ಫೈವ್ ಸ್ಟಾರ್ ದಬಾಂಗ್ ಡೆಲ್ಲಿಗೆ ಸತತ ಐದನೇ ಗೆಲುವು: ಪಾಟ್ನಾ ವಿರುದ್ಧ ಗೆದ್ದ ತಲೈವಾಸ್
ನಾಯಕ ನವೀನ್ ಎಕ್ಸ್‌ಪ್ರೆಸ್ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಕೆಸಿ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 17-12 ಅಂತರದಲ್ಲಿ ಮುನ್ನಡೆಯಿತು. ಡೆಲ್ಲಿ ಪರ ಟ್ಯಾಕಲ್‌ನಲ್ಲಿ ವಿಜಯ ಕುಮಾರ್ 2 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ತಂಡಕ್ಕೆ ಮುನ್ನಡೆಗೆ ಅವಕಾಶ ಕಲ್ಪಿಸಿದರು.
ಬೆಂಗಳೂರು: ಪ್ರಸಕ್ತ ಋತುವಿನ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿಯೇ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 38-36 ಅಂತರದಲ್ಲಿ ಜಯ ಗಳಿಸಿದ ದಬಾಂಗ್ ಡೆಲ್ಲಿ ಕೆಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ನಾಯಕ ನವೀನ್ ಕುಮಾರ್ 15 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಕೊನೆಯ 40 ಸೆಕೆಂಡುಗಳು ಬಾಕಿ ಇರುವಾಗ ಪಂದ್ಯ 36-36 ರಲ್ಲಿ ಸಮಬಲಗೊಂಡಿತ್ತು. ನವೀನ್ ಕುಮಾರ್ ಕೊನೆಯ ರೈಡ್‌ನಲ್ಲಿ 2 ಅಂಕಗಳನ್ನು ಗಳಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು.
ಇದನ್ನೂ ಓದಿ: Virat Kohli: ವಿರಾಟ್ ‘ರಾಕೆಟ್ ಥ್ರೋ’ ಅಬ್ಬರಕ್ಕೆ ಕಾಂಗರೂ ಪಡೆ ಕಂಗಾಲು: ವ್ಹಾವ್! ಅನಿಸೋ ಈ ವಿಡಿಯೋ ನೋಡಿ
ನಾಯಕ ನವೀನ್ ಎಕ್ಸ್‌ಪ್ರೆಸ್ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಕೆಸಿ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 17-12 ಅಂತರದಲ್ಲಿ ಮುನ್ನಡೆಯಿತು. ಡೆಲ್ಲಿ ಪರ ಟ್ಯಾಕಲ್‌ನಲ್ಲಿ ವಿಜಯ ಕುಮಾರ್ 2 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ತಂಡಕ್ಕೆ ಮುನ್ನಡೆಗೆ ಅವಕಾಶ ಕಲ್ಪಿಸಿದರು. ರೈಡಿಂಗ್‌ನಲ್ಲಿ ಮಂಜಿತ್ ಹಾಗೂ ಅಶು ಮಲಿಕ್ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಹರಿಯಾಣ ಸ್ಟೀಲರ್ಸ್ ಪರ ರೈಡಿಂಗ್‌ನಲ್ಲಿ ಮಂಜೀತ್ 6 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ಸಫಲರಾದರು.
ಜಯದ ಖಾತೆ ತೆರೆದ ತಲೈವಾಸ್:
ಅತ್ಯಂತ ರೋಚಕ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 33-32 ಅಂತರದಲ್ಲಿ ಜಯ ಗಳಿಸಿ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯಲ್ಲಿ ಜಯದ ಖಾತೆ ತೆರೆದಿದೆ. ಪ್ರಥಮಾರ್ಧದಲ್ಲಿ 2 ಅಂಕಗಳಿಂದ ಮುನ್ನಡೆ ಕಂಡಿದ್ದ ಪಾಟ್ನಾ ಪೈರೇಟ್ಸ್ ದ್ವಿತಿಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ತಮಿಳು ತಲೈವಾಸ್ ಡಿಫೆಂಡರ್‌ಗಳು ಜಯದ ರೂವಾರಿ ಎನಿಸಿದರು. ಸಾಹಿಲ್ ಗೂಲಿಯಾ (3), ಸಾಗರ್ (2) ಹಾಗೂ ಹಿಮಾಂಶು (2) ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿದರು. ರೈಡಿಂಗ್‌ನಲ್ಲಿ ನರೇಂದರ್ 9 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಪಾಟ್ನಾ ಪೈರೇಟ್ಸ್ ಪರ ರೋಹಿಲ್ ಗುಲಿಯಾ (11) ಸೂಪರ್ ಟೆನ್ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಸಚಿನ್ 6 ರೈಡಿಂಗ್ ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. 5 ಪಂದ್ಯಗಳನ್ನಾಡಿದ ಪಾಟ್ನಾ ಪೈರೇಟ್ಸ್ ನಾಲ್ಕು ಸೋಲುಗಳು ಮತ್ತು ಒಂದು ಸಮಬಲದ ಸಾಧನೆಯೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಕಾಯ್ದುಕೊಂಡಿತು.
ಇದನ್ನೂ ಓದಿ: ಭಾರತ-ಆಸೀಸ್ ಪಂದ್ಯ ವೇಳೆ ತಪ್ಪಿದ ಭಾರೀ ಅನಾಹುತ: Suryakumar Yadav ಜಸ್ಟ್ ಮಿಸ್!
ಜಯದ ಖಾತೆ ತೆರೆಯಲು ಹಾತೊರೆಯುತ್ತಿರುವ ಪಾಟ್ನಾ ಪೈರೇಟ್ಸ್ ತಂಡ ತಮಿಳು ತಲೈವಾಸ್ ವಿರುದ್ಧದ ಪಂದ್ಯದ ಮೊದಲಾರ್ಧದಲ್ಲಿ 17-15 ಅಂತರದಲ್ಲಿ ಮುನ್ನಡೆಯಿತು. ರೈಡಿಂಗ್‌ನಲ್ಲಿ ತಲೈವಾಸ್‌ಗಿಂತ ಒಂದು ಅಂಕ (11-12) ಹಿನ್ನಡೆ ಕಂಡಿದ್ದರೂ ಪೈರೇಟ್ಸ್ ಟ್ಯಾಕಲ್‌ನಲ್ಲಿ 3 ಅಂಕ ಹಾಗೂ ಅಲೌಟ್ ಸಾಧನೆ ಮೂಲಕ ಮುನ್ನಡೆ ಕಂಡಿತು. ಪಾಟ್ನಾ ಪೈರೇಟ್ಸ್ ಪರ ರೋಹಿತ್ ಗುಲಿಯಾ ಯಶಸ್ವಿ ರೈಡರ್ ಎನಿಸಿದರು. ತಮಿಳು ತಲೈವಾಸ್ ಪರ ನರೆಂದರ್ ರೈಡಿಂಗ್‌ನಲ್ಲಿ ಮಿಂಚಿ ಉತ್ತಮ ಹೋರಾಟ ನೀಡುವಲ್ಲಿ ಶ್ರಮಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.