ನರ್ವಾಲ್, ಸುರೇದಂರ್ ಮಿಂಚಿನ ಆಟ:ಯೋಧಾಸ್‌ಗೆ ಶರಣಾದ ಬೆಂಗಳೂರು ಬುಲ್ಸ್‌

ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

Written by - VISHWANATH HARIHARA | Edited by - Manjunath N | Last Updated : Oct 17, 2022, 12:14 AM IST
  • ಬೆಂಗಳೂರು ಬುಲ್ಸ್‌ ಯಾವುದೇ ವಿಭಾಗದಲ್ಲೂ ಮಿಂಚುವಲ್ಲಿ ವಿಫಲವಾಗಿ ಪ್ರಥಮಾರ್ಧದಲ್ಲಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು.
  • ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ,
  • ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.
ನರ್ವಾಲ್, ಸುರೇದಂರ್ ಮಿಂಚಿನ ಆಟ:ಯೋಧಾಸ್‌ಗೆ ಶರಣಾದ ಬೆಂಗಳೂರು ಬುಲ್ಸ್‌ title=
Photo Courtsey: Twitter

ಬೆಂಗಳೂರು:  ವಿವೋ ಪ್ರೋ ಕಬಡ್ಡಿ ಲೀಗ್‌ನ ಭಾನುವಾರದ 2ನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧ 44-37 ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಪ್ರದೀಪ್‌ ನರ್ವಾಲ್‌ ಹಾಗೂ ಸುರೇಂದರ್‌ ಸಿಂಗ್‌ ತಲಾ 14 ಅಂಕಗಳನ್ನು ಗಳಿಸುವ ಮೂಲಕ ಜಯದ ಹಾದಿಯನ್ನು ಸುಗಮಗೊಳಿಸಿದರು. ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.

ಇದನ್ನೂ ಓದಿ : Pro Kabaddi 2022 Season 9 :ಪಿಂಕ್‌ ಪ್ಯಾಂಥರ್ಸ್‌, ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯರ್ಸ್‌ಗೆ ಜಯ

ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತೀಯಾರ್ಧ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್‌ ಪರ ವಿಕಾಸ್ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು. ಆದರೆ ಈ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ದ್ವಿತೀಯಾರ್ಧದ ಕೊನೆಯಲ್ಲಿ ಯುಪಿ ಯೋಧಾಸ್‌ ಪಡೆಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪ್ರಥಮಾರ್ಧದಲ್ಲಿ ಬೆಂಗಳೂರು ಎರಡು ಬಾರಿ ಆಲೌಟ್‌ ಆದದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿತು. 

ಇದನ್ನೂ ಓದಿ : T20 World Cup 2022: ಈ 3 ಆಟಗಾರರು ಟೀಂ ಇಂಡಿಯಾದಿಂದ ಔಟ್, ರೋಹಿತ್ ಶರ್ಮಾಗೆ ಟೆನ್ಷನ್!

ಯುಪಿ ಯೋಧಾಸ್‌ಗೆ ಬೃಹತ್‌ ಮುನ್ನಡೆ

ಸುರೇಂದರ್‌  ಹಾಗೂ ಪ್ರದೀಪ್‌ ನರ್ವಾಲ್‌ ಅದ್ಭುತ ರೈಡಿಂಗ್‌ ಅಂಕಗಳ ನೆರವಿನಿಂದ ಯುಪಿ ಯೋಧಾಸ್‌ ಪಡೆ ಬೆಂಗಳೂರು ಬುಲ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 26-12 ಅಂತರದ ಬೃಹತ್‌ ಮುನ್ನಡೆ ಪಡೆದಿತ್ತು. ಈ ಇಬ್ಬರು ಆಟಗಾರರು 16 ರೈಡಿಂಗ್‌ ಅಂಕಗಳನ್ನು ಗಳಿಸಿ, ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದರು. 5 ಟ್ಯಾಕಲ್‌ ಅಂಕಗಳ ಜೊತೆಯಲ್ಲಿ ಎರಡು ಬಾರಿ ಬೆಂಗಳೂರು ಬುಲ್ಸ್‌ ತಂಡವನ್ನು 3 ಬಾರಿ ಆಲೌಟ್‌ ಮಾಡುವ ಮೂಲಕ ಯುಪಿ ಯೋಧಾಸ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಬೆಂಗಳೂರು ಬುಲ್ಸ್‌ ಯಾವುದೇ ವಿಭಾಗದಲ್ಲೂ ಮಿಂಚುವಲ್ಲಿ ವಿಫಲವಾಗಿ ಪ್ರಥಮಾರ್ಧದಲ್ಲಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News