ನವದೆಹಲಿ : ಐಪಿಎಲ್ 2022ರ (IPL 2022) ಟೂರ್ನಿ ಬಹಳ ರೋಚಕವಾಗಿರಲಿದೆ. ಯಾಕೆಂದರೆ ಮುಂದಿನ ವರ್ಷ ಅಹಮದಾಬಾದ್ (Ahmedabad) ಮತ್ತು ಲಕ್ನೋ (Lucknow) ಎರಡು ಹೊಸ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದೆ. ಈ 2 ಫ್ರಾಂಚೈಸಿಗಳು ಕೋರ್ ತಂಡವನ್ನು ಸಿದ್ಧಪಡಿಸಬೇಕು, ಅದಕ್ಕಾಗಿ ಮೊದಲು ತಂಡಕ್ಕೆ ನಾಯಕನ ಆಯ್ಕೆಯಾಗಬೇಕು.
ಹೊಸ ತಂಡಗಳನ್ನುಖರೀದಿಸಿದ ಕಂಪನಿ :
ಆರ್ಪಿ-ಎಸ್ಜಿ ಗ್ರೂಪ್ ಲಕ್ನೋ ಫ್ರಾಂಚೈಸಿಯನ್ನು 7090 ಕೋಟಿ ರೂಪಾಯಿಗೆ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ (CVC Capital) ಅಹಮದಾಬಾದ್ ತಂಡದ ಮಾಲೀಕತ್ವವನ್ನು 5166 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.
ಇದನ್ನೂ ಓದಿ : IND Vs SA Series: ರದ್ದಾಗಲಿದೆಯೇ Team India ದ.ಆಫ್ರಿಕಾ ಪ್ರವಾಸ? ತಂಡದ ಟೆನ್ಶನ್ ಹೆಚ್ಚಿಸಿದ ಕಾರಣ ಇಲ್ಲಿದೆ
ಈ 5 ಆಟಗಾರರು ಅಹಮದಾಬಾದ್ನ ನಾಯಕರಾಗಬಹುದು :
1. ಕೆಎಲ್ ರಾಹುಲ್ :
ಕೆಎಲ್ ರಾಹುಲ್ (KL Rahul) ಮುಂದಿನ ಸೀಜನ್ ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತೊರೆಯುವ ಬಗ್ಗೆ ಯೋಚಿಸುತಿದ್ದು, ಬೇರೆ ತಂಡವನ್ನು ಸೇರಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಅಹಮದಾಬಾದ್ ಫ್ರಾಂಚೈಸಿ ಅವರ ಮೇಲೆ ಬಿಡ್ ಮಾಡಬಹುದು. ರಾಹುಲ್ ವೈಯಕ್ತಿಕ ದಾಖಲೆ ಅತ್ಯುತ್ತಮವಾಗಿದ್ದು, ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೂಡಾ ನಿಭಾಯಿಸಬಲ್ಲರು. ಆದರೆ, ಲಕ್ನೋ ತಂಡವೂ ಇವರ ಮೇಲೆಯೇ ಕಣ್ಣಿಟ್ಟಿದೆ.
2. ಡೇವಿಡ್ ವಾರ್ನರ್ :
ಸನ್ರೈಸರ್ಸ್ ಹೈದರಾಬಾದ್ ನಿಂದ (Sunrisers Hyderabad) ಡೇವಿಡ್ ವಾರ್ನರ್ ನಿರ್ಗಮನ ನಿಶ್ಚಿತವಾಗಿದೆ. ಯಾಕೆಂದರೆ ಅವರು ಈಗಾಗಲೇ ತಾನು ಆಕ್ಶನ್ ಪೂಲ್ ನಲ್ಲಿರುವುದಾಗಿ ಹೇಳಿದ್ದಾರೆ. ಹೀಗಾಗಿ ಅಹಮದಾಬಾದ್ ತಂಡ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲು ಯೋಚಿಸಬಹುದು. ವಾರ್ನರ್ (David Warner) ಇದುವರೆಗೆ ಐಪಿಎಲ್ನಲ್ಲಿ 41.59 ಸರಾಸರಿಯಲ್ಲಿ 5449 ರನ್ ಗಳಿಸಿದ್ದಾರೆ. 4 ಶತಕಗಳು ಮತ್ತು 50 ಅರ್ಧ ಶತಕಗಳನ್ನು ಒಳಗೊಂಡಂತೆ ಸುಮಾರು 140 ಸ್ಟ್ರೈಕ್ ರೇಟ್ಗಳನ್ನು ಗಳಿಸಿದ್ದಾರೆ.
3. ಶ್ರೇಯಸ್ ಅಯ್ಯರ್ :
ಶ್ರೇಯಸ್ ಅಯ್ಯರ್ (Shreyas Iyer) , ಮುಂದಿನ ವರ್ಷ ತಂಡವನ್ನು ಮುನ್ನಡೆಸುವ ಇಚ್ಛೆಯಿಂದ ಬೇರೆ ತಂಡದಲ್ಲಿ ಆಡಬಹುದು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸ್ ರಿಷಬ್ ಪಂತ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ. ಹೀಗಿರುವಾಗ, ಅಯ್ಯರ್ ಹರಾಜು ಪೂಲ್ಗೆ (Auction Pool) ಬಂದರೆ, ಅಹಮದಾಬಾದ್ ತಂಡವು ಅವರ ಮೇಲೆ ಬಿಡ್ ಮಾಡಬಹುದು. ಅಯ್ಯರ್ ಅವರು 2020 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ದೆಹಲಿ ತಂಡ ಐಪಿಎಲ್ ಫೈನಲ್ (IPL Final) ತಲುಪಿತ್ತು.
ಇದನ್ನೂ ಓದಿ : Ind vs NZ: ಶ್ರೇಯಸ್ ಅಯ್ಯರ್ ತಂದೆ 4 ವರ್ಷಗಳಿಂದ ವಾಟ್ಸಾಪ್ ಡಿಪಿ ಬದಲಾಯಿಸಿಲ್ಲ, ಕಾರಣ ತಿಳಿದರೆ ಅಚ್ಚರಿ ಆಗುತ್ತೆ
4. ಆರನ್ ಫಿಂಚ್ :
ಆರನ್ ಫಿಂಚ್ (Aaron Finch) ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದು, ಫಿಂಚ್ ಅವರ ಅನುಭವವನ್ನು ನೋಡಿದರೆ, ಅಹಮದಾಬಾದ್ (Ahmedabad) ಫ್ರಾಂಚೈಸ್ ಖಂಡಿತವಾಗಿಯೂ ಅವರ ಮೇಲೆ ಕಣ್ಣಿಟ್ಟಿದೆ. ಅವರ ನಾಯಕತ್ವ ಕೌಶಲ್ಯದಿಂದ ತಂಡಕ್ಕೆ ಪ್ರಯೋಜನವಾಗಬಹುದು. ಫಿಂಚ್ 2020 ರಲ್ಲಿ RCB ತಂಡದ ಭಾಗವಾಗಿದ್ದರು. ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ನಲ್ಲಿ (ICC T20 World Cup) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಪರಿಣಾಮವನ್ನು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕಾಣಬಹುದು.
5. ಹಾರ್ದಿಕ್ ಪಾಂಡ್ಯ :
ಮುಂಬೈ ಇಂಡಿಯನ್ಸ್ನಿಂದ (Mumbai Indians) ಬೇರ್ಪಟ್ಟ ನಂತರ ಹಾರ್ದಿಕ್ ಪಾಂಡ್ಯ (Hardik Pandya) ಅಹಮದಾಬಾದ್ ತಂಡವನ್ನು ಸೇರಿಕೊಳ್ಳಬಹುದು. ಹಾರ್ದಿಕ್ ಗುಜರಾತ್ ನಗರದ ವಡೋದರಾದಿಂದ ಬಂದವರು. ಹಾಗಾಗಿ, ಅಹಮದಾಬಾದ್ ಫ್ರಾಂಚೈಸ್ ಅವರನ್ನು ಸೇರಿಸುವ ಮೂಲಕ ತನ್ನ ಅಭಿಮಾನಿಗಳನ್ನು ಹೆಚ್ಚಿಸುವ ಬಗ್ಗೆಯೂ ಯೋಚಿಸಬಹುದು. ಹಾರ್ದಿಕ್ ಐಪಿಎಲ್ ಇತಿಹಾಸದಲ್ಲಿ 92 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.33 ಸರಾಸರಿ ಮತ್ತು 153.91 ಸ್ಟ್ರೈಕ್ ರೇಟ್ನಲ್ಲಿ 1476 ರನ್ ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 91 ಆಗಿತ್ತು. ಬೌಲಿಂಗ್ ಬಗ್ಗೆ ಹೇಳುವುದಾದರೆ, 31.26 ರ ಸರಾಸರಿಯಲ್ಲಿ 9.06 ರ ಎಕಾನಮಿ ದರದಲ್ಲಿ 42 ವಿಕೆಟ್ ಗಳನ್ನು ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.