ನವದೆಹಲಿ : ಐಪಿಎಲ್ ಮೆಗಾ ಹರಾಜಿನ (IPL Mega Auction) ಕುತೂಹಲ ಹೆಚ್ಚುತ್ತಿದೆ. ನವೆಂಬರ್ 30 ರೊಳಗೆ, ಐಪಿಎಲ್ನ 8 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ (BCCI) ಸಲ್ಲಿಸಬೇಕು. ಕೆಲವು ತಂಡಗಳು ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅನೇಕ ಉತ್ತಮ ಆಟಗಾರರ ಹೆಸರಿಲ್ಲ ಎನ್ನಲಾಗಿದೆ. ಈ ಆಟಗಾರರು ಅನೇಕ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಈ ಆಟಗಾರರನ್ನು ರಿಟೈನ್ ಮಾಡಿಕೊಂಡಿಲ್ಲ :
ಮೂಲಗಳ ಪ್ರಕಾರ, ಸಿಎಸ್ಕೆ (CSK) ತಂಡದ ಸುರೇಶ್ ರೈನಾ, ಮುಂಬೈ ಇಂಡಿಯನ್ಸ್ (Mumbai Indians) ತಂಡ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ (KL Rahul) ಅವರನ್ನು ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿಲ್ಲ. ಆದರೆ, ಈ ಆಟಗಾರರು ತಮ್ಮ ತಂಡಕ್ಕಾಗಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಈ ಮೂವರೂ ಅದ್ಬುತ ಆಟಗಾರರು ಮಾತ್ರವಲ್ ಉತ್ತಮ ಪ್ರದರ್ಶನವನ್ನು ಕೂಡಾ ನೀಡಿದ್ದಾರೆ.
ಇದನ್ನೂ ಓದಿ : IPL 2022 Mega Auction : ಈ ಐದು ಆಟಗಾರರಲ್ಲಿ ಯಾರಾಗಬಹುದು Ahmedabad ತಂಡದ ನಾಯಕ
1. ಸುರೇಶ್ ರೈನಾ :
ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ (Suresh Raina) ಅವರನ್ನು ಸಿಎಸ್ ಕೆ ತಂಡ ಉಳಿಸಿಕೊಳ್ಳುತ್ತಿಲ್ಲ. ರೈನಾ ಐಪಿಎಲ್ (IPL) ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಭಾಗವಾಗಿದ್ದರು. ರೈನಾ ತಮ್ಮ ಬಲಿಷ್ಠ ಬ್ಯಾಟಿಂಗ್ನಿಂದ ಅನೇಕ ಬಾರಿ ಸಿಎಸ್ಕೆ ಗೆಲುವಿಗೆ ಕಾರಣರಾಗಿದ್ದಾರೆ. ಇವರು ಐಪಿಎಲ್ನಲ್ಲಿ (IPL) ಆಡಿದ ಒಟ್ಟು 205 ಪಂದ್ಯಗಳಲ್ಲಿ 5528 ರನ್ ಗಳಿಸಿದ್ದಾರೆ. ಇದರಲ್ಲಿ ಬಿರುಸಿನ ಶತಕವೂ ಸೇರಿದೆ. ವಿರಾಟ್ ಕೊಹ್ಲಿ (Virat Kohli) ನಂತರ ಸುರೇಶ್ ರೈನಾ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರೈನಾ ಉತ್ತಮ ಬ್ಯಾಟ್ಸ್ ಮೆನ್ ಜೊತೆಗೆ ರೈನಾ ಅತ್ಯುತ್ತಮ ಫೀಲ್ಡರ್ ಕೂಡಾ ಹೌದು.
2. ಹಾರ್ದಿಕ್ ಪಾಂಡ್ಯ :
ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ ಜೊತೆ ಸುದೀರ್ಘ ಒಡನಾಟ ಹೊಂದಿದ್ದಾರೆ. ಹಾರ್ದಿಕ್ 2015 ರಿಂದ ಮುಂಬೈ ಪರ ಆಡುತ್ತಿದ್ದಾರೆ. ಹಾರ್ದಿಕ್ ತನ್ನ ಬಿರುಸಿನ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ 92 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 27.33 ಸರಾಸರಿಯಲ್ಲಿ 1476 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕ ಕೂಡಾ ಸೇರಿದೆ. ಬೌಲಿಂಗ್ ಬಗ್ಗೆ ಹೇಳುವುದಾದರೆ, 31.26 ರ ಸರಾಸರಿಯಲ್ಲಿ ಮತ್ತು 9.06 ರ ಎಕಾನಮಿ ದರದಲ್ಲಿ 42 ವಿಕೆಟ್ ಗಳನ್ನೂ ಪಡೆದಿದ್ದಾರೆ.
ಇದನ್ನೂ ಓದಿ : IPL 2022: ಆರ್ಪಿಎಸ್ ಗ್ರೂಪ್ ಒಡೆತನದ ಲಕ್ನೋ ಫ್ರಾಂಚೈಸಿಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್?
3. ಕೆಎಲ್ ರಾಹುಲ್ :
ಭಾರತದ ಸ್ಟಾರ್ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (KL Rahul) ಪಂಜಾಬ್ ಕಿಂಗ್ಸ್ ಪರ ಸಾಕಷ್ಟು ರನ್ ಗಳಿಸಿದ್ದಾರೆ. ರಾಹುಲ್ ತನ್ನ ಫಾರ್ಮ್ನಲ್ಲಿರುವಾಗ, ಎದುರಾಳಿಯ ಬೆವರಿಳಿಸಿ ಬಿಡುತ್ತಾರೆ. ಪಂಜಾಬ್ನ (PUnjab Kings) ಕಳೆದ ನಾಲ್ಕು ಸೀಸನ್ ನಲ್ಲಿ ರಾಹುಲ್ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೂ ಪಂಜಾಬ್ ಕಿಂಗ್ಸ್ ಅಂತಹ ಸಮರ್ಥ ಬ್ಯಾಟ್ಸ್ಮನ್ ಮತ್ತು ನಾಯಕನನ್ನು ಉಳಿಸಿಕೊಂಡಿಲ್ಲ. ಕೆಎಲ್ ರಾಹುಲ್ ಐಪಿಎಲ್ನ 94 ಪಂದ್ಯಗಳಲ್ಲಿ 3273 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.