ನವದೆಹಲಿ: ಕೊರೊನಾ ವೈರಸ್‌(Corona Virus)ನ ಹೊಸ ರೂಪಾಂತರವು ಜಗತ್ತಿನಲ್ಲಿ ಕಾಣಿಸಿಕೊಂಡಾಗಿನಿಂದ ಎಲ್ಲೆಡೆ ಭಯದ ವಾತಾವರಣವಿದೆ. ಪ್ರಪಂಚದಾದ್ಯಂತ ಜನರು ಈಗಾಗಲೇ ಕೊರೊನಾ 2 ಅಲೆಗಳಿಂದ ಸಾಕಷ್ಟು ಬಳಲಿದ್ದಾರೆ. ಇದೀಗ 3ನೇ ಅಲೆಯ ಭೀತಿಯಿಂದ ಮತ್ತೊಮ್ಮೆ ದೊಡ್ಡ ಅಪಾಯ ಎದುರಾಗಿದೆ. ಈ ಮಾರಣಾಂತಿಕ ವೈರಸ್‌ನ ಕರಿನೆರಳು ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊರೊನಾದ ಹೊಸ ರೂಪಾಂತರದಿಂದ ಐಸಿಸಿ(International Cricket Council) ಇತ್ತೀಚೆಗೆ ದೊಡ್ಡ ಪಂದ್ಯಾವಳಿಯನ್ನೇ ನಿಷೇಧಿಸಿದೆ.


COMMERCIAL BREAK
SCROLL TO CONTINUE READING

ಈ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ 


ಆಫ್ರಿಕನ್ ಪ್ರದೇಶದಲ್ಲಿ ಕೋವಿಡ್ -19ರ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ನಂತರ ಹರಾರೆ(Harare)ಯಲ್ಲಿ ಮುಂದಿನ ವರ್ಷದ ಮಹಿಳಾ ಏಕದಿನ ವಿಶ್ವಕಪ್‌(ICC Women's World Cup 2022)ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಶನಿವಾರ ರದ್ದುಗೊಳಿಸಿದೆ. ನಾಳೆ(ನ.29) ನಡೆಯಬೇಕಿದ್ದ ಐರ್ಲೆಂಡ್ Vs ಶ್ರೀಲಂಕಾ ಮತ್ತು ಜಿಂಬಾಬ್ವೆ Vs ಬಾಂಗ್ಲಾದೇಶ, ಪಾಕಿಸ್ತಾನ Vs ಅಮೆರಿಕ ಮತ್ತು ನೆದರ್ ಲ್ಯಾಂಡ್ Vs ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳನ್ನು ರದ್ದುಪಡಿಸಲಾಗಿದೆ.


ಇದನ್ನೂ ಓದಿ: IPL 2022 Mega Auction : ಈ ಐದು ಆಟಗಾರರಲ್ಲಿ ಯಾರಾಗಬಹುದು Ahmedabad ತಂಡದ ನಾಯಕ 


Women's World Cup)ನಲ್ಲಿ ಭಾಗವಹಿಸುವ ತಂಡಗಳು ಹೇಗೆ ಮತ್ತೆ ತಮ್ಮ ದೇಶಗಳಿಗೆ ಮರಳುತ್ತವೆ ಎಂಬುವ ಆತಂಕ ಎದುರಾಗಿತ್ತು. ಒಂದು ವೇಳೆ ವೈರಸ್ ತೀವ್ರ ಸ್ವರೂಪ ಪಡೆದುಕೊಂಡರೆ ವಿವಿಧ ದೇಶದ ಆಟಗಾರ್ತಿಯರಿಗೆ ತೊಂದರೆ ತಪ್ಪಿದ್ದಲ್ಲ. ಹೀಗಾಗಿ ಸದ್ಯಕ್ಕೆ ಪಂದ್ಯಾವಳಿಯನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ಹೇಳಿದೆ.   


‘ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಅರ್ಹತಾ ಪಂದ್ಯಗಳನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಈಗ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಗೆ ಅರ್ಹತೆ ಪಡೆಯಲಿವೆ. ಸದ್ಯ ರದ್ದುಪಡಿಸಿರುವ ಅರ್ಹತಾ ಸುತ್ತಿನ ಪಂದ್ಯಗಳನ್ನು ಕೊರೊನಾ ಅಬ್ಬರ ಕಡಿಮೆಯಾದ ಬಳಿಕ ನಡೆಸುವ ಯೋಚನೆಯಲ್ಲಿದ್ದೇವೆ’ ಅಂತಾ ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: IPL 2022 : ಉತ್ತಮ ಪ್ರದರ್ಶನ ನೀಡಿದರೂ ಈ ಆಟಗಾರರನ್ನು ಉಳಿಸಿಕೊಳ್ಳದ ಫ್ರಾಂಚೈಸಿಗಳು    


ಕೊರೊನಾ ಅವಾಂತರ ಸೃಷ್ಟಿಸಿದೆ


ಐಸಿಸಿ ಟೂರ್ನಮೆಂಟ್ ಮುಖ್ಯಸ್ಥ ಕ್ರಿಸ್ ಟೆಟ್ಲಿ ಮಾತನಾಡಿ, ‘ಈ ಪಂದ್ಯಾವಳಿಯ ಅರ್ಹತಾ ಪಂದ್ಯಗಳನ್ನು ರದ್ದುಗೊಳಿಸಿದ್ದಕ್ಕಾಗಿ ನಾವು ತೀವ್ರ ನಿರಾಶೆಗೊಂಡಿದ್ದೇವೆ. ವೈರಸ್ ಕಾರಣ ಪ್ರಯಾಣಕ್ಕೆ ನಿರ್ಬಂಧ ಹೇರಿರುವ ಕಾರಣ ಇದು ಅನಿವಾರ್ಯವಾಗಿತ್ತು. ಆಟಕ್ಕಿಂತಲೂ ನಮಗೆ ಆಟಗಾರರ ಸುರಕ್ಷತೆ ಮುಖ್ಯ. ಹೀಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ’ ಅಂತಾ ಹೇಳಿದ್ದಾರೆ. 2022ರ ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಬೇಕಿರುವ ಮಹಿಳಾ ವಿಶ್ವಕಪ್‌ಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದಿರುವ ತಂಡಗಳಾಗಿವೆ. ಈ ಬಾರಿ 8ರ ಬದಲು 10 ತಂಡಗಳು ಐಸಿಸಿ ವಿಶ್ವಕಪ್ ಚಾಂಪಿಯನ್‌ಶಿಪ್‌ ನಲ್ಲಿ ಪಾಲ್ಗೊಳ್ಳುತ್ತಿವೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.