Virat Kohli Bullet Throw: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಫೀಲ್ಡಿಂಗ್ ವೇಳೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ರಾಕೆಟ್ ಎಸೆತದಲ್ಲಿ ಔಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Virat Kohli: ಮೈದಾನದಲ್ಲಿ ಹಾರಿ ಒಂದು ಕೈಯಲ್ಲಿ ಕ್ಯಾಚ್ ಹಿಡಿದ ವಿರಾಟ್: ‘ಮಿಂಚಿನ ಆಟ’ದ ವಿಡಿಯೋ ನೋಡಿ
ಕೊಹ್ಲಿಯ ರಾಕೆಟ್ ಥ್ರೋಗೆ ಕಂಗಾಲಾದ ಕಾಂಗಾರೂ ಪಡೆ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ 187 ರನ್ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ, ಕಾಂಗರೂಗಳ ತಂಡವು 18.1 ಓವರ್‌ಗಳವರೆಗೆ 171 ರನ್ ಗಳಿಸಿತ್ತು. ಅದಾಗಲೇ ಟೀಂ ಇಂಡಿಯಾ ಗೆಲುವನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಂಡಿತ್ತು. ಇನ್ನು 18 ನೇ ಓವರ್‌ನ ಎರಡನೇ ಎಸೆತದಲ್ಲಿ ವಿರಾಟ್ ಕೊಹ್ಲಿ ತಮ್ಮ ರಾಕೆಟ್ ಥ್ರೋ ಮೂಲಕ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ರನೌಟ್ ಮಾಡಿದರು. ಇದರ ವಿಡಿಯೋ ನೀವು ನೋಡಿ.
Catches Wins You The Matches
Best Example Is This Catch ,What A Catch That Was Kohli Woww 🔥
& his Fielding Is As Always Best
Better Than Anyone 🔥#INDvsAUS #CricketTwitter #AUSvsIND #ViratKohli #INDvsAUS pic.twitter.com/Qj7nOoEzmU— Ravi jakhar (@Ravi_jat_vbj) October 17, 2022
ಇದನ್ನೂ ಓದಿ: T20 World Cup: ಇದುವರೆಗೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳಿವು: ಭಾರತೀಯರದ್ದೇ ಮೇಲುಗೈ
ವಿರಾಟ್ ಕೊಹ್ಲಿ ತಮ್ಮ ಒಂದು ಕೈಯಿಂದ ಬುಲೆಟ್ ಥ್ರೋ ಮೂಲಕ ಟಿಮ್ ಡೇವಿಡ್ ಅವರನ್ನು ರನ್ ಔಟ್ ಮಾಡಿದರು. ಈ ಮೂಲಕ ಅವರ ಇನ್ನಿಂಗ್ಸ್ ಅನ್ನು 5 ರನ್ ಗಳಿಗೆ ಕೊನೆಗೊಳಿಸಿದರು. ಟಿಮ್ ಡೇವಿಡ್ ಅವರ ಆ ರನೌಟ್ ಬಹಳ ಮುಖ್ಯವಾದ ಸಮಯದಲ್ಲಿ ಬಂದಿದೆ ಎನ್ನಬಹುದು. ಏಕೆಂದರೆ ಟಿಮ್ ಡೇವಿಡ್ ಕ್ರೀಸ್‌ನಲ್ಲಿ ಉಳಿದಿದ್ದರೆ, ಅವರು ಆಸ್ಟ್ರೇಲಿಯಾಕ್ಕೆ ಜಯವನ್ನು ನೀಡುತ್ತಿದ್ದರು. ಕೊಹ್ಲಿಯವರ ಈ ಎಸೆತದಿಂದ ರನ್ ಔಟ್ ಆದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.