IND Vs SA Series: ರದ್ದಾಗಲಿದೆಯೇ Team India ದ.ಆಫ್ರಿಕಾ ಪ್ರವಾಸ? ತಂಡದ ಟೆನ್ಶನ್ ಹೆಚ್ಚಿಸಿದ ಕಾರಣ ಇಲ್ಲಿದೆ

India Tour Of South Africa - ಭಾರತೀಯ ಕ್ರಿಕೆಟ್ ತಂಡ (Team India) ಡಿಸೆಂಬರ್ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೈಗೊಳ್ಳಲಿದೆ. ಅಲ್ಲಿ ತಂಡ 3 ಟೆಸ್ಟ್, 3 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ, ಆದರೆ ಕೊರೊನಾ ವೈರಸ್‌ನ ಹೊಸ ರೂಪಾಂತರದಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ.

Written by - Nitin Tabib | Last Updated : Nov 26, 2021, 09:09 PM IST
  • ಕ್ರಿಕೆಟ್ ಜಗತ್ತಿನಲ್ಲಿ ಮತ್ತೆ ಹೆಚ್ಚಾದ ಕೋಲಾಹಲ.
  • ಕರೋನಾದ ಹೊಸ ರೂಪಾಂತರಿಯಿಂದ ಹೆಚ್ಚಾದ ಟೆನ್ಶನ್
  • ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಾ?
IND Vs SA Series: ರದ್ದಾಗಲಿದೆಯೇ Team India ದ.ಆಫ್ರಿಕಾ ಪ್ರವಾಸ? ತಂಡದ ಟೆನ್ಶನ್ ಹೆಚ್ಚಿಸಿದ  ಕಾರಣ ಇಲ್ಲಿದೆ title=
India Tour Of South Africa (File Photo)

ಕಾನ್ಪುರ: India Tour Of South Africa Schedule - ಯೂರೋಪ್ ಮತ್ತು ಆಫ್ರಿಕನ್ ದೇಶಗಳಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರದಿಂದಾಗಿ, ಮುಂದಿನ ತಿಂಗಳು ಟೀಮ್ ಇಂಡಿಯಾದ (India Cricket Team) ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕಾರ್ಮೋಡ ಕವಿದಂತಾಗಿದ್ದು, ಮುಂಬರುವ ದಿನಗಳಲ್ಲಿ ಆಟಗಾರರ ಕ್ವಾರಂಟೈನ್ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.

ಡಿಸೆಂಬರ್‌ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ
ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಸುಮಾರು 7 ವಾರಗಳ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟೆಸ್ಟ್, 3 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯಗಳು ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕನಿಷ್ಠ ಎರಡು ಟೆಸ್ಟ್ ಸರಣಿಯ ಮೈದಾನಗಳಾದ ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾ (ಸೆಂಚುರಿಯನ್‌ಗೆ ಹತ್ತಿರ) ಈ ಹೊಸ ರೂಪಾಂತರಕ್ಕೆ ಗುರಿಯಾಗಬಹುದು ಎನ್ನಲಾಗುತ್ತಿದೆ. 

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗಲಿದೆಯೇ?
ಈ ಕುರಿತು ಸುದ್ದಿ ಸಂಸ್ಥೆ PTIಗೆ ಮಾಹಿತಿ ನೀಡಿರುವ ಸಿಸಿಐನ ಹಿರಿಯ ಅಧಿಕಾರಿಯೊಬ್ಬರು "ನಾವು ಕ್ರಿಕೆಟ್ ದಕ್ಷಿಣ ಆಫ್ರಿಕಾದಿಂದ (CSA) ಅಲ್ಲಿನ ಪರಿಸ್ಥಿತಿಯ ಕುರಿತು  ತಿಳಿದುಕೊಳ್ಳುವವರೆಗೆ, ನಮ್ಮ ಮುಂದಿನ ಕ್ರಮದ ಬಗ್ಗೆ ನಮಗೆ ಹೇಳಲು ಸಾಧ್ಯವಾಗುವುದಿಲ್ಲ" ಎಂದಿದ್ದಾರೆ.  ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಗಿದ ನಂತರ ಭಾರತ ತಂಡವು ಡಿಸೆಂಬರ್ 8 ಅಥವಾ 9 ರಂದು ದಕ್ಷಿಣ ಆಫ್ರಿಕಾ ತೆರಳಬೇಕಿದೆ. 
 
ಹೊಸ ಕರೋನಾ ರೂಪಾಂತರದಿಂದ ಅಪಾಯ
ಬಿಸಿಸಿಐ (BCCI) ಸದ್ಯಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಏನನ್ನೂ ಹೇಳಲು ಬಯಸುತ್ತಿಲ್ಲ. ಆದರೆ ಮುಂದಿನ ಕೆಲವು ದಿನಗಳಲ್ಲಿ, ಇಡೀ ವಿಶ್ವದ ಆತಂಕಕ್ಕೆ ಕಾರಣವಾದ ಹೊಸ ರೂಪಾಂತರಿ  B.1.1.529 ಕುರಿತು CSA ಜೊತೆಗೆ ಮಂಡಳಿ ಮಾತುಕತೆ ನಡೆಸುವ ನಿರೀಕ್ಷೆ ಇದೆ

ಆಟಗಾರರನ್ನು ಚಾರ್ಟರ್ಡ್ ಪ್ಲೇನ್ ಮೂಲಕ ಕಳುಹಿಸಲಾಗುತ್ತದೆಯೇ?
ಆಟಗಾರರನ್ನು ಮುಂಬೈನಿಂದ ಜೋಹಾನ್ಸ್‌ಬರ್ಗ್ ಚಾರ್ಟರ್ಡ್ ವಿಮಾನಕ್ಕೆ ಕಳುಹಿಸಲಾದರೂ ಕೂಡ ಬದಲಾದ ಪರಿಸ್ಥಿತಿಯಲ್ಲಿ ಅವರು 3 ಅಥವಾ 4 ದಿನಗಳ ಕಾಲ ಕಟ್ಟುನಿಟ್ಟಾದ ಕ್ವಾರಂಟೈನ್‌ನಲ್ಲಿ ಇರಬೇಕಾಗಬಹುದು ಎಂದು ಬಿಸಿಸಿಐ ಅಧಿಕಾರಿ ಸೂಚಿಸಿದ್ದಾರೆ.

ಕಟ್ಟುನಿಟ್ಟಾದ ಕ್ವಾರಂಟೈನ್ ಮೂಲಕ ಹೋಗಬೇಕಾಗುತ್ತದೆ
ಈ ಹಿಂದೆ ಕಟ್ಟುನಿಟ್ಟಾದ ಕ್ವಾರಂಟೈನ್‌ಗೆ ಯಾವುದೇ ಅವಕಾಶವಿರಲಿಲ್ಲ, ಆದರೆ ಆಟಗಾರರು ಬಯೋ ಬಬಲ್‌ನಲ್ಲಿ ಉಳಿಯುತ್ತಾರೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದರು. ಈಗ ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಯುರೋಪಿಯನ್ ಒಕ್ಕೂಟವು ತಾತ್ಕಾಲಿಕವಾಗಿ ಅಲ್ಲಿನ ವಿಮಾನಗಳನ್ನು ರದ್ದುಗೊಳಿಸಿದೆ, ನಾವು ಕೂಡ ಈ ಅಂಶಗಳನ್ನು ಪರಿಶೀಲಿಸಬೇಕಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ಎ ತಂಡ
ಭಾರತ ಎ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಭಾರತ ಎ ತಂಡದ ಜೊತೆಗೆ ಬ್ಲೋಮ್‌ಫಾಂಟೈನ್‌ನಲ್ಲಿರುವ ಆಡಳಿತ ಅಧಿಕಾರಿಯನ್ನು ಪಿಟಿಐ ಸಂಪರ್ಕಿಸಿದೆ. ಅವರು ಹೇಳಿರುವ ಪ್ರಕಾರ 'ನಾವು ಇಲ್ಲಿಗೆ ತಲುಪಿದಾಗ ನಾವು ಕಟ್ಟುನಿಟ್ಟಾದ ಕ್ವಾರಂಟೈನ್ ಮೂಲಕ ಹೋಗಬೇಕಾಗಿಲ್ಲ ಏಕೆಂದರೆ ನಾವು ಚಾರ್ಟರ್ಡ್ ವಿಮಾನದಲ್ಲಿ ಬಂದಿದ್ದೇವೆ ಮತ್ತು ಜೈವಿಕ ಬಬಲ್‌ನಲ್ಲಿ ವಾಸಿಸುತ್ತಿದ್ದೇವೆ. ಹೊಸ ಪ್ರಕರಣಗಳು ಕಂಡುಬಂದ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾದ ವೈದ್ಯಕೀಯ ತಂಡವು ನಮ್ಮ ಪ್ರತಿನಿಧಿಗಳೊಂದಿಗೆ ಇಲ್ಲಿ ಸಭೆ ನಡೆಸಿದೆ" ಎಂದು ಹೇಳಿದ್ದಾರೆ. 

'ಚಿಂತೆ ಪಡುವ ಅಗತ್ಯವಿಲ್ಲ'
ದೂರವಾಣಿ ಮೂಲಕ ಮಾಹಿತಿ ನೀಡಿರುವ ಅಧಿಕಾರಿಗಳು 'ಪ್ರಸ್ತುತ ನಾವು ಚಿಂತಿಸಬೇಕಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ ಏಕೆಂದರೆ ಪ್ರಕರಣಗಳು ಕಂಡುಬಂದಿರುವ ಪ್ರದೇಶವು ಬ್ಲೋಮ್‌ಫಾಂಟೈನ್‌ನಿಂದ ದೂರದಲ್ಲಿದೆ, ಅಲ್ಲಿ ನಾವು ನಮ್ಮ ಮುಂದಿನ ಎರಡು ಪಂದ್ಯಗಳನ್ನು ಸಹ ಆಡಬೇಕಾಗಿದೆ' ಎಂದು ಅವರು ಶುಕ್ರವಾರ ಹೇಳಿದ್ದರು. ಭಾರತ ಎ ತಂಡಕ್ಕೆ ಬಿಸಿಸಿಐನಿಂದ ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ' ಎಬ್ದುದ್ದಾರೆ, 

ಭಾರತ vs ದಕ್ಷಿಣ ಆಫ್ರಿಕಾ 2021-22 ಸಂಪೂರ್ಣ ವೇಳಾಪಟ್ಟಿ
1 ನೇ ಟೆಸ್ಟ್ - ವಾಂಡರರ್ಸ್, ಜೋಹಾನ್ಸ್‌ಬರ್ಗ್ - ಡಿಸೆಂಬರ್ 17-21 ರವರೆಗೆ
2 ನೇ ಟೆಸ್ಟ್ - ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್ - 26-30 ಡಿಸೆಂಬರ್ ವರೆಗೆ 
3 ನೇ ಟೆಸ್ಟ್ - ವಾಂಡರರ್ಸ್, ಜೋಹಾನ್ಸ್‌ಬರ್ಗ್ - 3 ಜನವರಿಯಿಂದ 7 ಜನವರಿವರೆಗೆ

ಇದನ್ನೂ ಓದಿ-Ind vs NZ: ಶ್ರೇಯಸ್ ಅಯ್ಯರ್ ತಂದೆ 4 ವರ್ಷಗಳಿಂದ ವಾಟ್ಸಾಪ್ ಡಿಪಿ ಬದಲಾಯಿಸಿಲ್ಲ, ಕಾರಣ ತಿಳಿದರೆ ಅಚ್ಚರಿ ಆಗುತ್ತೆ

1 ನೇ ODI - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 11 ಜನವರಿ
2ನೇ ODI - ನ್ಯೂಲ್ಯಾಂಡ್ಸ್, ಕೇಪ್ ಟೌನ್ - 14 ಜನವರಿ
3ನೇ ODI - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 16

ಇದನ್ನೂ ಓದಿ-IND vs NZ : ಮೊದಲ ಟೆಸ್ಟ್‌ ಮ್ಯಾಚ್ ನಲ್ಲಿ ಶಕ್ತಿ ಪ್ರದರ್ಶಿಸಿದ ಅಯ್ಯರ್-ಜಡೇಜಾ!

1ನೇ ಟಿ20 - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 19
2ನೇ ಟಿ20 - ನ್ಯೂಲ್ಯಾಂಡ್ಸ್, ಕೇಪ್ ಟೌನ್ - ಜನವರಿ 21
3 ನೇ T20 - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 23 ಜನವರಿ
4ನೇ ಟಿ20 - ಬೋಲ್ಯಾಂಡ್ ಪಾರ್ಕ್, ಪಾರ್ಲ್ - 26 ಜನವರಿ

ಇದನ್ನೂ ಓದಿ-ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಲ್ ಪತ್ನಿ, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News