಚ್ಚಿನ ಮೊತ್ತಕ್ಕೆ ಒತ್ತಾಯಿಸಲಿದ್ದಾರೆ. ಹೀಗಾಗಿ ಯಾವ ತಂಡಕ್ಕೆ ಇವರು ಸೇರ್ಪಡೆಯಾಗುತ್ತಾರೆಂಬುದು ತೀವ್ರ ಕುತೂಹಲ ಮೂಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.